🔥 ट्रेंडिंग All Daily wagers stage a Massive prote... उत्तराखंड में हेलीकॉप्टर दुर्घटना: सुर... उत्तरीाखंड में हेलिकॉप्टर दुर्घटना के... दिल्ली का ए.क्यू.आई. 300 से ऊपर, इस मौ... बारिश के बाद दिल्ली में AQI 300 से ऊपर... दिल्ली में दिवाली 2026 में पटाखे चलाने...
02 नव. 2026•
ગુજરાતી मराठी ਪੰਜਾਬੀ বাংলা
राजनीति

ಬೀದರ್‍ನಲ್ಲಿ ಜಿಲ್ಲಾ ಮಟ್ಟದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ನಮ್ಮ ಕರ್ನಾಟಕ ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಗಣೇಶ ಪಾಟೀಲ ಜ್ಯಾಂತಿ ಅವರನ್ನು ಸೇನೆಯ ಪದಾಧಿಕ

✍️ रिपोर्टर: Basavaraj pujari 🗓 02 नव. 2026, 01:04 PM 👁 16
शेयर करें: 💬 WhatsApp 📘 Facebook 𝕏 Post

ಪ್ರಶಸ್ತಿ: ಗಣೇಶ ಪಾಟೀಲಗೆ ಸನ್ಮಾನ ಬೀದರ್: ಜಿಲ್ಲಾ ಆಡಳಿತದ ಪ್ರಸಕ್ತ ಸಾಲಿನ ಜಿಲ್ಲಾಮಟ್ಟದ ರಾಜ್ಯೋತ್ಸವ ಪ್ರಶಸ್ತಿಗೆ ಪಾತ್ರರಾದ ನಮ್ಮ ಕರ್ನಾಟಕ ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಗಣೇಶ ಪಾಟೀಲ ಜ್ಯಾಂತಿ ಅವರನ್ನು ಸೇನೆಯ

ಬೀದರ್‍ನಲ್ಲಿ ಜಿಲ್ಲಾ ಮಟ್ಟದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ನಮ್ಮ ಕರ್ನಾಟಕ ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಗಣೇಶ ಪಾಟೀಲ ಜ್ಯಾಂತಿ ಅವರನ್ನು ಸೇನೆಯ ಪದಾಧಿಕಾರಿಗಳು ಸನ್ಮಾನಿಸಿದರು

ಪ್ರಶಸ್ತಿ: ಗಣೇಶ ಪಾಟೀಲಗೆ ಸನ್ಮಾನ

ಬೀದರ್: ಜಿಲ್ಲಾ ಆಡಳಿತದ ಪ್ರಸಕ್ತ ಸಾಲಿನ ಜಿಲ್ಲಾಮಟ್ಟದ ರಾಜ್ಯೋತ್ಸವ ಪ್ರಶಸ್ತಿಗೆ ಪಾತ್ರರಾದ ನಮ್ಮ ಕರ್ನಾಟಕ ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಗಣೇಶ ಪಾಟೀಲ ಜ್ಯಾಂತಿ ಅವರನ್ನು ಸೇನೆಯ ಪದಾಧಿಕಾರಿಗಳು ನಗರದಲ್ಲಿ ಸನ್ಮಾನಿಸಿದರು.
ಶಾಲು ಹೊದಿಸಿ, ಮೈಸೂರು ಪೇಟ ತೊಡಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅನೇಕ ಪದಾಧಿಕಾರಿಗಳು, ಗಣೇಶ ಪಾಟೀಲ ಅವರು ಎರಡು ದಶಕದಿಂದ ಕನ್ನಡ ನಾಡು-ನುಡಿ, ನೆಲ, ಜಲ, ರೈತರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಹೋರಾಟ ನಡೆಸುತ್ತಾ ಬಂದಿದ್ದಾರೆ. ಅನೇಕ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಟ್ಟಿದ್ದಾರೆ. ಅವರಿಗೆ ಜಿಲ್ಲಾಮಟ್ಟದ ರಾಜ್ಯೋತ್ಸವ ಪ್ರಶಸ್ತಿ ದೊರೆತಿರುವುದು ಸಂತಸ ಉಂಟು ಮಾಡಿದೆ ಎಂದು ಹೇಳಿದರು.
ನನ್ನ ಸೇವೆಯನ್ನು ಗುರುತಿಸಿ ಜಿಲ್ಲಾ ಆಡಳಿತ ಪ್ರಶಸ್ತಿ ನೀಡಿದ್ದರಿಂದ ನನ್ನ ಜವಾಬ್ದಾರಿ ಇನ್ನಷ್ಟು ಹೆಚ್ಚಾಗಿದೆ. ಕನ್ನಡ ನಾಡು ಹಾಗೂ ಜನ ಪರ ಹೋರಾಟಗಳನ್ನು ಮುಂದುವರಿಸುವೆ ಎಂದು ಗಣೇಶ ಪಾಟೀಲ ಜ್ಯಾಂತಿ ತಿಳಿಸಿದರು.
ಪ್ರಮುಖರಾದ ರಮೇಶ್ ಚಿದ್ರಿ, ಅನಿಲ್ ರಾಜಗೀರಾ, ಗಿರೀಶ್ ಬಿರಾದಾರ, ಸುದೀಪ್ ತೂಗಾವೆ, ಪ್ರಶಾಂತ ಹನುಮಶೆಟ್ಟಿ, ಕಾಶಿನಾಥ ಚಳಕಾಪುರೆ, ಸುಮೀತ್ ನಾಗೂರೆ, ರವಿ ಪಾಟೀಲ, ಸಂತೋಷ್ ಪಾಟೀಲ, ಅನಿಲ್ ರೆಡ್ಡಿ, ಶಶಿಕಾಂತ ಅಷ್ಟೂರೆ ಮತ್ತಿತರರು ಇದ್ದರು.
📲Get App