🔥 TRENDING ऑपरेशन चक्रव्यूह: अमेठी पुलिस ने पशु च... ਅਗਲੀ ਅਕਾਲੀ ਸਰਕਾਰ ਵਪਾਰੀਆਂ ਲਈ ਸਵੈ-ਘੋਸ਼ਣਾ... अमेठी में बड़ा प्रशासनिक फेरबदल: एडीएम... जिलाधिकारी का हुवा तबादला पैसों के विवाद में युवक के अपहरण का पर... पटना सिटी के क्षेत्र के भद्र घाट से मा...
16 Nov 2026•
ગુજરાતી मराठी ਪੰਜਾਬੀ বাংলা

ನಾರಾಯಣಪುರ ಕಾಲುವೆ ನೀರಿಗಾಗಿ ರೈತರ ಹೋರಾಟಕ್ಕೆ ಸ್ಪಂದನೆ - ಧರಣಿ ತಾತ್ಕಾಲಿಕವಾಗಿ ಅಂತ್ಯ - 3 ದಿನಗಳ ಅನಿರ್ದಿಷ್ಟಾವಧಿ ಸತ್ಯಾಗ್ರಹ ಧರಣಿ ಬಳಿಕ ನೀರು ಬಿಡುಗಡೆಗೆ ಅಧಿಕಾರಿಗಳ ಭರವಸೆ - ಧರಣಿ ಸ್ಥಳಕ್ಕೆ ಆಗಮಿಸಿದ ಶಾಸಕಿ ಕರಿಯಮ್ಮ ನಾಯಕ್ - ರೈತ ಸಂಘ, ಹಸಿರು ಸೇನೆ ಹೋರಾಟಕ್ಕೆ ಸಂದ ಜಯ

✍️ Reporter: Ningappa 🗓 16 Nov 2026, 08:14 PM 👁 12
Share: 💬 WhatsApp 📘 Facebook 𝕏 Post

ನಾರಾಯಣಪುರ ಕಾಲುವೆ ನೀರಿಗಾಗಿ ರೈತರ ನಿರಂತರ ಹೋರಾಟಕ್ಕೆ ಸ್ಪಂದನೆ - ಧರಣಿ ತಾತ್ಕಾಲಿಕವಾಗಿ ಅಂತ್ಯ - ದೇವದುರ್ಗದಲ್ಲಿ ರೈತ ಸಂಘ, ಹಸಿರು ಸೇನೆ ನೇತೃತ್ವದಲ್ಲಿ 3 ದಿನಗಳ ಅನಿರ್ದಿಷ್ಟಾವಧಿ ಸತ್ಯಾಗ್ರಹ ಧರಣಿ - ನೀರು ಬಿಡುಗಡೆಗೆ ಅಧಿಕಾರಿಗಳ ಭರವಸೆ - ಧರಣಿ ಸ್ಥಳಕ್ಕೆ ಶಾಸಕಿ ಕರಿಯಮ್ಮ ನಾಯಕ್ ಭೇಟಿ

ನಾರಾಯಣಪುರ ಕಾಲುವೆ ನೀರಿಗಾಗಿ ರೈತರ ಹೋರಾಟಕ್ಕೆ ಸ್ಪಂದನೆ - ಧರಣಿ ತಾತ್ಕಾಲಿಕವಾಗಿ ಅಂತ್ಯ

ದೇವದುರ್ಗ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ದೇವದುರ್ಗ ತಾಲೂಕು ಘಟಕದ ನೇತೃತ್ವದಲ್ಲಿ ನಾರಾಯಣಪುರ ಬಲದಂಡೆ ಕಾಲುವೆ ನೀರಿಗಾಗಿ ನ.14ರಂದು ಬೃಹತ್ ಮಟ್ಟದ ಹೋರಾಟ ಹಾಗೂ ರಸ್ತೆ ತಡೆ ನಡೆಸಲಾಯಿತು.

ಅಂದು ಅಧಿಕಾರಿಗಳಿಂದ ಸಮರ್ಪಕ ಭರವಸೆ ದೊರೆಯದ ಹಿನ್ನೆಲೆಯಲ್ಲಿ, ರೈತರ ಹಿತದೃಷ್ಟಿಯಿಂದ ಅನಿರ್ದಿಷ್ಟಾವಧಿ ಸತ್ಯಾಗ್ರಹ ಧರಣಿಯನ್ನು ಆರಂಭಿಸಲಾಯಿತು. ಸತತ ಮೂರು ದಿನಗಳಿಂದ ನಮ್ಮ ಹೋರಾಟ ನಿರಂತರವಾಗಿ ಮುಂದುವರಿಯಿತು.

ಈ ಸಂದರ್ಭದಲ್ಲಿ ನಾರಾಯಣಪುರ ನೀರಾವರಿ ಅಧಿಕಾರಿಗಳು ನಮ್ಮ ಹೋರಾಟದ ವೇದಿಕೆಗೆ ಆಗಮಿಸಿದಾಗ, ಕಾಲುವೆಯಲ್ಲಿ ಲಭ್ಯವಿರುವ ನೀರಿನ ಪ್ರಮಾಣ, ರೈತರಿಗೆ ಹಂಚಿಕೆಯಾಗಬೇಕಾದ ನೀರು ಹಾಗೂ ನೀರು ಬಿಡುಗಡೆ ಮಾಡುವ ಕುರಿತು ನಮ್ಮ ಸಂಘದ ಪದಾಧಿಕಾರಿಗಳು ಸ್ಪಷ್ಟವಾದ ಮಾಹಿತಿ ಮತ್ತು ಪ್ರಶ್ನೆಗಳನ್ನು ಮುಂದಿಟ್ಟರು. ಆರಂಭದಲ್ಲಿ ಸಮರ್ಪಕ ಉತ್ತರ ದೊರೆಯದಿದ್ದರೂ, ಸಂಘದ ಪದಾಧಿಕಾರಿಗಳು ದಾಖಲೆ ಮತ್ತು ಮಾಹಿತಿಯೊಂದಿಗೆ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ ನಂತರ ಅಧಿಕಾರಿಗಳು ರೈತರಿಗೆ ನೀರು ಬಿಡುಗಡೆ ಮಾಡುವುದಾಗಿ ಒಪ್ಪಿಗೆ ಹಾಗೂ ಭರವಸೆ ನೀಡಿದರು.

ನಂತರ ನಮ್ಮ ಹೋರಾಟದ ಉದ್ದೇಶ ಮತ್ತು ರೈತರ ಪರವಾಗಿ ಪದಾಧಿಕಾರಿಗಳು ಮಂಡಿಸಿದ ವಿಚಾರಗಳನ್ನು ಅರಿತುಕೊಂಡು ಮಾನ್ಯ ಶಾಸಕರಾದ ಶ್ರೀಮತಿ ಜಿ. ಕರಿಯಮ್ಮ ನಾಯಕ್ ಅವರು ಧರಣಿ ಸ್ಥಳಕ್ಕೆ ಆಗಮಿಸಿ ನಮ್ಮ ವೇದಿಕೆಗೆ ಗೌರವ ಸಲ್ಲಿಸಿ, ರೈತರೊಂದಿಗೆ ಚರ್ಚಿಸಿದರು.

ಈ ಸಂದರ್ಭದಲ್ಲಿ ನಮ್ಮ ಸಂಘದ ಹೋರಾಟದ ಪ್ರಾಮಾಣಿಕತೆ, ಪದಾಧಿಕಾರಿಗಳ ಸ್ಪಷ್ಟತೆ ಹಾಗೂ ಬದ್ಧತೆಯನ್ನು ಮೆಚ್ಚಿ, ನಿಮ್ಮಂತಹ ಯುವಕರು ನಮ್ಮ ತಾಲೂಕಿಗೆ ಬೇಕು ಎಂದು ಸಂತೋಷದಿಂದ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಅಂತಿಮವಾಗಿ ಅಧಿಕಾರಿಗಳು ಕಾಲುವೆ ನೀರು ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ, ನಮ್ಮ ಜಿಲ್ಲಾ ಅಧ್ಯಕ್ಷರು, ಗೌರವ ಅಧ್ಯಕ್ಷರು, ಜಿಲ್ಲಾ ಉಪಾಧ್ಯಕ್ಷರು ಹಾಗೂ ತಾಲೂಕು ಅಧ್ಯಕ್ಷರ ನೇತೃತ್ವದಲ್ಲಿ ಇಂದು ಮೂರು ದಿನಗಳ ಅನಿರ್ದಿಷ್ಟಾವಧಿ ಧರಣಿಯನ್ನು ತಾತ್ಕಾಲಿಕವಾಗಿ ಕೈಬಿಡಲಾಯಿತು.

ನಮ್ಮ ಹೋರಾಟ ಅಧಿಕಾರಕ್ಕಾಗಿ ಅಲ್ಲ, ರೈತರ ಬದುಕಿಗಾಗಿ. ನಮ್ಮ ಹೋರಾಟ ಯಾರ ವಿರುದ್ಧವೂ ಅಲ್ಲ, ರೈತರಿಗೆ ಸಿಗಬೇಕಾದ ನ್ಯಾಯಯುತ ನೀರಿಗಾಗಿ.

ಈ ಮೂರು ದಿನಗಳ ಹೋರಾಟದಲ್ಲಿ ಹಗಲು-ರಾತ್ರಿ ನಮ್ಮೊಂದಿಗೆ ನಿಂತು ಸಹಕರಿಸಿದ ಸಮಸ್ತ ಅನ್ನದಾತರಿಗೆ, ರೈತ ಬಾಂಧವರಿಗೆ, ವ್ಯಾಪಾರಸ್ಥರಿಗೆ, ಸಂಘದ ಎಲ್ಲಾ ಪದಾಧಿಕಾರಿಗಳಿಗೆ ಹಾಗೂ ಬೆಂಬಲಿಸಿದ ಪ್ರತಿಯೊಬ್ಬರಿಗೂ ಹೃದಯಪೂರ್ವಕ ಧನ್ಯವಾದಗಳು ತಿಳಿಸಿದ ರೈತ ನಾಯಕರು.
📲Get App