🔥 TRENDING डिप्टी साहब लालसोट व तहसीलदार लालसोट व... Road Accident Victim in Delhi to Recei... Committee Formed to Probe Irregulariti... Students Forced to Wait Until 8 PM for... ಆಶಾ ಕಾರ್ಯಕರ್ತೆಯರ ಅನಿರ್ದಿಷ್ಟಾವಧಿ ಅಹೋರಾತ... CM Dr. Mohan Yadav virtually inaugurat...
17 Nov 2026•
ગુજરાતી मराठी ਪੰਜਾਬੀ বাংলা

ಹೊರಗುತ್ತಿಗೆ ನೌಕರರ ಬಾಕಿ ವೇತನ ಮತ್ತು PF ESI ಪಾವತಿಗಾಗಿ ರಾಯಚೂರಿನಲ್ಲಿ ಧರಣಿ - ಜಿಲ್ಲಾ ಆರೋಗ್ಯ ಅಧಿಕಾರಿಗಳ ಲಿಖಿತ ಭರವಸೆ - ಹೋರಾಟ ತಾತ್ಕಾಲಿಕವಾಗಿ ಮುಂದೂಡಿಕೆ - ನ.20 ರೊಳಗೆ ಪಾವತಿಗೆ ಗುತ್ತಿಗೆದಾರರ ಒಪ್ಪಿಗೆ

✍️ Reporter: Ningappa 🗓 17 Nov 2026, 09:54 PM 👁 17
Share: 💬 WhatsApp 📘 Facebook 𝕏 Post

ಹೊರಗುತ್ತಿಗೆ ನೌಕರರ ಬಾಕಿ ವೇತನ ಮತ್ತು PF ESI ಪಾವತಿಗಾಗಿ ರಾಯಚೂರಿನಲ್ಲಿ ಧರಣಿ - TUCI ವತಿಯಿಂದ ಜಿಲ್ಲಾ ಆರೋಗ್ಯ ಅಧಿಕಾರಿಗಳ ಕಚೇರಿ ಮುಂದೆ ಅನಿರ್ದಿಷ್ಟ ಧರಣಿ - ನ.20 ರೊಳಗೆ ಬಾಕಿ ವೇತನ, PF ESI ಪಾವತಿಗೆ ಗುತ್ತಿಗೆದಾರರ ಒಪ್ಪಿಗೆ, ಜಿಲ್ಲಾ ವೈದ್ಯಾಧಿಕಾರಿಗಳ ಲಿಖಿತ ಭರವಸೆ - ಹೋರಾಟ ತಾತ್ಕಾಲಿಕವಾಗಿ ಮುಂದೂಡಿಕೆ

ಹೊರಗುತ್ತಿಗೆ ನೌಕರರ ಬಾಕಿ ವೇತನ ಮತ್ತು PF ESI ಪಾವತಿಗಾಗಿ ರಾಯಚೂರಿನಲ್ಲಿ ಧರಣಿ - ಜಿಲ್ಲಾ ಆರೋಗ್ಯ ಅಧಿಕಾರಿಗಳ ಲಿಖಿತ ಭರವಸೆ

ರರಾಯಚೂರು: ಜಿಲ್ಲೆಯ ಆರೋಗ್ಯ ಇಲಾಖೆಯ ಪ್ರಾಥಮಿಕ / ಸಮುದಾಯ ಆರೋಗ್ಯ ಕೇಂದ್ರಗಳು ಹಾಗೂ ಆಸ್ಪತ್ರೆಗಳಲ್ಲಿ ನೂರಾರು ಜನ ಸಿ ಮತ್ತು ಡಿ ಗ್ರೂಪ್ ಹೊರಗುತ್ತಿಗೆ ನೌಕರರು ಹಗಲಿರುಳು ದುಡಿಯುತ್ತಿದ್ದರೂ, ಅವರಿಗೆ ಬರಬೇಕಾದ ಬಾಕಿ ವೇತನವನ್ನು ಪಾವತಿಸದೆ ಗುತ್ತಿಗೆ ಏಜೆನ್ಸಿಗಳು ಮತ್ತು ಅಧಿಕಾರಿಗಳು ಸತತವಾಗಿ ಅನ್ಯಾಯವೆಸಗುತ್ತಿದ್ದಾರೆ ಎಂದು ಆರೋಪಿಸಿ, ರಾಯಚೂರು ಜಿಲ್ಲಾ ಆರೋಗ್ಯ ಇಲಾಖೆ ಸಿ ಮತ್ತು ಡಿ ಗ್ರೂಪ್ ಹೊರಗುತ್ತಿಗೆ ನೌಕರರ ಸಂಘ TUCI ವತಿಯಿಂದ ಇಂದು 16-11-2026 ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯ ರಾಯಚೂರಿನಲ್ಲಿ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಪ್ರತಿಭಟನೆ ಶುರು ಮಾಡಲಾಯಿತು.

ಹೋರಾಟವನ್ನು ಉದ್ದೇಶಿಸಿ TUCI ಜಿಲ್ಲಾಧ್ಯಕ್ಷರು ಜಿ ಅಡವಿರಾವ್ ಅವರು ಮಾತನಾಡಿ, ಕಾರ್ಮಿಕರ ಬೆವರಿನ ಫಲವನ್ನು ಕಸಿದುಕೊಳ್ಳಲು ಬಿಡುವುದಿಲ್ಲ, ಬೇಡಿಕೆಗಳು ಈಡೇರುವವರೆಗೂ ಹೋರಾಟ ಮುಂದುವರಿಯಲಿದೆ ಎಂದು ಎಚ್ಚರಿಸಿದರು.

ನಂತರ ತುರ್ತು ಸಭೆಯನ್ನು ಕರೆದು 20 ನವೆಂಬರ್ 2026ರ ವರೆಗೆ ಎಲ್ಲಾ ಕಾರ್ಮಿಕರ ಬಾಕಿ ವೇತನ ಹಾಗೂ PF ESI ವೇತನ ಚೀಟಿಯ ಜೊತೆಗೆ ಪಾವತಿ ಮಾಡುತ್ತೇವೆಂದು M/s ಪಾಪುಲರ್ ಏಜೆನ್ಸಿ ಗುತ್ತಿಗೆದಾರರು ಕಾರ್ಮಿಕ ಸಂಘಟನೆ ಮತ್ತು ಜಿಲ್ಲಾ ವೈದ್ಯಾಧಿಕಾರಿಗಳ ಮುಂದೆ ಒಪ್ಪಿಕೊಂಡಿದ್ದಾರೆ.

ಈ ಸಭೆಯಲ್ಲಿ ಜಿಲ್ಲಾ ವೈದ್ಯಾಧಿಕಾರಿಗಳು, ಜಿಲ್ಲಾ ಪಂಚಾಯತ ಅಧಿಕಾರಿಗಳು ರಾಯಚೂರು, ಸಿಪಿಐ ಸದರಬಜಾರ್ ಠಾಣೆ, ಸಿಪಿಐ ಪಶ್ಚಿಮ ಪೊಲೀಸ್ ಠಾಣೆ, ಪಾಪುಲರ್ ಮತ್ತು ಸ್ವಿಸ್ ಏಜೆನ್ಸಿಗಳ ಗುತ್ತಿಗೆದಾರರು ಹಾಗೂ ಕಾರ್ಮಿಕ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ನಂತರ ಜಿಲ್ಲಾ ವೈದ್ಯಾಧಿಕಾರಿಗಳು ಧರಣಿ ಸ್ಥಳಕ್ಕೆ ಬಂದು ಸಭೆಯ ನಡುವಳಿಗಳಾದ 20ನೇ ನವೆಂಬರ್ 2026 ತಾರೀಕಿನ ವರೆಗೆ ಗುತ್ತಿಗೆದಾರರು ಬಾಕಿ ವೇತನ ಮತ್ತು PF ESI ಪಾವತಿಸುವಲ್ಲಿ ವಿಫಲರಾದರೆ ಅವರ ವಿರುದ್ಧ ಕಾನೂನಾತ್ಮಕವಾಗಿ ಕ್ರಮ ಜರುಗಿಸಲಾಗುವುದೆಂದು ಲಿಖಿತ ಪತ್ರವನ್ನು ಕಾರ್ಮಿಕ ಮುಖಂಡರಿಗೆ ಸಲ್ಲಿಸಿದರು.

ನಂತರ ಕಾರ್ಮಿಕರೊಂದಿಗೆ ಕಾರ್ಮಿಕ ಸಂಘಟನೆ ಚರ್ಚೆ ನಡೆಸಿ ತಾತ್ಕಾಲಿಕವಾಗಿ ಧರಣಿಯನ್ನು ಹಿಂಪಡೆಯಲಾಯಿತು. ಒಂದು ವೇಳೆ ದಿನಾಂಕ 20/11/2026ರ ವರೆಗೆ ನೀಡಿದ ಗಡುವು ಮೀರಿದರೆ ಮತ್ತೆ ರಾಯಚೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯ ಮುಂದೆ ಅನಿರ್ದಿಷ್ಟ ಧರಣಿ ಹೋರಾಟ ನಡೆಸಲಾಗುವುದು ಎಂದು ಸಂಘಟನೆ ತಿಳಿಸಿದೆ.

ಪ್ರಮುಖ ಬೇಡಿಕೆಗಳು:
1. ಬಾಕಿ ಇರುವ ಸಂಪೂರ್ಣ ವೇತನವನ್ನು ತಕ್ಷಣ ಪಾವತಿಸಬೇಕು ಹಾಗೂ ತಡೆಹಿಡಿದ ಪರಿಷ್ಕೃತ ವೇತನವನ್ನು ಕೂಡಲೇ ಜಾರಿಗೊಳಿಸಬೇಕು.
2. ದಶಕಗಳಿಂದ ಸೇವೆ ಸಲ್ಲಿಸುತ್ತಿರುವ ಹೊರಗುತ್ತಿಗೆ ನೌಕರರಿಗೆ ಉದ್ಯೋಗ ಭದ್ರತೆ ಒದಗಿಸಬೇಕು.
3. ಖಾಯಂ ನೇಮಕಾತಿಯ ನೆಪವೊಡ್ಡಿ ನೌಕರರನ್ನು ಏಕಾಏಕಿ ವಜಾಗೊಳಿಸುವುದನ್ನು ನಿಲ್ಲಿಸಬೇಕು.
4. ಪ್ರತಿಯೊಬ್ಬ ನೌಕರನಿಗೂ ಕಡ್ಡಾಯವಾಗಿ PF ಹಾಗೂ ESI ಸೌಲಭ್ಯಗಳನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು.
📲Get App