🔥 TRENDING BJP and Shiromani Akali Dal to Hold Jo... Amandeep's Century Steers Chhattisgarh... ପ୍ରବଚକ ଶରଣାବିନ୍ଦ ଓଝା ଗିରଫ Tarun Gogoi’s Son Joins Indian Nationa... Assam Man Arrested for Raping Partner’... BJP Rejoins Shiromani Akali Dal Ahead...
24 Nov 2026•
ગુજરાતી मराठी ਪੰਜਾਬੀ বাংলা

ಅರಕೆರೆ ತಾಲೂಕಿನಿಂದ ಕೈಬಿಟ್ಟು ಪುನಃ ದೇವದುರ್ಗ ತಾಲೂಕಿಗೆ ಸೇರ್ಪಡೆಗೆ ಶೇ.99 ರಷ್ಟು ಜನಾಭಿಪ್ರಾಯ

✍️ Reporter: Ningappa 🗓 24 Nov 2026, 02:17 PM 👁 22
Share: 💬 WhatsApp 📘 Facebook 𝕏 Post
ರಾಯಚೂರು: ರಾಮದುರ್ಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳನ್ನು ಅರಕೆರೆ ತಾಲೂಕಿನಿಂದ ಕೈಬಿಟ್ಟು ಪುನಃ ದೇವದುರ್ಗ ತಾಲೂಕಿಗೆ ಸೇರ್ಪಡೆ ಮಾಡುವಂತೆ ಗ್ರಾಮಸ್ಥರು ಶೇ.99 ರಷ್ಟು ಜನಾಭಿಪ್ರಾಯ ವ್ಯಕ್ತಪಡಿಸಿದರು.

ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಹರಿಹರ ಹಾಗೂ ತಹಶೀಲ್ದಾರ್ (ಗ್ರೇಡ್-1) ಅರಕೆರೆ ಇವರ ಸಮ್ಮುಖದಲ್ಲಿ ಸೋಮವಾರ ರಾಮದುರ್ಗದಲ್ಲಿ ಜನಾಭಿಪ್ರಾಯ ಸಭೆ ನಡೆಯಿತು. ಈ ಸಭೆಯಲ್ಲಿ ರಾಮದುರ್ಗ, ಸಂಕೇಶ್ವರ, ಕಾಕರಗಲ್, ಜಿನ್ನಾಪುರ ಗ್ರಾಮಸ್ಥರು ಸಾಮೂಹಿಕವಾಗಿ ಭಾಗವಹಿಸಿದ್ದರು.

*ಸಾರಿಗೆ ಸೌಕರ್ಯವೇ ಇಲ್ಲ:*
ಗ್ರಾಮಸ್ಥರು ತಮ್ಮ ಅಭಿಪ್ರಾಯದಲ್ಲಿ, ಅರಕೆರೆ ಕೇಂದ್ರ ಸ್ಥಾನಕ್ಕೆ ಹೋಗಲು ಯಾವುದೇ ರೀತಿಯ ಸಾರಿಗೆ ಸೌಕರ್ಯ ಇರುವುದಿಲ್ಲ. ಅರಕೆರೆಗೆ ಹೋಗಬೇಕಾದರೆ ದೇವದುರ್ಗಕ್ಕೆ ಹೋಗಿ ಅಲ್ಲಿಂದ ಹರಕೆರೆಗೆ 19 ಕಿಲೋ ಮೀಟರ್ ದೂರ ಪ್ರಯಾಣ ಮಾಡಬೇಕಾಗುತ್ತದೆ. ಅರಕೆರೆ ತಾಲೂಕಿಗೆ ಸೇರ್ಪಡೆಯಾದ ನಂತರ ಕಂದಾಯ ಇಲಾಖೆ ಕೆಲಸಗಳಾದ ಪಾಣಿ ಪತ್ರಿಕೆ, ಜಾತಿ-ಆದಾಯ ಹಾಗೂ ಇತರೆ ಹಲವಾರು ಕೆಲಸ ಕಾರ್ಯಗಳಿಗೆ ತೀವ್ರ ತೊಂದರೆ ಆಗುತ್ತಿದೆ ಎಂದು ತಿಳಿಸಿದರು.

ತಾಲೂಕು ವಿಂಗಡಣೆ ಸಂದರ್ಭದಲ್ಲಿ ಯಾವುದೇ ಸಾರ್ವಜನಿಕರ ಅಭಿಪ್ರಾಯವನ್ನು ಪಡೆಯದೇ ಏಕಪಕ್ಷೀಯವಾಗಿ ಅರಕೆರೆ ತಾಲೂಕಿಗೆ ನಮ್ಮ ರಾಮದುರ್ಗ ಗ್ರಾಮ ಪಂಚಾಯಿತಿಯನ್ನು ಸೇರ್ಪಡೆ ಮಾಡಲಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ದೇವದುರ್ಗ ಕೇಂದ್ರ ಸ್ಥಾನದಿಂದ ಜಿನ್ನಾಪುರ 13 ಕಿಲೋ ಮೀಟರ್, ಸಂಕೇಶ್ವರ 14 ಕಿಲೋ ಮೀಟರ್ ಮತ್ತು ರಾಮದುರ್ಗ 15 ಕಿಲೋ ಮೀಟರ್ ಅಂತರದಲ್ಲಿ ಇದ್ದು, ಇದರಿಂದ ಯಾವುದೇ ಅನಾನುಕೂಲ ಇರುವುದಿಲ್ಲ. ಆದ್ದರಿಂದ ದೇವದುರ್ಗ ತಾಲೂಕಿನ ಗಬ್ಬೂರು ಹೋಬಳಿಗೆ ಪುನಃ ಸೇರ್ಪಡೆ ಮಾಡುವಂತೆ ಜನಾಭಿಪ್ರಾಯ ವ್ಯಕ್ತಪಡಿಸಿದರು.

*ಕೈ ಎತ್ತುವ ಮೂಲಕ ಮತದಾನ:*
ಕೊನೆಯಲ್ಲಿ ಹಾಜರಿದ್ದ ಗ್ರಾಮಸ್ಥರ ಅಭಿಪ್ರಾಯದಂತೆ ಅರಕೆರೆಯಿಂದ ಕೈಬಿಟ್ಟು ದೇವದುರ್ಗ ತಾಲೂಕಿಗೆ ಸೇರ್ಪಡೆಗೊಳಿಸಲು ಕೈ ಎತ್ತುವ ಮೂಲಕ ಮತದಾನ ಮಾಡಲಾಯಿತು. ಇದರಲ್ಲಿ ಶೇ.99 ರಷ್ಟು ಜನರು ದೇವದುರ್ಗಕ್ಕೆ ಸೇರಲು ಒಲವು ತೋರಿದರು.

ಕೇವಲ ಶೇ.1 ರಷ್ಟು ಜನರು ಮಾತ್ರ ಮನವಿ ಪತ್ರ ಸಲ್ಲಿಸಿ, ತಮ್ಮ ವಾದವನ್ನು ಮಂಡಿಸಿ ಅರಕೆರೆ ತಾಲೂಕಿನಲ್ಲಿಯೇ ಮುಂದುವರೆಯುವಂತೆ ಅಭಿಪ್ರಾಯ ವ್ಯಕ್ತಪಡಿಸಿದರು.

ಸಭೆಯಲ್ಲಿ ಹಾಜರಿದ್ದ ಎಲ್ಲಾ ಗ್ರಾಮಸ್ಥರ ಹಾಜರಾತಿ ಸಹಿ ಪಡೆದು ಜನಾಭಿಪ್ರಾಯ ಸಭೆಯನ್ನು ನಡೆಸಲಾಯಿತು.
📲Get App