🔥 ट्रेंडिंग ગરમાળા ગામમાં ગણપતિ દાદાની આરતીમાં ભેગ... मिज़ोरम के मुख्यमंत्री लालदूहोमा ने बा... कांग्रेस ने पीएम मोदी पर हमला किया, सी... અમરેલીમાં નાગનાથ ગરબી મંડળ દ્વારા રિધ્... अरुणाचल प्रदेश के सीएम ने कहा, मोदी की... कांग्रेस ने पीएमा खांडू की मुख्यमंत्री...
18 सित. 2026
ગુજરાતી मराठी ਪੰਜਾਬੀ বাংলা

ದೇವದುರ್ಗ ಗಬ್ಬೂರು ಬೊಮ್ಮನಹಳ್ಳಿ ಅಕ್ರಮ ಮರಳು ಸಾಗಟ ರೈತರಿಗೆ ಸಂಕಟ ಅಧಿಕಾರಿಗಳು ಮೌನ ಮಲ್ಲಪ್ಪ ಗೌಡರು

✍️ रिपोर्टर: MAHAMAD WALI QURESHI 🗓 17 सित. 2026, 04:35 PM 👁 33
शेयर करें: 💬 WhatsApp 📘 Facebook 𝕏 Post
ಗಬ್ಬೂರುಮತ್ತು ಬೊಮ್ಮನಹಳ್ಳಿ ಅಕ್ರಮ ಮರಳು ಸಾಗಾಟ ರೈತರಿಗೆ ಸಂಕಟ ಅಧಿಕಾರಿಗಳು ಮೌನ : ಮಲ್ಲಪ್ಪ ಗೌಡೂರು

ನೀಡ್ 24 ನ್ಯೂಸ್

ರಾಯಚೂರು : ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಗಬ್ಬುರು ಹೋಬಳಿ ವ್ಯಾಪ್ತಿಯ ಬೊಮ್ಮನಹಳ್ಳಿ ಸೀಮಾಂತರದಲ್ಲಿ ಖಾಸಗಿ ಕಂಪನಿಯೊಂದು ಜಮೀನು ಖರೀದಿಸಿ ಸದರಿ ಜಮೀನಿನಲ್ಲಿ ರಾಯಲ್ಟಿ ಪಡೆದು ಮರಳುಗಾರಿಕೆ ಮಾಡಲು ಪ್ರಾರಂಭಿಸಿತ್ತು.

ಆದರೆ, ಸದರಿ ಜಮೀನಿನಲ್ಲಿ ಮರಳುಗಾರಿಕೆಗಾಗಿ ಪಡೆಯಲಾಗಿದ್ದ ರಾಯಲ್ಟಿ ಅವಧಿ ಮುಗಿದು ಸುಮಾರು ಆರು ತಿಂಗಳಾಗಿದ್ದರೂ ಸಹ ಅಕ್ರಮವಾಗಿ ಮರಳುಗಾರಿಕೆ ಮುಂದುವರೆಸಲಾಗಿದೆ.

ಬೊಮ್ಮನಹಳ್ಳಿ ಗ್ರಾಮದ ಹಳ್ಳವೊಂದರ ಪಕ್ಕದಲ್ಲಿ ಜಮೀನು ಇದ್ದು, ಹಳ್ಳದಲ್ಲಿ ಹರಿಯುವ ನೀರು ತಡೆದು ಜಮೀನ ಮಣ್ಣಿನಲ್ಲಿರುವ ಮರಳನ್ನು ಯಂತರದಿಂದ ಬೇರ್ಪಡಿಸುವ ಮರಳುಗಾರಿಕೆ ಮಾಡಲಾಗುತ್ತಿದ್ದು, ಇದಕ್ಕೆ ಹಳ್ಳದ

ನೀರು ಉಪಯೋಗಿಸುತ್ತಿರುವುದರಿಂದ ಉಪಯೋಗಿಸಿದ ನೀರಿನಹೊಂಡವನ್ನು ಅಕ್ಕ ಪಕ್ಕದ ಜಮೀನುಗಳಲ್ಲಿ ಹರಿದು ಅಲ್ಲಿ ಬೆಳೆದಂತರ ಬೆಳೆ ನಾಶವಾಗುತ್ತಿದೆ.

ಆದ್ದರಿಂದ ಬೊಮ್ಮನಹಳ್ಳಿ ಸೀಮಾಂತರದಲ್ಲಿ ಖಾಸಗಿ ಕಂಪನಿ ಅಲ್ಲಿನ ಹಳ್ಳದ ನೀರನ್ನು ಸಂಪೂರ್ಣ ಮಾಲೀನ್ಯ ಮಾಡುತ್ತಾ ಅಲ್ಲಿರುವ ಜಮೀನುಗಳಲ್ಲಿ

ಬೆಳೆದ ಬೆಳೆ ನಷ್ಟಪಡಿಸುತ್ತಾ ಅಕ್ರಮವಾಗಿ ಮರಳುಗಾರಿಕೆ ಮಾಡುತ್ತಿರುವುದರಿಂದ ಇದನ್ನು ತಡೆದು ಅವರ ವಿರುದ್ಧ ಪ್ರಕರಣ ದಾಖಲಿಸಿ ಸೂಕ್ತ ಕ್ರಮವಹಿಸಬೇಕೆಂದು ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಜಿಲ್ಲಾ ಸಮಿತಿ ರಾಯಚೂರು ಈ ಮೂಲಕ ತಮ್ಮ ಗಮನಕ್ಕೆ ತಂದು ಆಗ್ರಹಪಡಿಸುತ್ತಿದೆ.

ಒಂದು ವೇಳೆ ಜಿಲ್ಲಾಡಳಿತ ನಿರ್ಲಕ್ಷತನ ತೋರಿ ಮರಳು ಡಕ್ಕವನ್ನು ತೆರವುಗೊಳಿಸದಿದ್ದರೆ ನಮ್ಮ ಸಂಘಟನೆ ಯು ಜಿಲ್ಲಾಧಿಕಾರಿಗಳ ಕಾಯಾಲಯದ ಮುಂದೆ ಹೋರಾಟ ಮಾಡಲು ಮುಂದಾಗಬೇಕಾಗುತ್ತೆ, ಎಂದು ತಿಳಿಸಿದರು. ಈ ಸಂರ್ಭದಲ್ಲಿ ಮಲ್ಲಪ್ಪ ಗೌಡೂರು ಜಿಲ್ಲಾ ಅಧ್ಯಕ್ಷರು ಅಂಬೇಡ್ಕರ್ ಸ್ವಾಭೀಮಾನಿ ಸೇನೆ ರಾಯಚೂರು, ಅಂಬ್ರೆಷ್ ಯರಮಸ್, ಕ್ರಾಂತಿಕುಮಾರ್ ರಾಯಚೂ‌ರ್ ಕ‌ರ್, ದುರುಗಪ್ಪ ಸಮುದ್ರ, ಮತ್ತಿತರು ಬಾಗಿಯಾಗಿದ್ದರು..
📲Get App