🔥 TRENDING Three AAP Rebel Leaders Switch to BJP... Three AAP MLAs Switch Allegiance to BJ... Three Assam Workers Assaulted in Benga... Kolkata Fatafat Result to be Released... Jharkhand Women’s Football League to b... Woman Fatally Stabbed in Seraikela, Jh...
02 Nov 2026•
ગુજરાતી मराठी ਪੰਜਾਬੀ বাংলা

ಕ್ಯಾದಿಗೇರಾ ಮಾಜಿ ಜಿ.ಪಂ ಸದಸ್ಯ ದಿವಂಗತ ವೆಂಕಟೇಶ ಪೂಜಾರಿ ಅವರ 6ನೇ ಪುಣ್ಯಸ್ಮರಣೆ - ಸಹಸ್ರಾರು ಅಭಿಮಾನಿಗಳಿಂದ ಪುಷ್ಪ ನಮನ

✍️ Reporter: Ningappa 🗓 02 Nov 2026, 12:50 PM 👁 15
Share: 💬 WhatsApp 📘 Facebook 𝕏 Post

ದೇವದುರ್ಗ ಅರಕೇರಾದಲ್ಲಿ ದಿವಂಗತ ಮಾಜಿ ಜಿಲ್ಲಾ ಪಂಚಾಯತ ಸದಸ್ಯ ವೆಂಕಟೇಶ ಪೂಜಾರಿ ಅವರ 6ನೇ ವರ್ಷದ ಪುಣ್ಯಸ್ಮರಣೆ - ವಿವಿಧ ಪಕ್ಷಗಳ ಮುಖಂಡರು, ಅಭಿಮಾನಿಗಳಿಂದ ನಮನ

ದಿವಂಗತ ಮಾಜಿ ಜಿ.ಪಂ ಸದಸ್ಯ ವೆಂಕಟೇಶ ಪೂಜಾರಿ ಅವರ 6ನೇ ಪುಣ್ಯಸ್ಮರಣೆ

ದೇವದುರ್ಗ / ಅರಕೇರಾ: ಕ್ಯಾದಿಗೇರಾ ಮಾಜಿ ಜಿಲ್ಲಾ ಪಂಚಾಯತ ಸದಸ್ಯರಾಗಿದ್ದ ದಿವಂಗತ ಶ್ರೀ ವೆಂಕಟೇಶ ಪೂಜಾರಿ ಅವರ 6ನೇ ವರ್ಷದ ಪುಣ್ಯ ಸ್ಮರಣೆಯನ್ನು ಆಚರಿಸಲಾಯಿತು.

ವಿವಿಧ ಪಕ್ಷಗಳ ಮುಖಂಡರು, ವಿವಿಧ ಸಂಘಟನೆಗಳ ಸದಸ್ಯರು, ಜಿಲ್ಲಾ ಪಂಚಾಯತ ವ್ಯಾಪ್ತಿಯ ಪೂಜಾರಿ ಅಭಿಮಾನಿಗಳು ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಿ ಅವರ ಸನ್ನಿಧಿಗೆ ಪುಷ್ಪ ನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಯುವ ಘಟಕದ ಅಧ್ಯಕ್ಷ ಲಿಂಗಣ್ಣ ಹವಾಲ್ದಾರ್ ಮಾತನಾಡಿ, "ದಿವಂಗತ ಶ್ರೀ ವೆಂಕಟೇಶ ಪೂಜಾರಿ ಅವರು ರಾಜಕೀಯ ಮುತ್ಸದ್ದಿ, ಸೌಮ್ಯ ಸ್ವಭಾವದ ವ್ಯಕ್ತಿ ಆಗಿದ್ದರು, ಯುವಕರನ್ನು ಪ್ರೀತಿಯಿಂದ ಕಾಣುವ ನಾಯಕ. ಅವರು ಇಲ್ಲದ ಈ 6 ವರ್ಷ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ" ಎಂದರು.
📲Get App