🔥 TRENDING KTR rules out BJP tie‑up ahead of 2028... Two Minors Allegedly Gang‑Raped in Odi... Odisha Launches Month‑Long ‘Seva Sanka... Student Group Navnirman Yuva Chhatra S... Punjab Kisan Mazdoor Morcha Issues 12‑... Barapullah Phase‑3 Residential Complex...
17 Sep 2026
ગુજરાતી मराठी ਪੰਜਾਬੀ বাংলা

ಸಿಂಧನೂರು ನಗರದ ವಿವಿಧ ಮಸೀದಿಗಳಲ್ಲಿ ಮಳೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು

✍️ Reporter: MAHAMAD WALI QURESHI 🗓 17 Sep 2026, 10:02 AM 👁 8
Watch on: ▶️ YouTube
Share: 💬 WhatsApp 📘 Facebook 𝕏 Post
ನಗರದ ವಿವಿಧ ಮಸೀದಿಗಳಲ್ಲಿ ಮಳೆಗಾಗಿ ವಿಶೇಷ ಪ್ರಾರ್ಥನೆ
ನೀಡ್ 24 ನ್ಯೂಸ್
ಸಿಂಧನೂರು: ಸಮೃದ್ಧಿ ಮಳೆಯಾಗಲೆಂದು ನಗರದ ಮುಸ್ಲಿಂ ಸ ಜಿಮಾಜದ ಮೌಲ್ವಿಗಳು ಹಾಗೂ ಮುಖಂಡರು 11 ದಿನಗಳ ವಿಶೇಷ ಪ್ರಾರ್ಥನೆ ಆರಂಭಿಸಿದ್ದಾರೆ.

ನಗರದ ವಿವಿಧ ಮಸೀದಿಗಳಲ್ಲಿ ಪ್ರತಿದಿನ ರಾತ್ರಿ 8 ಗಂಟೆಯ ನಮಾಜ್ ನಂತರ ಕುರ್‌ಆನ್ ಪಠಣ ಹಾಗೂ ಮಳೆಗಾಗಿ ವಿಶೇಷ ದುಆ (ಪ್ರಾರ್ಥನೆ) ನಡೆಯುತ್ತಿದೆ.

ಈಗಾಗಲೇ ನಗರದ ಕೋಟೆ ಏರಿಯಾ ಮಸೀದಿಯಲ್ಲಿ ಎರಡು ದಿನಗಳ ಕಾಲ ವಿಶೇಷ ಪ್ರಾರ್ಥನೆ ನಡೆಸಲಾಗಿದ್ದು, ಬಳಿಕ ಬಡಿಬೇಸ್ ಮಸೀದಿಯಲ್ಲೂ ಪ್ರಾರ್ಥನೆ ಮುಂದುವರಿದಿದೆ.

ಮುಂದಿನ 11 ದಿನಗಳ ಕಾಲ ಗಂಗಾನಗರ, ಎ.ಕೆ. ಗೋಪಾಲನಗರ ಸೇರಿದಂತೆ ನಗರದ ವಿವಿಧ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ನಡೆಯಲಿದೆ. 11ನೇ ದಿನ ನಗರದ ಈದ್ದಾ ಮೈದಾನದಲ್ಲಿ ಮುಸ್ಲಿಂ ಸಮಾಜದ ವತಿಯಿಂದ

ಸಾಮೂಹಿಕ ಪ್ರಾರ್ಥನೆ ಆಯೋಜಿಸಿ ಸಮೃದ್ಧಿ ಮಳೆಯಾಗಲೆಂದು ಪ್ರಾರ್ಥಿಸಲಾಗುವುದು ಎಂದು ಸಮಾಜದ ಮುಖಂಡ ಬಾಬರ್ ಪಟೇಲ್ ತಿಳಿಸಿದ್ದಾರೆ. ವಿಶೇಷ ಪ್ರಾರ್ಥನೆಯಲ್ಲಿ ಹಾಫೀಜ್ ಜಾಫರ್ ಸಿದ್ದಿಕಿ, ಮುಪ್ತಿ ಮಹರಾಜ್ ಅಹ್ಮದ್ ಖಾದ್ರಿ, ಮೌಲಾನಾ ಮೊಹಮ್ಮದ್ ವಲಿಪಾಷಾ, ಸೈಯದ್ ಮೈನುದ್ದೀನ್ ಖಾದ್ರಿ, ಸೈಯದ್ ತಾರೀಖ್ ಹುಸೇನಿ, ಸೈಯದ್ ಶಹಬಾಜ್ ಖಾದ್ರಿ, ಅನ್ಸ‌ರ್ ಪಾಷಾ, ಅಝರ್ ಹುಸೇನ್, ಸೈಯದ್ ಪೈಸಲ್ ಪಾಷಾ, ಸೈಯದ್ ನವೀದ್ ಖಾದ್ರಿ ಸೇರಿದಂತೆ ಅನೇಕರು ವಿಶೇಷ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದಾರೆ..
📲Get App