🔥 TRENDING जैसलमेर में मौसम पर नजर: राजस्थान के 2... ભરૂચમાં મોટો અકસ્માત ટળ્યો: સાયખા GIDC... સુરત શહેર ક્રાઇમ બ્રાંચ SURAT CITY 3... New Zealand Parliament Approves Legisl... Dilapidated Classrooms in Odisha Schoo... Pigeon with ‘BAN’ tag seized in Odisha...
16 Sep 2026
ગુજરાતી मराठी ਪੰਜਾਬੀ বাংলা

ಹಿಂದೂ ಮಹಾಗಣಪತಿ ಸಮಿತಿಯಿಂದ ಓನಕೆ ಓಬವ್ವ ಭಾವಚಿತ್ರ ಅನಾವರಣ

✍️ Reporter: ಮಂಜುನಾಥ ಹೂಡೇಂ 🗓 16 Sep 2026, 10:34 AM 👁 11
Watch on: ▶️ YouTube
Share: 💬 WhatsApp 📘 Facebook 𝕏 Post

ಹುಣಸೆ ನಾಡಿನ ವೀರನಾರಿಗೆ ಕೂಡ್ಲಿಗಿಯಲ್ಲಿ ಗೌರವ

ಕೂಡ್ಲಿಗಿ: ಹುಣಸೆ ನಾಡಿನ ಮಣ್ಣಿನ ಮಗಳು, ನಾಡಿನ ಕೆಚ್ಚೆದೆಯ ವೀರ ಮಹಿಳೆ ಶ್ರೀಮತಿ ಓನಕೆ ಓಬವ್ವ ಅವರ ಶೌರ್ಯ, ಸಾಹಸ ಮತ್ತು ದೇಶಾಭಿಮಾನವನ್ನು ಸ್ಮರಿಸುವ ನಿಟ್ಟಿನಲ್ಲಿ ಕೂಡ್ಲಿಗಿ ನಗರದ ಹಿಂದೂ ಮಹಾಗಣಪತಿ ಸಮಿತಿ ವತಿಯಿಂದ ಓನಕೆ ಓಬವ್ವ ಅವರ ಭಾವಚಿತ್ರವನ್ನು ಅನಾವರಣಗೊಳಿಸಲಾಯಿತು.
ಪಟ್ಟಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೂಡ್ಲಿಗಿ ಡಿವೈಎಸ್ಪಿ ಮಲ್ಲೇಶ್ ದೊಡ್ಮನಿ ಹಾಗೂ ಸಿಪಿಐ ಪ್ರಹ್ಲಾದ ಆರ್. ಚನ್ನಗಿರಿ ಅವರು ಅಮೃತ ಹಸ್ತದಿಂದ ಓನಕೆ ಓಬವ್ವ ಅವರ ಭಾವಚಿತ್ರವನ್ನು ಅನಾವರಣಗೊಳಿಸಿ, ವೀರನಾರಿಗೆ ಗೌರವ ನಮನ ಸಲ್ಲಿಸಿದರು.
ಓನಕೆ ಓಬವ್ವ ಅವರು ತಮ್ಮ ಧೈರ್ಯ, ಸಮಯಪ್ರಜ್ಞೆ ಹಾಗೂ ದೇಶಾಭಿಮಾನದಿಂದ ಇತಿಹಾಸದಲ್ಲಿ ಅಚ್ಚಳಿಯದ ಸ್ಥಾನ ಪಡೆದಿದ್ದಾರೆ. ಅವರ ಸಾಹಸಗಾಥೆ ಇಂದಿನ ಯುವಜನತೆಗೆ ಧೈರ್ಯ, ದೇಶಪ್ರೇಮ ಮತ್ತು ಕರ್ತವ್ಯನಿಷ್ಠೆಯ ಸಂದೇಶ ನೀಡುತ್ತದೆ. ಇಂತಹ ವೀರ ಮಹಿಳೆಯರ ಇತಿಹಾಸವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂಬ ಅಭಿಪ್ರಾಯ ಕಾರ್ಯಕ್ರಮದಲ್ಲಿ ವ್ಯಕ್ತವಾಯಿತು.
ಈ ಸಂದರ್ಭದಲ್ಲಿ ವಕೀಲರಾದ ರಾಘವೇಂದ್ರ ಗುರಿಕಾರ, ಎಸ್. ವೆಂಕಟೇಶ, ಭೀಮಾ ಜಲ್ಸಾ, ಹಿಂದೂ ಮಹಾಗಣಪತಿ ಸಮಿತಿಯ ಸೋಮಣ್ಣ, ಶೇಷಾದ್ರಿ, ಗುರು, ಉಗ್ರಂ ಕಿಟ್ಟಿ, ಉಗ್ರಂ ಉಮೇಶ್, ಕಾವಲಿ, ಮಣಿ, ಮಾಳ್ಗಿ ರಾಘು ,ಮಂಜು ಮಾಳ್ಗಿ, ಬೊಸು, ಚಿನ್ನಿ, ನಾಗರಾಜ್, ವಿಷ್ಣು, ಆಕಾಶ, ವಿಶ್ವ, ಮಂಜು, ಅಭಿ, ಆಕಾಶ್ ಅಪ್ಪು, ಪಾರು, ಮಬ್ಬು, ಕೊಟ್ರೇಶ್, ಉದಯ್, ಸಂಜು, ಯೋಗಿ, ಕೊಟ್ರೇಶ್, ಲೋಕಿ, ರಾಘುಜುಗಲ್, ನಂದಿ, ಕಲ್ಲೇಶ್, ಅಜಯ್, ಉಷೆನ್, ಕಿರಣ, ಸಿದ್ದು ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.
📲Get App