🔥 TRENDING 13 Dead in Ras Al Khaimah Crash, India... Madhya Pradesh sees sharp temperature... India to hold talks on Hasina extradit... KCR’s aide among two dead in road cras... Indian Diaspora in Manila Celebrates P... UAE Bus-Truck Collision Claims 13 Live...
25 Nov 2026•
ગુજરાતી मराठी ਪੰਜਾਬੀ বাংলা
Politics

ರೈತರ ರಸ್ತೆ ರೊಕೊ ಚಳುವಳಿ ನ.30ಕ್ಕೆ ಮುಂದೂಡಿಕೆ

✍️ Reporter: Basavaraj pujari 🗓 25 Nov 2026, 06:58 AM 👁 13
Share: 💬 WhatsApp 📘 Facebook 𝕏 Post

ಬೀದರ್: ಜಿಲ್ಲೆಯ ರೈತರ ವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ ಆಗ್ರಹಿಸಿ ನವೆಂಬರ್ 25ರಂದು ಸಂತಪೂರ ಗ್ರಾಮದ ಬಸವೇಶ್ವರ ವೃತ್ತದ ಸಮೀಪ ರಾಷ್ಟ್ರೀಯ ಹೆದ್ದಾರಿ ತಡೆದು ಹಮ್ಮಿಕೊಳ್ಳಲಾಗಿದ್ದ ರಸ್ತೆ ರೊಕೊ ಚಳುವಳಿಯನ್ನು ನವೆ

ರೈತರ ರಸ್ತೆ ರೊಕೊ ಚಳುವಳಿ ನ.30ಕ್ಕೆ ಮುಂದೂಡಿಕೆ
ಬೀದರ್: ಜಿಲ್ಲೆಯ ರೈತರ ವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ ಆಗ್ರಹಿಸಿ ನವೆಂಬರ್ 25ರಂದು ಸಂತಪೂರ ಗ್ರಾಮದ ಬಸವೇಶ್ವರ ವೃತ್ತದ ಸಮೀಪ ರಾಷ್ಟ್ರೀಯ ಹೆದ್ದಾರಿ ತಡೆದು ಹಮ್ಮಿಕೊಳ್ಳಲಾಗಿದ್ದ ರಸ್ತೆ ರೊಕೊ ಚಳುವಳಿಯನ್ನು ನವೆಂಬರ್ 30ಕ್ಕೆ ಮುಂದೂಡಲಾಗಿದೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಶ್ರೀಮಂತ ಬಿರಾದಾರ ತಿಳಿಸಿದ್ದಾರೆ.

ನವೆಂಬರ್ 25ರಂದು ರೈತ ಸಂಘದ ವತಿಯಿಂದ ರಸ್ತೆ ರೊಕೊ ಚಳುವಳಿ ಹಮ್ಮಿಕೊಳ್ಳಲಾಗಿತ್ತು. ಆದರೆ, ರೈತರ ಹೋರಾಟಕ್ಕೆ ಭದ್ರತೆ ಒದಗಿಸುವ ಪೊಲೀಸ್ ಇಲಾಖೆಯ ಸಿಬ್ಬಂದಿ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ, ನಾಳೆ ನಡೆಯಬೇಕಿದ್ದ ಪ್ರತಿಭಟನೆಯನ್ನು ನವೆಂಬರ್ 30ಕ್ಕೆ ಮುಂದೂಡಲು ನಿರ್ಧರಿಸಲಾಗಿದೆ.

ಆದ್ದರಿಂದ ಜಿಲ್ಲೆಯ ಎಲ್ಲಾ ರೈತ ಬಾಂಧವರು ನವೆಂಬರ್ 30ರಂದು ಸಂತಪೂರ ಗ್ರಾಮದ ಬಸವೇಶ್ವರ ವೃತ್ತದ ಸಮೀಪ ನಡೆಯಲಿರುವ ರಸ್ತೆ ರೊಕೊ ಚಳುವಳಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರೈತರ ಸಮಸ್ಯೆಗಳ ಪರಿಹಾರಕ್ಕಾಗಿ ಒಗ್ಗಟ್ಟಿನಿಂದ ಹೋರಾಟ ನಡೆಸಬೇಕೆಂದು ಶ್ರೀಮಂತ ಬಿರಾದಾರ ಮನವಿ ಮಾಡಿದ್ದಾರೆ.
📲Get App