🔥 ट्रेंडिंग शिमला चोरी मामले में यूएस नगर में चार... हिमाचल प्रदेश विश्वविद्यालय के कुलपति... भारत-मंगोलिया संयुक्त सैन्य अभ्यास पिथ... उत्तराखंड के छात्रों ने उत्तर प्रदेश व... नैनीताल में दूषित पानी से 2 मौत, 6 इंज... दिल्ली के वकीलों ने नए चालान नियमों का...
22 सित. 2026
ગુજરાતી मराठी ਪੰਜਾਬੀ বাংলা

90 ಸಾವಿರ ವಿದ್ಯಾರ್ಥಿಗಳಿಗೆ ಉಚಿತ ಕೋಚಿಂಗ್-ಉನ್ನತ ಶಿಕ್ಷಣರಾದ ಸಚಿವ ಶ್ರೀ ಯುತ ಬಸವರಾಜ ರಾಯರೆಡ್ಡಿ

✍️ रिपोर्टर: Viswanatha D R 🗓 10 सित. 2026, 05:12 AM 👁 127
यहाँ देखें: ▶️ YouTube
शेयर करें: 💬 WhatsApp 📘 Facebook 𝕏 Post
ಬೆಂಗಳೂರು, ಸೆ.9: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ಯುವಜನತೆಗೆ ನೆರವಾಗುವ ಉದ್ದೇಶದಿಂದ ರಾಜ್ಯ ಸರ್ಕಾರದ ‘ಮುಖ್ಯಮಂತ್ರಿಯವರ ವಿದ್ಯಾರ್ಥಿ ಸಹಾಯ ಹಸ್ತ’ ಯೋಜನೆಗೆ ಬುಧವಾರ ಚಾಲನೆ ನೀಡಲಾಯಿತು. ₹9 ಕೋಟಿ ವೆಚ್ಚದಲ್ಲಿ ಅನುಷ್ಠಾನಗೊಳ್ಳಲಿರುವ ಯೋಜನೆಯಡಿ ರಾಜ್ಯದ 90 ಸಾವಿರ ಅರ್ಹ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ದೊರೆಯಲಿದೆ.

ಮೂರು ತಿಂಗಳ ಕಾಲ ಸಂಪೂರ್ಣ ಉಚಿತ ಆನ್‌ಲೈನ್ ಕೋಚಿಂಗ್ ನೀಡಲಾಗುತ್ತಿದ್ದು, ಕೆಪಿಎಸ್‌ಸಿ ಹಾಗೂ ಕೆಇಎ ನಡೆಸುವ ಎಸ್‌ಡಿಎ, ಎಫ್‌ಡಿಎ, ಪಿಡಿಒ, ಪಿಎಸ್‌ಐ ಸೇರಿದಂತೆ ಪ್ರಮುಖ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲಾಗುತ್ತದೆ. ಲೈವ್ ಹಾಗೂ ರೆಕಾರ್ಡೆಡ್ ತರಗತಿಗಳ ಜತೆಗೆ ಅಧ್ಯಯನ ಸಾಮಗ್ರಿಯೂ ಲಭ್ಯವಾಗಲಿದೆ. ಪ್ರತಿ ಅಭ್ಯರ್ಥಿಗೆ ಗರಿಷ್ಠ ಮೂರು ಪರೀಕ್ಷೆಗಳ ತರಬೇತಿ ಪಡೆಯಲು ಅವಕಾಶವಿದೆ. ವಿದ್ಯಾರ್ಥಿಗಳು ಹಾಗೂ ಪರೀಕ್ಷಾ ಆಕಾಂಕ್ಷಿಗಳು ಯೋಜನೆಯ ಸದುಪಯೋಗ ಪಡೆದುಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಉನ್ನತ ಶಿಕ್ಷಣರಾದ ಸಚಿವ ಶ್ರೀ ಯುತ ಬಸವರಾಜ ರಾಯರೆಡ್ಡಿ ಮನವಿ ಮಾಡಿದರು.
📲Get App