🔥 ट्रेंडिंग औरैया जिला पंचायत अध्यक्ष कमल सिंह दोह... 8 મહિનાની સર્વોચ્ચ સપાટીએ મોંઘવારી: જથ... ગાંધીનગર CIDએ સુરતનું નકલી તેલ કારખાનુ... સુરતના ઉમરપાડા કોલેજમાં મેગા કેમ્પસ પ્... માંડવીમાં સેવા સંકલ્પ કળશનું આગમન, કેબ... સુરતમાં 112 ઇમરજન્સી સેવા હેઠળ 17 પોલી...
15 सित. 2026
ગુજરાતી मराठी ਪੰਜਾਬੀ বাংলা

ಗುರುಸುಣಗಿ ದೇವಸ್ಥಾನ ಪ್ರವೇಶಿಸಿದ ದಲಿತರ ಮೇಲೆ ಹಲ್ಲೆ: ಕಿಡಿಗೇಡಿಗಳನ್ನು ಬಂಧಿಸಿ ಗಡೀಪಾರು ಮಾಡಲು ಡಿಎಸ್‌ಎಸ್ ಮನವಿ

✍️ रिपोर्टर: Khajahussain baba Jalahalli 🗓 15 सित. 2026, 12:48 PM 👁 12
यहाँ देखें: ▶️ YouTube
शेयर करें: 💬 WhatsApp 📘 Facebook 𝕏 Post
📰 ರಾಯಚೂರು | ಬ್ರೇಕಿಂಗ್ ನ್ಯೂಸ್

ಗುರುಸುಣಗಿ ದೇವಸ್ಥಾನ ಪ್ರವೇಶಿಸಿದ ದಲಿತರ ಮೇಲೆ ಹಲ್ಲೆ: ಕಿಡಿಗೇಡಿಗಳನ್ನು ಬಂಧಿಸಿ ಗಡೀಪಾರು ಮಾಡಲು ಡಿಎಸ್‌ಎಸ್ ಮನವಿ

ರಾಯಚೂರು, ಸೆ.15: ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗುರುಸುಣಗಿ ಗುಡ್ಡದ ದೇವಸ್ಥಾನದಲ್ಲಿ ದರ್ಶನಕ್ಕಾಗಿ ಪ್ರವೇಶಿಸಿದ ದಲಿತರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿ, ಘಟನೆಗೆ ಕಾರಣರಾದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಂಡು, ಅವರನ್ನು ತಕ್ಷಣ ಬಂಧಿಸಬೇಕು ಹಾಗೂ ಗಡೀಪಾರು ಮಾಡಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ದಾದಾ ಸಾಹೇಬ್ ಎನ್. ಮೂರ್ತಿ ಸ್ಥಾಪಿತ) ರಾಯಚೂರು ಜಿಲ್ಲಾ ಸಮಿತಿ ಆಗ್ರಹಿಸಿದೆ.

ಈ ಕುರಿತು ರಾಯಚೂರು ತಹಶೀಲ್ದಾರ್‌ ಅವರ ಮೂಲಕ ರಾಜ್ಯದ ಗೃಹ ಸಚಿವರಾದ ಪ್ರಿಯಾಂಕ ಖರ್ಗೆ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಘಟನೆ ಕುರಿತು ಡಿಎಸ್‌ಎಸ್ ಆರೋಪ

ಗುರುಸುಣಗಿ ಗುಡ್ಡದ ದೇವಸ್ಥಾನದಲ್ಲಿ ದಲಿತರು ಪ್ರವೇಶಿಸುವುದನ್ನು ಕಾಯುತ್ತಾ ಕೆಲವರು ಪೂರ್ವಸಿದ್ಧತೆಯಿಂದ ಇದ್ದರು. ದಲಿತರು ದೇವಸ್ಥಾನದ ಒಳಗೆ ಪ್ರವೇಶಿಸಿದ ಸಂದರ್ಭದಲ್ಲಿ ಅವರನ್ನು ಹೊರಗೆ ಎಳೆದುಕೊಂಡು ಬಂದು ಬಡಿಗೆ ಹಾಗೂ ಕೈ-ಕಾಲುಗಳಿಂದ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ ಎಂದು ಸಮಿತಿ ಆರೋಪಿಸಿದೆ. ಈ ಕೃತ್ಯವನ್ನು ಸಮಿತಿ ತೀವ್ರವಾಗಿ ಖಂಡಿಸಿದೆ.

ಡಿಎಸ್‌ಎಸ್ ಪ್ರಮುಖ ಬೇಡಿಕೆಗಳು

* ಹಲ್ಲೆ ನಡೆಸಿದ ಎಲ್ಲರ ವಿರುದ್ಧ ತಕ್ಷಣ ಕ್ರಿಮಿನಲ್ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ (ಅಟ್ರಾಸಿಟಿ ಕಾಯ್ದೆ) ಅಡಿ ಪ್ರಕರಣ ದಾಖಲಿಸಬೇಕು.
* ಆರೋಪಿಗಳನ್ನು ಕೂಡಲೇ ಬಂಧಿಸಿ, ಕಾನೂನುಬದ್ಧವಾಗಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು.
* ಗ್ರಾಮಗಳಲ್ಲಿ ದಲಿತರ ಮೇಲೆ ಇಂತಹ ದೌರ್ಜನ್ಯಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಮುನ್ನೆಚ್ಚರಿಕಾ ಹಾಗೂ ಕಾನೂನು ಕ್ರಮ ಕೈಗೊಳ್ಳಬೇಕು.
* ಆಗಸ್ಟ್ ತಿಂಗಳಲ್ಲಿ ರಾಯಚೂರು ಜಿಲ್ಲೆಯ ಹದ್ದಿನಾಳ ಗ್ರಾಮದ ಭೂಮಾನಂದ ಕೊಲೆ, ಹೊಕ್ರಾಣಿ ಗ್ರಾಮದ ಅಶ್ವಿನ್ ಅತ್ಯಾಚಾರ–ಕೊಲೆ ಹಾಗೂ ಲಿಂಗಸುಗೂರು ತಾಲೂಕಿನ ಕರಡಕಲ್ ಗ್ರಾಮದ ರಾಣಮ್ಮ ಕೊಲೆ ಪ್ರಕರಣಗಳಲ್ಲಿಯೂ ಸರ್ಕಾರ ಮತ್ತು ಗೃಹ ಸಚಿವರು ಸೂಕ್ತ ತನಿಖೆ ನಡೆಸಿ, ಸಂತ್ರಸ್ತ ಕುಟುಂಬಗಳಿಗೆ ನ್ಯಾಯ ಹಾಗೂ ರಕ್ಷಣೆ ಒದಗಿಸಬೇಕು.
* ದಲಿತರ ಮೇಲಿನ ದೌರ್ಜನ್ಯಗಳಿಗೆ ಕಡಿವಾಣ ಹಾಕಲು ಕಠಿಣ ಕಾನೂನು ಕ್ರಮ ಜರುಗಿಸಬೇಕು. ಇಂತಹ ಘಟನೆಗಳಿಗೆ ಕಡಿವಾಣ ಹಾಕದಿದ್ದರೆ ಮುಂದೆಯೂ ದೌರ್ಜನ್ಯಗಳು ಮರುಕಳಿಸುವ ಸಾಧ್ಯತೆ ಇದೆ ಎಂದು ಸಮಿತಿ ಎಚ್ಚರಿಸಿದೆ.

ಮನವಿ ಸಲ್ಲಿಸುವ ಸಂದರ್ಭದಲ್ಲಿ ಡಿಎಸ್‌ಎಸ್ ಜಿಲ್ಲಾ ಉಪಾಧ್ಯಕ್ಷ ಬಸವರಾಜ ನಾಡಂಗಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಯೇಸು ಬಿಜನಗೇರಾ, ತಾಲೂಕು ಅಧ್ಯಕ್ಷ ಬಷೀರ್ ಅಹಮ್ಮದ್, ದಲಿತ ಮುಖಂಡರಾದ ಅಂಜಿನಯ್ಯ ಉಟೂರು, ಮಂಜು ಅಬ್ರಹಾಂ, ಧರ್ಮಲಿಂಗ ಕುರ್ವಕುರ್ದಾ, ಕೆ.ಎಚ್. ರಾಜಪ್ಪ ತಳವಾರ, ಮಲ್ಲೇಶ ಸಿಂಗ್ರಿ ಸುಲ್ತಾನಪೂರ, ತಿಮ್ಮಪ್ಪ ವಡವಾಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವರದಿ: ಖಾಜಾ ಹುಸೇನ್ ಬಾಬಾ, ಜಾಲಹಳ್ಳಿ
📲Get App