🔥 TRENDING વિશ્વ આદિવાસી અધિકાર દિવસ પર રાજપારડીમ... Sheikh Rabiul Haque's 80-Year Creative... Manhunt Launched After Targeted Shooti... David Fincher Releases Trailer for 'Th... Congress Criticises Modi Over Post‑Xi... Indian Army Wraps Up Agniveer Recruitm...
13 Sep 2026
ગુજરાતી मराठी ਪੰਜਾਬੀ বাংলা

ಸಚಿವ ಸತೀಶ್ ಜಾರಕಿಹೊಳಿ ವಿರುದ್ಧದ ರಾಜಕೀಯ ಷಡ್ಯಂತ್ರವನ್ನು ಮಟ್ಟ ಹಾಕಲು ಒಗ್ಗಟ್ಟಾಗಿ: ಕೆ ಪಿ ಸಿ ಸಿ ರಾಜ್ಯ ಸಂಯೋಜಕರಾದ ವೇಣುಗೋಪಾಲಗೌಡ ಕರೆ ವಾಲ್ಮೀಕಿ ಹಾಗೂ ಅಹಿಂದ ಸಮುದಾಯಗಳ ಮುಖಂಡರು, ಕಾಂಗ್ರೆಸ್ ಕಾರ್ಯಕರ್ತರಿಗೆ ಸಚಿವರ ಪರ ಧ್ವನಿ ಎತ್ತುವಂತೆ ಕರೆ

✍️ Reporter: Khajahussain baba Jalahalli 🗓 13 Sep 2026, 08:55 PM 👁 19
Share: 💬 WhatsApp 📘 Facebook 𝕏 Post
📰 ಜಾಲಹಳ್ಳಿ–ದೇವದುರ್ಗ | ಬ್ರೇಕಿಂಗ್ ನ್ಯೂಸ್

ಸಚಿವ ಸತೀಶ್ ಜಾರಕಿಹೊಳಿ ವಿರುದ್ಧದ ರಾಜಕೀಯ ಷಡ್ಯಂತ್ರವನ್ನು ಮಟ್ಟ ಹಾಕಲು ಒಗ್ಗಟ್ಟಾಗಿ: ಕೆ ಪಿ ಸಿ ಸಿ ರಾಜ್ಯ ಸಂಯೋಜಕರಾದ ವೇಣುಗೋಪಾಲಗೌಡ ಕರೆ

ವಾಲ್ಮೀಕಿ ಹಾಗೂ ಅಹಿಂದ ಸಮುದಾಯಗಳ ಮುಖಂಡರು, ಕಾಂಗ್ರೆಸ್ ಕಾರ್ಯಕರ್ತರಿಗೆ ಸಚಿವರ ಪರ ಧ್ವನಿ ಎತ್ತುವಂತೆ ಕರೆ

ಜಾಲಹಳ್ಳಿ, ಸೆ.13: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ವಿರುದ್ಧ ನಡೆಯುತ್ತಿರುವ ಬೆಳವಣಿಗೆಗಳು ರಾಜಕೀಯ ಪ್ರೇರಿತವಾಗಿದ್ದು, ಇಂತಹ ಷಡ್ಯಂತ್ರಗಳನ್ನು ಎದುರಿಸಲು ವಾಲ್ಮೀಕಿ ಹಾಗೂ ಅಹಿಂದ ಸಮುದಾಯಗಳ ಮುಖಂಡರು ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಸಚಿವರ ಪರವಾಗಿ ಧ್ವನಿ ಎತ್ತಬೇಕು ಎಂದು ಕೆಪಿಸಿಸಿ ರಾಜ್ಯ ಸಂಯೋಜಕ ಹಾಗೂ ವಕೀಲರಾದ ವೇಣುಗೋಪಾಲಗೌಡ ಅವರು ಕರೆ ನೀಡಿದರು.

ಈ ಕುರಿತು ಮಾತನಾಡಿದ ಅವರು, “ದ್ರೋಹದ ಪ್ರಶ್ನೆಯೇ ಇಲ್ಲ. ಬೇಡರ ರಕ್ತದಲ್ಲಿ ನಂಬಿದವರಿಗೆ ರಕ್ಷಣೆ ಮಾಡುವ ಗುಣವಿದೆ; ದ್ರೋಹ ಮಾಡುವ ಪ್ರಶ್ನೆಯೇ ಇಲ್ಲ” ಎಂದು ಹೇಳಿದರು.

ಸಚಿವ ಸತೀಶ್ ಜಾರಕಿಹೊಳಿ ಅವರ ವಿರುದ್ಧ ನಡೆಯುತ್ತಿರುವ ಪ್ರಸ್ತುತ ಬೆಳವಣಿಗೆಗಳು ಹಾಗೂ ತನಿಖೆಗಳ ಹಿಂದೆ ರಾಜಕೀಯ ಪ್ರೇರಿತ ಷಡ್ಯಂತ್ರವಿದೆ ಎಂದು ಆರೋಪಿಸಿದ ವಕೀಲರಾದ ವೇಣುಗೋಪಾಲಗೌಡ ರಾಜ್ಯ ಸಂಯೋಜಕ ಕೆ ಪಿ ಸಿ ಸಿ ಬೆಂಗಳೂರು ಅವರು, ವಾಲ್ಮೀಕಿ ಮತ್ತು ಅಹಿಂದ ಸಮುದಾಯಗಳ ಮುಖಂಡರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಸಚಿವರ ಬೆಂಬಲಕ್ಕೆ ನಿಂತು, ರಾಜಕೀಯ ಷಡ್ಯಂತ್ರಗಳ ವಿರುದ್ಧ ಒಗ್ಗಟ್ಟನ್ನು ಪ್ರದರ್ಶಿಸಬೇಕು ಎಂದು ಮನವಿ ಮಾಡಿದರು.

ಸಚಿವರ ಪರವಾಗಿ ಜನರು ಮತ್ತು ಪಕ್ಷದ ಕಾರ್ಯಕರ್ತರು ಸಂಘಟಿತರಾಗಿ ನಿಲ್ಲುವ ಮೂಲಕ ಸತ್ಯಕ್ಕೆ ಬೆಂಬಲ ನೀಡಬೇಕು ಎಂದು ಅವರು ಅಭಿಪ್ರಾಯಪಟ್ಟರು.

ವರದಿ: ಖಾಜಾ ಹುಸೇನ್ ಬಾಬಾ, ಜಾಲಹಳ್ಳಿ
📲Get App