🔥 TRENDING Starbucks to Establish Global Capabili... Botswana Cheetah Released into Gandhi... Congress leader Mallikarjun Kharge rid... Karnataka Man Seen Riding With Five Ch... Shiv Sena (UBT) MP Sanjay Raut backs R... Pune Murder Investigation: Garland Pho...
22 Sep 2026
ગુજરાતી मराठी ਪੰਜਾਬੀ বাংলা
ಸಾರ್ವಜನಿಕರಿಂದ ವಿವಿಧ ಸಮಸ್ಯೆಗಳ 417 ಅಹವಾಲು ಸಲ್ಲಿಕೆ.

ಸಾರ್ವಜನಿಕರಿಂದ ವಿವಿಧ ಸಮಸ್ಯೆಗಳ 417 ಅಹವಾಲು ಸಲ್ಲಿಕೆ.

✍️ Reporter: KALLAPPA MIRJI 🗓 06 Sep 2026, 05:47 PM 👁 88
Watch on: ▶️ YouTube
Share: 💬 WhatsApp 📘 Facebook 𝕏 Post

ಕಲಘಟಗಿ:ಸಾರ್ವಜನಿಕರ ಮೂಲಭೂತ ಸಮಸ್ಯೆಗಳ ಸ್ಥಳದಲ್ಲೇ ಪರಿಹರಿಸಿ, ಕಚೇರಿ ಅಲೆದಾಟ ತಪ್ಪಿಸುವ ಉದ್ದೇಶದಿಂದ ಸರ್ಕಾರ ನೂತನವಾಗಿ ಪ್ರಜಾಸೇವಾ ಆಂದೋಲನ ಜಾರಿಗೆ ತಂದಿದೆ ಎಂದು ಕಾರ್ಮಿಕ ಹಾಗೂ ಉದ್ಯೋಗ ಖಾತೆ ಸಚಿವ ಸಂತೋಷ ಲಾಡ್ ಹೇಳಿದರು.

ಕಲಘಟಗಿ:ಸಾರ್ವಜನಿಕರ ಮೂಲಭೂತ ಸಮಸ್ಯೆಗಳ ಸ್ಥಳದಲ್ಲೇ ಪರಿಹರಿಸಿ, ಕಚೇರಿ ಅಲೆದಾಟ ತಪ್ಪಿಸುವ ಉದ್ದೇಶದಿಂದ ಸರ್ಕಾರ ನೂತನವಾಗಿ ಪ್ರಜಾಸೇವಾ ಆಂದೋಲನ ಜಾರಿಗೆ ತಂದಿದೆ ಎಂದು ಕಾರ್ಮಿಕ ಹಾಗೂ ಉದ್ಯೋಗ ಖಾತೆ ಸಚಿವ ಸಂತೋಷ ಲಾಡ್ ಹೇಳಿದರು.
ಪಟ್ಟಣದ ಜನತಾ ಇಂಗ್ಲಿಷ ಸ್ಕೂಲ್ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಪ್ರಜಾಸೇವಾ ಆಂದೋಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಆಯಾ ಇಲಾಖೆ ಅಧಿಕಾರಿಗಳು ಜನರಿಂದ ಬಂದ ಅರ್ಜಿಗಳು ನಿರ್ಲಕ್ಷ ಮಾಡದೇ ತ್ವರಿತವಾಗಿ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಕೂಡ್ಲಿಗಿ ತಾಲ್ಲೂಕಿನಲ್ಲಿ ಆಯೋಜಿಸಿದ್ದ ಪ್ರಜಾಸೇವಾ ಕಾರ್ಯಕ್ರಮ ನೇರ ಪ್ರಸಾರ ವೀಕ್ಷಿಸಿ ನಂತರ ಸಂತೋಷ್ ಲಾಡ್ ಅವರು ಮುಖ್ಯ ಮಂತ್ರಿಯವರ ಜೊತೆ ಮಾತನಾಡಿ ನೀವು ಜಾರಿಗೆ ತಂದಿರುವ ಪ್ರಜಾಸೇವಾ ಕಾರ್ಯಕ್ರಮ ನಾವೆಲ್ಲರೂ ಅಧಿಕಾರಿಗಳ ಜೊತೆಗೂಡಿ ಜನರ ಸಮಸ್ಯೆಗಳ ಅರ್ಜಿ ತ್ವರಿತವಾಗಿ ವಿಲೇವಾರಿ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದರು.
ಶಾಸಕರಾದ ಪ್ರಸಾದ ಅಬ್ಬಯ್ಯ ಮಾತನಾಡಿ ಜನರಿಂದ ಜನರಿಗಾಗಿ ಸೇವೆ ಒದಗಿಸುವದು ಪ್ರಜಾಸೇವಾ ಉದ್ದೇಶ,
ಅಂಬೇಡ್ಕರ್ ನೀಡಿದ ಸಂವಿಧಾನದ ಅಡಿಯಲ್ಲಿ ನಾವೆಲ್ಲರೂ ಬದುಕುತ್ತಿದ್ದೇವೆ. ಕೇಂದ್ರ ಸರ್ಕಾರದ ಒಂದು ರಾಷ್ಟ್ರ,ಒಂದು ಚುನಾವಣೆ ಕಾನೂನು ಜಾರಿಗೆ ತರುತ್ತಿರುವದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರೋಧವಾಗಿದೆ ಎಂದರು.
ನವಲಗುಂದ ಕ್ಷೇತ್ರದ ಶಾಸಕ ಎನ್. ಎಚ್ ಕೊನರಡ್ಡಿ ಮಾತನಾಡಿ ಜನರಿದ್ದಲಿ ಸರ್ಕಾರ ತೆರಳಿ ಸಾರ್ವಜನಿಕರ ಸಮಸ್ಯೆ ಆಲಿಸಿ ಸಕಾಲದಲ್ಲಿ ಪರಿಹರಿಸುವದು ಹಾಗೂ ಸರ್ಕಾರದ ಯೋಜನೆ ಜನರಿಗೆ ತಲುಪಿಸುವದು ಪ್ರಜಾಸೇವಾ ಉದ್ದೇಶವಾಗಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಎಫ್.ಎಚ್ ಜಕ್ಕಪ್ಪನವರ ಮಾತನಾಡಿ ಸಾರ್ವಜನಿಕರು ಕಚೇರಿಗೆ ಸಮಸ್ಯೆ ಅಂತಾ ಬಂದಾಗ ಪ್ರಾಮಾಣಿಕವಾಗಿ ನಿರ್ವಹಿಸಿದರೆ ಜನರ ಅಲೆದಾಟ ತಪ್ಪುತ್ತದೆ.ಜಿಲ್ಲೆಯ ಎಲ್ಲ ಅಧಿಕಾರಿಗಳ ಸಭೆ ಕರೆದು ಜನರಿಗೆ ಸರಿಯಾಗಿ ಸ್ಪಂದಿಸಲು ಚುರುಕು ಮುಟ್ಟಿಸುವ ಕೆಲಸ ಸಚಿವರು ಮಾಡಬೇಕು ಎಂದರು. ಸರ್ಕಾರದ ಪ್ರಜಾಸೇವಾ ಕಾರ್ಯಕ್ರಮ ಜನರಿಗೆ ತಲುಪಿದಾಗ ಮಾತ್ರ ಯಶಸ್ವಿಯಾಗಲು ಸಾಧ್ಯವಾಗುತ್ತದೆ ಎಂದರು.
ಜಿಲ್ಲಾಧಿಕಾರಿ ಸ್ನೇಹಲ್. ಆರ್ ಮಾತನಾಡಿ ಅರ್ಥವಿಕವಾಗಿ ಮಾತನಾಡಿದರು.
ಸಾರ್ವಜನಿಕರಿಂದ 417 ಅಹವಾಲು ಸಲ್ಲಿಕೆ:
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ 132, ಕಂದಾಯ 122, ವಸತಿ 25, ನಗರಾಭಿವೃದ್ಧಿ 20, ಕಾರ್ಮಿಕ 18, ಆಹಾರ ಇಲಾಖೆ 17, ಮಹಿಳಾ ಮತ್ತು ಮಕ್ಕಳ ಇಲಾಖೆ ಮತ್ತು ವಿಶೇಷಚೇತನರ ಹಿರಿಯ ನಾಗರಿಕರ ಇಲಾಖೆ 12, ಕೌಶಲ್ಯಾಭಿವೃದ್ಧಿ 10, ಉನ್ನತ‌ ಶಿಕ್ಷಣ ಇಲಾಖೆ 8, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಇಂಧನ, 7, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಹಾಗೂ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ತಲಾ 6, ಲೋಕೋಪಯೋಗಿ ಇಲಾಖೆ 5, ಗೃಹ ಇಲಾಖೆ 4, ಹಿಂದುಳಿದ ವರ್ಗಗಳ ಇಲಾಖೆ, ಅರಣ್ಯ ಇಲಾಖೆ 3, ಇನ್ನಿತರ ಇಲಾಖೆಗಳ ಅರ್ಜಿ ಸೇರಿದಂತೆ 417 ವಿವಿಧ ಸಮಸ್ಯೆಗಳ ಅರ್ಜಿಗಳು ಸಲ್ಲಿಕೆಯಾಗಿವೆ.
📲Get App