🔥 ट्रेंडिंग बिहार के गन्ना उद्योग मंत्री से शिष्टा... Indian bloc Leaders including Congress... आज शाम 7 बजे ऑनलाइन ज्योतिष करियर निर्... पंजाब में OOAT पंजीकरणों में नया शिखर,... पंजाब ने घोषित किया 'Dear 50 Ranger' र... अकाली दल वारिस पंजाब डे ने 2027 चुनाव...
01 नव. 2026•
ગુજરાતી मराठी ਪੰਜਾਬੀ বাংলা

ಯಲಗಟ್ಟಾದಲ್ಲಿ ಸಂಭ್ರಮದ 71ನೇ ಕನ್ನಡ ರಾಜ್ಯೋತ್ಸವ - ಭುವನೇಶ್ವರಿಗೆ ನಮನ ಸಲ್ಲಿಸಿ ಧ್ವಜಾರೋಹಣ, ಮಕ್ಕಳಿಗೆ ನೋಟ್ ಬುಕ್ ವಿತರಣೆ

✍️ रिपोर्टर: Ningappa 🗓 01 नव. 2026, 04:40 PM 👁 21
शेयर करें: 💬 WhatsApp 📘 Facebook 𝕏 Post

ರೋಡಲಬಂಡಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಯಲಗಟ್ಟಾ ಗ್ರಾಮದಲ್ಲಿ 71ನೇ ಕನ್ನಡ ರಾಜ್ಯೋತ್ಸವ ವಿಜೃಂಭಣೆ - ಭುವನೇಶ್ವರಿ ಪೂಜೆ, ಧ್ವಜಾರೋಹಣ, ನೋಟ್ ಬುಕ್ ವಿತರಣೆ ಮೂಲಕ ಸಂಭ್ರಮಾಚರಣೆ

ಯಲಗಟ್ಟಾದಲ್ಲಿ ಸಂಭ್ರಮದ 71ನೇ ಕನ್ನಡ ರಾಜ್ಯೋತ್ಸವ: ಧ್ವಜಾರೋಹಣ ನೆರವೇರಿಸಿ ಭುವನೇಶ್ವರಿಗೆ ನಮನ*

ದೇವದುರ್ಗ/ಯಲಗಟ್ಟಾ: ಸಮೀಪದ ರೋಡಲಬಂಡಾ (ತವಗ) ಗ್ರಾಮ ಪಂಚಾಯತಿ ವ್ಯಾಪ್ತಿಯ ಯಲಗಟ್ಟಾ ಗ್ರಾಮದಲ್ಲಿ ಕನ್ನಡ ರಾಜ್ಯೋತ್ಸವ ಹಾಗೂ ಧ್ವಜಾರೋಹಣ ಕಾರ್ಯಕ್ರಮವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು.

ಕಾರ್ಯಕ್ರಮದ ಆರಂಭದಲ್ಲಿ ನಾಡದೇವತೆ ತಾಯಿ ಭುವನೇಶ್ವರಿಯ ಭಾವಚಿತ್ರಕ್ಕೆ ವಿವಿಧಪರ ಸಂಘಟನೆಗಳ ಮುಖಂಡರು ಹಾಗೂ ಗ್ರಾಮ ಪಂಚಾಯತಿ ಅಧ್ಯಕ್ಷರು, ಸದಸ್ಯರು ವಿಶೇಷ ಪೂಜೆ ಸಲ್ಲಿಸಿ, ಪುಷ್ಪಾರ್ಚನೆಗೈದರು. ನಂತರ ಗ್ರಾಮದಲ್ಲಿ ಸಡಗರದಿಂದ ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಈ ವಿಶೇಷ ದಿನದ ಸಂಭ್ರಮದಲ್ಲಿ ಶಾಲೆಯ ಮುದ್ದು ಮಕ್ಕಳಿಗೆ ನೋಟ್ ಬುಕ್ಸ್ ವಿತರಣೆ ಮಾಡಲಾಯಿತು.

ಸಮಾರಂಭದಲ್ಲಿ ಗ್ರಾಮದ ಹಿರಿಯರು ಹಾಗೂ ಮುಖಂಡರಾದ ಗುರುಸ್ವಾಮಿ ತಾತನವರು, ರಾಜು ನಾಯಕ (ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಅಧ್ಯಕ್ಷ), ಅಣ್ಣಯ್ಯ (ಜೈ ಕರ್ನಾಟಕ), ಶಿವಶಂಕರ (ಕನ್ನಡ ವಿಜಯ ಸೇನೆ ಗ್ರಾಮ ಘಟಕದ ಅಧ್ಯಕ್ಷ), ಮಾಜಿ ಗ್ರಾಮ ಪಂಚಾಯತ ಅಧ್ಯಕ್ಷರಾದ ದೇವಪ್ಪ ಖ್ಯಾತ, ಹನುಮಂತ ಜಾಲಹಳ್ಳಿ, ಮಲ್ಲಯ್ಯ ಪ್ಯಾಟಿ ಗೌಡ, ಭೀಮಣ್ಣ ಕಮದಾಳ (DSS), ಹಂಪಯ್ಯ (KRS ಪಕ್ಷ ತಾಲೂಕ ಪ್ರಧಾನ ಕಾರ್ಯದರ್ಶಿ), ಪ್ರೌಢಶಾಲೆ SDMC ಅಧ್ಯಕ್ಷ ಸಿದ್ದಲಿಂಗಪ್ಪ, ಬಸವರಾಜ ಯಾದವ, ವೆಂಕಟೇಶ್ ಮಾಸ್ತರ್ (ಅತಿಥಿ ಶಿಕ್ಷಕರು) ಹಾಗೂ ಗ್ರಾಮದ ಅನೇಕ ಮುಖಂಡರು, ಗ್ರಾಮಸ್ಥರು ಉಪಸ್ಥಿತರಿದ್ದು ಕನ್ನಡ ನಾಡು-ನುಡಿಗೆ ಗೌರವ ಸಮರ್ಪಿಸಿದರು.
📲Get App