🔥 TRENDING BIS Seizes 95 Gold Jewellery Items in... ਕਾਰੋਬਾਰੀਆਂ ਲ਼ਈ ਵੱਡੀ ਖ਼ਬਰ , 1 ਨਵੰਬਰ ਤੋਂ... શિક્ષણમંત્રી ડૉ. પ્રદ્યુમન વાજા સોલા ર... करौली में खाद्य सुरक्षा टीम ने शुद्ध आ... कोडरमा में अब WhatsApp से होगी शिकायत! Chaos erupts in Delhi MCD council as m...
22 Oct 2026•
ગુજરાતી मराठी ਪੰਜਾਬੀ বাংলা
Politics

From Vijaykumar Patil

✍️ Reporter: Basavaraj pujari 🗓 22 Oct 2026, 07:04 PM 👁 15
Share: 💬 WhatsApp 📘 Facebook 𝕏 Post

ಸಂಘಟನೆ ಬಲವರ್ಧನೆ ಮತ್ತು ಹಲವು ಸಮಸ್ಯೆಗಳ ಚರ್ಚೆಗೆ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಭೆ ಬೀದರ್,ಆ.22:- ಪತ್ರಿಕೆಗಳ ಹಲವಾರು ಸಮಸ್ಯೆಗಳ ಕುರಿತು ಚರ್ಚೆ ಮಾಡಲು ಹಾಗೂ ಪತ್ರಿಕಾ ಸಂಘಟನೆ ಬಲವರ್ಧನೆಗೆ ಎಂದು ಶ್ರೀಯುತ

From Vijaykumar Patil

ಸಂಘಟನೆ ಬಲವರ್ಧನೆ ಮತ್ತು ಹಲವು ಸಮಸ್ಯೆಗಳ ಚರ್ಚೆಗೆ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಭೆ
ಬೀದರ್,ಆ.22:- ಪತ್ರಿಕೆಗಳ ಹಲವಾರು ಸಮಸ್ಯೆಗಳ ಕುರಿತು ಚರ್ಚೆ ಮಾಡಲು ಹಾಗೂ ಪತ್ರಿಕಾ ಸಂಘಟನೆ ಬಲವರ್ಧನೆಗೆ ಎಂದು ಶ್ರೀಯುತ ಬಾಬು ವಾಲಿ ಅವರ ಮನೆಯಲ್ಲಿ ಸಂಪಾದಕರ ಸಭೆ ನಡೆಯಿತು.
ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ಜಿಲ್ಲಾ ಘಟಕ ಬೀದರ್ ವತಿಯಿಂದ ಈ ಸಭೆ ಕರೆಯಲಾಗಿತ್ತು.
ಸಭೆಯಲ್ಲಿ ಭಾಗವಹಿಸಿದ ಸಂಪಾದಕರುಗಳು ತಮ್ಮ ತಮ್ಮ ಅನಿಸಿಕೆ ಪತ್ರಿಕೆಗಳ ಸ್ಥಿತಿಗತಿ ಕುರಿತು ಚರ್ಚೆ ಮಾಡಿದರು. ಪ್ರಾದೇಶಿಕ ಪತ್ರಿಕೆಗಳ ಸಂಪಾದಕ ಸಂಘದ ಅಧ್ಯಕ್ಷರಾಗಿರುವ ಬಾಬು ವಾಲಿ ಅವರು ಮಾತನಾಡಿ ಪತ್ರಿಕೆಗಳ ಹಿತಕ್ಕಾಗಿ ಸರ್ಕಾರದ ಮತ್ತು ಪತ್ರಕರ್ತರ ನಡುವೆ ಒಳ್ಳೆ ಸಮನ್ವಯ ಇರಬೇಕು ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರಬೇಕೆಂದು ಹೇಳಿದರು.
ಇತ್ತೀಚಿಗೆ ಬೆಂಗಳೂರಿನಲ್ಲಿ ನಡೆದ ಹಲವಾರು ಸಭೆಗಳ ಸ್ಥಿತಿಗತಿ ಕುರಿತು ಇಲ್ಲಿ ನಡೆದ ವಿಚಾರಗಳನ್ನು ಕಾರ್ಯನಿರತ ದಿನಪತ್ರಿಕೆ ಸಂಪಾದಕರ ಸಂಘದ ಅಧ್ಯಕ್ಷ ವಿಜಯ್ ಕುಮಾರ್ ಪಾಟೀಲ್ ಸಭೆಯ ಗಮನಕ್ಕೆ ತಂದರು.
ಏನೇ ಆದರೂ ಅವೈಜ್ಞಾನಿಕವಾಗಿರಬಾರದು ಎಲ್ಲವೂ ಅಚ್ಚುಕಟ್ಟಾಗಿ ಜ್ಞಾನವರ್ಧಕ ನೀತಿಗಳು ಇರಬೇಕೆಂದು ಹಿರಿಯ ಸಂಪಾದಕ ಮಾಳಪ್ಪ ಅಡಸಾರೆ ಸಭೆಗೆ ತಿಳಿಸಿದರು.
ಸಭೆಯಲ್ಲಿ ಭಾಗವಹಿಸಿದ ಹಿರಿಯ ಸಂಪಾದಕರುಗಳಾದ ಅಲಿಬಾಬಾ ಮತ್ತು ಸೈಯದ್ ಹಸನ್ ಖಾದ್ರಿ, ದೀಪಕ ವಾಲಿ, ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಪಾಟೀಲ್, ಸಿದ್ದರಾಮಯ್ಯ ಸ್ವಾಮಿ,ಗಣಪತಿ ಡಿಕೆ. ಶ್ರೀನಿವಾಸ್ ಚೌಧರಿ, ಅಜಯ್ ಭೋಸ್ಲೆ, ಅಬ್ದುಲ್ ಖದೀರ್, ಮಹ್ಮದ್ ಅಬ್ದುಲ್ ಅಲಿ, ರವಿ ಸ್ವಾಮಿ, ಜೈ ಕುಮಾರ್, ಕೀರ್ತಿ ಸೇನಾ ಅನೇಕ ಹಿರಿಯ, ಕಿರಿಯ ಸಂಪಾದಕರು ಸಲಹೆ ಸೂಚನೆಗಳನ್ನು ನೀಡಿದರು.
📲Get App