🔥 TRENDING *ਐਨ.ਐਮ.ਐਮ.ਐਸ ਅੱਠਵੀਂ ਅਤੇ ਪੀ.ਐਸ.ਟੀ.ਐਸ.ਈ... राजकीय महाविद्यालय खैरथल में निर्वाचन... Non-Metro India Drives Festive Retail... कल्याणपुरा पुरोहितान ब्लॉक चुनाव: 4 प्... Rajasthan Deploys AI‑Driven Digital Go... CM Sharma Meets Union Home Minister to...
19 Nov 2026•
ગુજરાતી मराठी ਪੰਜਾਬੀ বাংলা

ರಾಮದುರ್ಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ತಾಲ್ಲೂಕು ಬದಲಾವಣೆ ಕುರಿತು ನ.24ರಂದು ಗ್ರಾಮಸಭೆ

✍️ Reporter: Khaja Hussain 🗓 19 Nov 2026, 03:52 PM 👁 28
Share: 💬 WhatsApp 📘 Facebook 𝕏 Post
**ದೇವದುರ್ಗ ಬ್ರೇಕಿಂಗ್ ನ್ಯೂಸ್**

# ರಾಮದುರ್ಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ತಾಲ್ಲೂಕು ಬದಲಾವಣೆ ಕುರಿತು ನ.24ರಂದು ಗ್ರಾಮಸಭೆ

### ಅರಕೇರಾ ತಾಲ್ಲೂಕಿನಲ್ಲಿ ಮುಂದುವರಿಸುವ ಅಥವಾ ದೇವದುರ್ಗ ತಾಲ್ಲೂಕಿಗೆ ಸೇರ್ಪಡೆ ಮಾಡುವ ಕುರಿತು ಗ್ರಾಮಸ್ಥರ ಅಭಿಪ್ರಾಯ ಸಂಗ್ರಹ

**ಅರಕೇರಾ:** ರಾಮದುರ್ಗ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಗ್ರಾಮಗಳನ್ನು ಅರಕೇರಾ ತಾಲ್ಲೂಕಿನಲ್ಲಿ ಮುಂದುವರಿಸಬೇಕೇ ಅಥವಾ ದೇವದುರ್ಗ ತಾಲ್ಲೂಕಿಗೆ ಸೇರ್ಪಡೆ ಮಾಡಬೇಕೇ ಎಂಬ ಕುರಿತು ಗ್ರಾಮಸ್ಥರ ಅಭಿಪ್ರಾಯ ಸಂಗ್ರಹಿಸಲು ನವೆಂಬರ್ 24ರಂದು ಗ್ರಾಮಸಭೆ ಆಯೋಜಿಸಲಾಗಿದೆ.

ಅರಕೇರಾ ತಾಲ್ಲೂಕು ತಹಶೀಲ್ದಾರ್ ಕಾರ್ಯಾಲಯದಿಂದ ನವೆಂಬರ್ 19ರಂದು ಹೊರಡಿಸಿರುವ ಸೂಚನಾ ಪತ್ರದ ಪ್ರಕಾರ, ನವೆಂಬರ್ 24ರಂದು ಬೆಳಿಗ್ಗೆ 11 ಗಂಟೆಗೆ ರಾಮದುರ್ಗ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಗ್ರಾಮಸಭೆ ನಡೆಯಲಿದೆ.

ಜಿಲ್ಲಾಧಿಕಾರಿಗಳ ಕಾರ್ಯಾಲಯದಿಂದ ನವೆಂಬರ್ 12ರಂದು ಸ್ವೀಕೃತವಾದ ಪತ್ರದ ನಿರ್ದೇಶನದಂತೆ, ಗ್ರೇಡ್-2 ತಹಶೀಲ್ದಾರ್ ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಯಲಿದೆ.

ರಾಮದುರ್ಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರು ಸಭೆಯಲ್ಲಿ ಕಡ್ಡಾಯವಾಗಿ ಭಾಗವಹಿಸಿ ತಮ್ಮ ಅಭಿಪ್ರಾಯಗಳನ್ನು ತಿಳಿಸಬೇಕು ಎಂದು ತಹಶೀಲ್ದಾರ್ ಕಾರ್ಯಾಲಯದ ಸೂಚನಾ ಪತ್ರದಲ್ಲಿ ಕೋರಲಾಗಿದೆ.
ವರದಿ ಖಾಜಾ ಹುಸೇನ್ ಬಾಬಾ
ಜಾಲಹಳ್ಳಿ
📲Get App