🔥 TRENDING Supreme Court Seeks Centre, States to... Arunachal Activist Aborman Anbo Return... Nobel Prize Winners Announced on Oct 6 Indian Hockey Team Returns to Punjab A... કૂલીએ ઈમાનદારી બતાવી પૈસા પરત આપ્યા 🏏 *भारत–वेस्टइंडीज़ T20 मैच के फर्जी...
06 Oct 2026•
ગુજરાતી मराठी ਪੰਜਾਬੀ বাংলা

Bidar news

✍️ Reporter: Basavaraj pujari 🗓 06 Oct 2026, 08:54 AM 👁 17
Watch on: ▶️ YouTube
Share: 💬 WhatsApp 📘 Facebook 𝕏 Post

ಬೀದರ: ಕಳ್ಳತನ ಪ್ರಕರಣಗಳಲ್ಲಿ ಆರು ಲಕ್ಷ ಮೌಲ್ಯದ ವಸ್ತುಗಳ ವಶಪಡಿಕೆ

ಬೀದರ: ಬೀದರ ಜಿಲ್ಲಾ ಪೊಲೀಸ್ ಮತ್ತು ಮೇಹಕರ ಪೊಲೀಸ್ ತಂಡವು ಮೂರು ಕಳ್ಳತನ ಪ್ರಕರಣಗಳಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ಸು ಸಾಧಿಸಿದೆ. ಈ ಪ್ರಕರಣಗಳಲ್ಲಿ ಆರು ಲಕ್ಷಕ್ಕೂ ಅಧಿಕ ಮೌಲ್ಯದ ವಾಹನ ಮತ್ತು ಕೇಬಲ್ ವೈರ್ ವಶಪಡಿಸಲಾಗಿದೆ. ಈ ಕಾರ್ಯಾಚರಣೆ ಮಾನ್ಯ ಶ್ರೀ ಪ್ರದೀಪ್ ಗುಂಟಿ, ಐ.ಪಿ.ಎಸ್, ಪೊಲೀಸ್ ಅಧೀಕ್ಷಕರ ನೇರ ಮಾರ್ಗದರ್ಶನದಲ್ಲಿ ನಡೆಯಿತು.

ಶ್ರೀ ಚಂದ್ರಕಾಂತ ಪೂಜಾರಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1 ಬೀದರ ಮತ್ತು ಸಿ.ಪಿ.ಐ ಶ್ರೀ ಹಣಮರೆಡ್ಡೆಪ್ಪ, ಮೇಹಕರ ಪೊಲೀಸ್ ಠಾಣೆಯ ಸಿಬ್ಬಂದಿಯ ನೇತೃತ್ವದಲ್ಲಿ ಸಿಸಿ ಟಿವಿ ಫುಟೇಜ್ ಹಾಗೂ ಪೊಲೀಸ್ ಬಾತ್ಮಿದಾರರಿಂದ ಪಡೆದ ಮಾಹಿತಿಯ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಿ 5,00,000 ರೂಪಾಯಿ ಮೌಲ್ಯದ ವಾಹನ ಮತ್ತು 1,80,000 ರೂಪಾಯಿ ಮೌಲ್ಯದ 1090 ಮೀಟರ ಕೇಬಲ್ ವೈರ್ ಜಪ್ತಿ ಮಾಡಲಾಗಿದೆ. ಕಾನೂನಿನ ಅನುಸಾರ ಕ್ರಮ ಕೈಗೊಳ್ಳಲಾಗಿದೆ.
📲Get App