🔥 TRENDING Vijay Sethupathi Becomes First South I... Ayan Mukerji Says Financial Constraint... Assam CM Himanta Biswa Sarma vows to s... Jiiva's 'Thagappan' Gets U/A 13+ Certi... Assam CM Inaugurates ₹750-Crore Pharma... Salman Khan Movie Shoot Causes Traffic...
25 Nov 2026•
ગુજરાતી मराठी ਪੰਜਾਬੀ বাংলা
Business

ಬೀದರ್‍ತಾಲ್ಲೂಕಿನಚಿಕ್ಕಪೇಟೆ ಸಮೀಪದ ಬೀದರ್‍ಡೇರಿಯಲ್ಲಿರಾಜ್ಯಮಟ್ಟದ ಸಹಕಾರರತ್ನ ಪ್ರಶಸ್ತಿ ಪುರಸ್ಕøತ ಮಲ್ಲಿಕಾರ್ಜುನ ಬಿರಾದಾರಅವರನ್ನು ಸನ್ಮಾನಿಸಲಾಯಿತು

✍️ Reporter: Basavaraj pujari 🗓 25 Nov 2026, 06:46 AM 👁 13
Share: 💬 WhatsApp 📘 Facebook 𝕏 Post

ಬೀದರ್‍ತಾಲ್ಲೂಕಿನಚಿಕ್ಕಪೇಟೆ ಸಮೀಪದ ಬೀದರ್‍ಡೇರಿಯಲ್ಲಿ ನಡೆದರಾಜ್ಯಮಟ್ಟದ ಸಹಕಾರರತ್ನ ಪ್ರಶಸ್ತಿ ಪುರಸ್ಕøತ ಮಲ್ಲಿಕಾರ್ಜುನ ಬಿರಾದಾರಅವರಅಭಿನಂದನಾ ಸಮಾರಂಭವನ್ನು ಡಿಸಿಸಿ ಬ್ಯಾಂಕ್‍ಉಪಾಧ್ಯಕ್ಷಅಭಿಷೇಕ ಪಾಟೀಲ ಉದ್ಘಾಟಿಸಿ

ಬೀದರ್‍ತಾಲ್ಲೂಕಿನಚಿಕ್ಕಪೇಟೆ ಸಮೀಪದ ಬೀದರ್‍ಡೇರಿಯಲ್ಲಿರಾಜ್ಯಮಟ್ಟದ ಸಹಕಾರರತ್ನ ಪ್ರಶಸ್ತಿ ಪುರಸ್ಕøತ ಮಲ್ಲಿಕಾರ್ಜುನ ಬಿರಾದಾರಅವರನ್ನು ಸನ್ಮಾನಿಸಲಾಯಿತು

ಬೀದರ್‍ತಾಲ್ಲೂಕಿನಚಿಕ್ಕಪೇಟೆ ಸಮೀಪದ ಬೀದರ್‍ಡೇರಿಯಲ್ಲಿ ನಡೆದರಾಜ್ಯಮಟ್ಟದ ಸಹಕಾರರತ್ನ ಪ್ರಶಸ್ತಿ ಪುರಸ್ಕøತ ಮಲ್ಲಿಕಾರ್ಜುನ ಬಿರಾದಾರಅವರಅಭಿನಂದನಾ ಸಮಾರಂಭವನ್ನು ಡಿಸಿಸಿ ಬ್ಯಾಂಕ್‍ಉಪಾಧ್ಯಕ್ಷಅಭಿಷೇಕ ಪಾಟೀಲ ಉದ್ಘಾಟಿಸಿದರು


ಅಭಿನಂದನಾ ಸಮಾರಂಭದಲ್ಲಿ ಡಿಸಿಸಿ ಬ್ಯಾಂಕ್‍ಉಪಾಧ್ಯಕ್ಷಅಭಿಷೇಕ ಪಾಟೀಲ ಹೇಳಿಕೆ

ಸಹಕಾರಕ್ಷೇತ್ರಕ್ಕೆ ಮಲ್ಲಿಕಾರ್ಜುನ ಬಿರಾದಾರಕೊಡುಗೆಅನನ್ಯ

ಬೀದರ್: ಸಹಕಾರಕ್ಷೇತ್ರಕ್ಕೆ ಮಲ್ಲಿಕಾರ್ಜುನ ಬಿರಾದಾರ (ಪರಿಹಾರ) ಅವರಕೊಡುಗೆಅನನ್ಯವಾಗಿದೆಎಂದುಜಿಲ್ಲಾ ಸಹಕಾರಕೇಂದ್ರ ಬ್ಯಾಂಕ್‍ಉಪಾಧ್ಯಕ್ಷಅಭಿಷೇಕಆರ್. ಪಾಟೀಲ ಹೇಳಿದರು.
ತಾಲ್ಲೂಕಿನಚಿಕ್ಕಪೇಟೆ ಸಮೀಪದ ಬೀದರ್-ಕಲಬುರಗಿ-ಯಾದಗಿರಿ ಹಾಲು ಒಕ್ಕೂಟದ ಬೀದರ್‍ಡೇರಿಯಲ್ಲಿರಾಜ್ಯಮಟ್ಟದ ಸಹಕಾರರತ್ನ ಪ್ರಶಸ್ತಿ ಪಡೆದ ಪ್ರಯುಕ್ತ ಕಲಬುರಗಿ-ಬೀದರ್-ಯಾದಗಿರಿ ಹಾಲು ಒಕ್ಕೂಟದ ಮಾಜಿಅಧ್ಯಕ್ಷ ಹಾಗೂ ಹಾಲಿ ನಿರ್ದೇಶಕ ಮಲ್ಲಿಕಾರ್ಜುನ ಬಿರಾದಾರಅವರಿಗೆ ಸೋಮವಾರ ಏರ್ಪಡಿಸಿದ್ದ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಒಕ್ಕೂಟದಅಧ್ಯಕ್ಷರಾಗಿ, ನಿರ್ದೇಶಕರಾಗಿಉತ್ತಮವಾಗಿಕಾರ್ಯ ನಿರ್ವಹಿಸಿದ್ದಾರೆ.ಕಲ್ಯಾಣಕರ್ನಾಟಕ ಭಾಗದಲ್ಲಿ ಹೈನುಗಾರಿಕೆಅಭಿವೃದ್ಧಿಗೆ ಶ್ರಮಿಸಿದ್ದಾರೆ.ಸಹಕಾರಕ್ಷೇತ್ರಕ್ಕೆ ಸಲ್ಲಿಸಿದ ಗಣನೀಯ ಸೇವೆಗಾಗಿ ಅವರಿಗೆ ಸರ್ಕಾರರಾಜ್ಯಮಟ್ಟದ ಸಹಕಾರರತ್ನ ಪ್ರಶಸ್ತಿ ನೀಡಿ ಗೌರವಿಸಿರುವುದು ಅತ್ಯಂತ ಸೂಕ್ತವಾಗಿದೆ.ಸಹಕಾರಕ್ಷೇತ್ರಕ್ಕೆಅವರಇನ್ನೂ ಹೆಚ್ಚಿನ ಸೇವೆಯಅವಶ್ಯಕತೆಇದೆಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಒಕ್ಕೂಟದ ಮಾಜಿಅಧ್ಯಕ್ಷ ಹಾಗೂ ಹಾಲಿ ನಿರ್ದೇಶಕ ರೇವಣಸಿದ್ದಪ್ಪ ಪಾಟೀಲ ಮಾತನಾಡಿ, ಬಿರಾದಾರಅವರುಐದನೇ ಬಾರಿಒಕ್ಕೂಟದ ನಿರ್ದೇಶಕರಾಗಿದ್ದಾರೆ.ತಮಗೆದೊರೆತಅವಕಾಶವನ್ನುಒಕ್ಕೂಟದ ಪ್ರಗತಿ ಹಾಗೂ ಹಾಲು ಉತ್ಪಾದಕರಕಲ್ಯಾಣಕ್ಕೆ ಬಳಸಿದ್ದಾರೆ ಎಂದು ತಿಳಿಸಿದರು.
ಅಭಿನಂದನಾ ಸಮಾರಂಭದಲ್ಲಿ ಸೇರಿರುವಜನಸಮೂಹಅವರ ಬಗೆಗಿನ ಜನರ ಪ್ರತಿ, ವಿಶ್ವಾಸ ಹಾಗೂ ಅಭಿಮಾನಕ್ಕೆ ಸಾಕ್ಷಿಯಾಗಿದೆಎಂದು ಹೇಳಿದರು.
ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರವಿಕಿರಣ್ ಮಾತನಾಡಿ, ಬಿರಾದಾರಅವರು ಈ ಭಾಗದ ಮುಂಚೂಣಿ ಸಹಕಾರಿಗಳಲ್ಲಿ ಒಬ್ಬರಾಗಿದ್ದಾರೆ.ಸಮಾಜಕ್ಕೆಕೊಡುಗೆ ನೀಡಬೇಕೆಂಬ ತುಡಿತಅವರಲ್ಲಿದೆಎಂದು ತಿಳಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಮಲ್ಲಿಕಾರ್ಜುನ ಬಿರಾದಾರ(ಪರಿಹಾರ) ಅವರು, ನಾನು ಸಹಕಾರ ಚಳವಳಿಯಿಂದಲೇ ಬೆಳೆದು ಬಂದಿದ್ದೇನೆ. ಅದರ ಫಲವಾಗಿಯೇ ನನಗೆ ಒಮ್ಮೆ ಸರ್ಕಾರದ ನಾಮ ನಿರ್ದೇಶನ ಸೇರಿಐದನೇ ಬಾರಿ ಕಲಬುರಗಿ-ಬೀದರ್-ಯಾದಗಿರಿ ಹಾಲು ಒಕ್ಕೂಟದ ನಿರ್ದೇಶಕನಾಗಿ ಸೇವೆ ಸಲ್ಲಿಸುವ ಅವಕಾಶ ದೊರೆತಿದೆಎಂದು ಹೇಳಿದರು.
ಒಕ್ಕೂಟದಅಧ್ಯಕ್ಷನಾಗಿದ್ದಅವಧಿಯಲ್ಲಿ ಈ ಭಾಗದಲ್ಲಿ ಹಾಲು ಸಂಗ್ರಹ ಹೆಚ್ಚಳಕ್ಕೆ ಶ್ರಮಿಸಿದ್ದೇನೆ. ಅನೇಕ ಹಾಲು ಉತ್ಫಾದಕರಕಲ್ಯಾಣದಕಲ್ಯಾಣದ ಅನೇಕ ಯೋಜನೆಜಾರಿಗೆತಂದುರೈತರಿಗೆ ಅನುಕೂಲ ಮಾಡಿಕೊಟ್ಟಿದ್ದೇವೆ.
ಸಹಕಾರಕ್ಷೇತ್ರಕ್ಕೆ ನೀಡಿದಕೊಡುಗೆಗಾಗಿ ಪ್ರಶಸ್ತಿ ಬಂದಿರುವುದು ಸಂತಸಉಂಟು ಮಾಡಿದೆ.ಜತೆಗೆ ನನ್ನಜವಾಬ್ದಾರಿಯನ್ನು ಹೆಚ್ಚಿಸಿದೆ. ಸಹಕಾರಕ್ಷೇತ್ರಕ್ಕೆಇನ್ನೂ ಹೆಚ್ಚಿನಕೊಡುಗೆ ನೀಡಲು ಪ್ರಯತ್ನಿಸುವೆಎಂದು ತಿಳಿಸಿದರು.
ಸಹಕಾರ ಸಂಘಗಳ ಸಹಾಯಕ ನಿಬಂಧಕಿಡಾ. ನೀಲಾಂಬಿಕಾ, ಕಲಬುರಗಿ-ಬೀದರ್-ಯಾದಗಿರಿ ಹಾಲು ಒಕ್ಕೂಟದ ನಿರ್ದೇಶಕರಾದ ಬಂಡುರಾವ್‍ಕುಲಕರ್ಣಿ, ಭೀಮರಾವ್ ಬಳತೆ, ನಾಗರಾಜ ಪಾಟೀಲ, ಸಂತೋಷ್ ಪಾಟೀಲ, ಮಾಜಿ ನಿರ್ದೇಶಕ ಶ್ರೀಕಾಂತ ದಾನಿ, ರಾಜ್ಯ ಸರ್ಕಾರಿ ನೌಕರರ ಸಂಘದಜಿಲ್ಲಾಘಟಕದಅಧ್ಯಕ್ಷ ಸೋಮಶೇಖರ ಬಿರಾದಾರಚಿದ್ರಿ, ಹಾಲು ಉತ್ಪಾದಕರ ಸಹಕಾರ ಸಂಘಗಳ ಸಂಜುಇಸ್ಲಾಂಪುರ, ಶ್ರೀಕಾಂತ ಚಿಮಕೋಡ್, ರಾಜಕುಮಾರ ಹಾಲಹಳ್ಳಿ, ವಿಠ್ಠಲ ಪಾಶಾಪುರ, ಅನಿಲ್ ನಿಜಾಂಪುರ, ರವಿ ಚಾಂಬೋಳ್ ಮತ್ತಿತರರುಇದ್ದರು.
ನೀಲಕಂಠ ಭಂಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ವೀರಶೆಟ್ಟಿ ಶಂಭು ನಿರೂಪಿಸಿದರು.ಸಿದ್ಧಲಿಂಗ ವಂದಿಸಿದರು.
📲Get App