🔥 TRENDING कोतवाली के एसजेएस कॉलेज के सामने छात्र... Indians in Delhi Face Growing Costs of... Australia tour of India ODI series 202... India to Face Sri Lanka in ODI at Visa... Bumrah Back in Red-Ball Action for Ind... Tochi Wigwe Marries Late Brother’s Clo...
06 Nov 2026•
ગુજરાતી मराठी ਪੰਜਾਬੀ বাংলা

ಕಾರ್ಮಿಕರಿಗೆ 42 ಸಾವಿರ ಕನಿಷ್ಠ ವೇತನಕ್ಕೆ ಆಗ್ರಹ - ದೆಹಲಿ ಚಲೋ ಹೋರಾಟದ ಅಂಗವಾಗಿ ಜಾಲಹಳ್ಳಿಯಲ್ಲಿ CITU ನಿಂದ ಪೋಸ್ಟರ್ ಬಿಡುಗಡೆ

✍️ Reporter: Ningappa 🗓 03 Nov 2026, 05:14 PM 👁 31
Share: 💬 WhatsApp 📘 Facebook 𝕏 Post

42 ಸಾವಿರ ಕನಿಷ್ಠ ವೇತನ, ಕಾರ್ಮಿಕ ವಿರೋಧಿ ಸಂಹಿತೆ ರದ್ದತಿ, ಗುತ್ತಿಗೆ ಪದ್ಧತಿ ರದ್ದತಿ, 21 ಸಾವಿರ ಪಿಂಚಣಿಗೆ ಆಗ್ರಹಿಸಿ ಡಿಸೆಂಬರ್ 1 ರಿಂದ CITU ನೇತೃತ್ವದಲ್ಲಿ ದೆಹಲಿ ಚಲೋ ಹೋರಾಟ - ಪೂರ್ವಭಾವಿಯಾಗಿ ಜಾಲಹಳ್ಳಿಯಲ್ಲಿ ಪೋಸ್ಟರ್ ಬಿಡುಗಡೆ

ದೇವದುರ್ಗ/ಜಾಲಹಳ್ಳಿ , ನ. 3:ಕಾರ್ಮಿಕರಿಗೆ 42 ಸಾವಿರ ಕನಿಷ್ಠ ವೇತನ ಜಾರಿಗೆ ಒತ್ತಾಯಿಸಿ, ಕಾರ್ಮಿಕ ವಿರೋಧಿ ಕಾರ್ಮಿಕ ಸಂಹಿತೆಗಳ ರದ್ದತಿಗಾಗಿ ಆಗ್ರಹಿಸಿ ರಾಷ್ಟ್ರವ್ಯಾಪಿ ಹೋರಾಟಕ್ಕೆ CITU (Centre of Indian Trade Unions) ಕರೆ ನೀಡಿದೆ.

ಇದರ ಭಾಗವಾಗಿ ಡಿಸೆಂಬರ್ 1 ರಿಂದ ನಡೆಯಲಿರುವ ದೆಹಲಿ ಚಲೋ ಹೋರಾಟದ ಪೂರ್ವಭಾವಿಯಾಗಿ ಇಂದು ಜಾಲಹಳ್ಳಿಯಲ್ಲಿ CITU ಸಂಘಟನೆಯ ನೇತೃತ್ವದಲ್ಲಿ ಪೋಸ್ಟರ್ ಬಿಡುಗಡೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮುಖಂಡರಾದ ಗಿರಿಯಪ್ಪ ಪೂಜಾರಿ ಮಾತನಾಡಿ, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನಾಲ್ಕು ಕಾರ್ಮಿಕ ಸಂಹಿತೆಗಳು ಕಾರ್ಮಿಕ ವಿರೋಧಿಯಾಗಿವೆ. ಅವುಗಳನ್ನು ಕೂಡಲೇ ರದ್ದುಪಡಿಸಬೇಕು. ಯೋಜನಾ ಕಾರ್ಮಿಕರಿಗೆ (Scheme Workers - ಅಂಗನವಾಡಿ, ಆಶಾ, ಬಿಸಿಯೂಟ,ಪಂಚಾಯತಿ ನೌಕರರು) ಕನಿಷ್ಠ ವೇತನ ನಿಗದಿ ಮಾಡಬೇಕು, ಗುತ್ತಿಗೆ ಕಾರ್ಮಿಕ ಪದ್ಧತಿಯನ್ನು ರದ್ದುಪಡಿಸಿ ಎಲ್ಲಾ ಕಾರ್ಮಿಕರನ್ನು ಖಾಯಂ ಮಾಡಬೇಕು ಮತ್ತು ಕನಿಷ್ಠ 21 ಸಾವಿರ ರೂ. ಪಿಂಚಣಿ ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು.

ಬೆಲೆ ಏರಿಕೆಗೆ ಅನುಗುಣವಾಗಿ ಕಾರ್ಮಿಕರಿಗೆ ತಿಂಗಳಿಗೆ 42,000 ರೂ. ಕನಿಷ್ಠ ವೇತನ ನೀಡಬೇಕು ಎಂಬುದು ಪ್ರಮುಖ ಬೇಡಿಕೆಯಾಗಿದೆ. ದೆಹಲಿ ಚಲೋ ಹೋರಾಟದಲ್ಲಿ ಕರ್ನಾಟಕದಿಂದ ಸಾವಿರಾರು ಕಾರ್ಮಿಕರು ಭಾಗವಹಿಸಲಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ನಾಗರಾಜ,ರಂಗನಾಥ, ಧರ್ಮಣ್ಣ,ರಾಜು,ರಂಗಪ್ಪ,ಕಾಶಿ,ಸೈದಾಬಿ ಸೇರಿದಂತೆ ಇತರರು ಇದ್ದರು.
📲Get App