🔥 TRENDING ಇಲಕಲ್ ನಗರದ ಕುಡಿಯುವ ನೀರಿನ ಸಮಸ್ಯೆಗೆ ಶಾಶ್... छठ पूजा पर घर लौट रहे मनीष कुमार झा ला... Kashmir: Killing of Lateef Bhat Crippl... Tripura CM Manik Saha Blames CPI(M) fo... Natural Farming Boosts Yields and Prof... HPBOSE releases December 2026 exam dat...
18 Nov 2026•
ગુજરાતી मराठी ਪੰਜਾਬੀ বাংলা

ಜನನುಡಿ 2026 ಕಾರ್ಯಕ್ರಮ ಸಭೆ ಹಾಗೂ ಪೋಸ್ಟರ್ ಬಿಡುಗಡೆ @ಧಾರವಾಡ - ನವೆಂಬರ್ 28-29 ರಂದು ಮಂಗಳೂರಿನಲ್ಲಿ ಜನನುಡಿ - ಡಾ. ಕೆ.ಆರ್ ದುರ್ಗಾದಾಸ್ ಅಧ್ಯಕ್ಷತೆಯಲ್ಲಿ ಸಭೆ

✍️ Reporter: Ningappa 🗓 18 Nov 2026, 10:03 PM 👁 20
Share: 💬 WhatsApp 📘 Facebook 𝕏 Post

ಜನನುಡಿ 2026 ಕಾರ್ಯಕ್ರಮ ಸಭೆ ಹಾಗೂ ಪೋಸ್ಟರ್ ಬಿಡುಗಡೆ @ಧಾರವಾಡ - ನವೆಂಬರ್ 28-29 ರಂದು ಮಂಗಳೂರಿನಲ್ಲಿ ಜನನುಡಿ - ಕನ್ನಡ ಸಾಹಿತ್ಯ ಪರಿಷತ್ತು ಸಭಾಂಗಣದಲ್ಲಿ ಸಭೆ, ಪೋಸ್ಟರ್ ಬಿಡುಗಡೆ - ಡಾ. ಕೆ.ಆರ್ ದುರ್ಗಾದಾಸ್ ಅಧ್ಯಕ್ಷತೆ - ಮುನೀರ್ ಕಾಟಿಪಳ್ಳ, ಡಾ. ಶಿವಾನಂದ ಶೆಟ್ಟರ ಸೇರಿದಂತೆ ಹಲವರಿಂದ ಮಾತು

ಜನನುಡಿ 2026 ಕಾರ್ಯಕ್ರಮ ಸಭೆ ಹಾಗೂ ಪೋಸ್ಟರ್ ಬಿಡುಗಡೆ

ಧಾರವಾಡ: ಧಾರವಾಡದ ಕನ್ನಡ ಸಾಹಿತ್ಯ ಪರಿಷತ್ತು ಸಭಾಂಗಣದಲ್ಲಿ ಇಂದು ಇದೇ ನವೆಂಬರ್ 28-29 ರಂದು ಮಂಗಳೂರಿನಲ್ಲಿ ನಡೆಯಲಿರುವ ಜನನುಡಿ ಕುರಿತು ಸಭೆ ಹಾಗೂ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ನಿವೃತ್ತ ಕುಲಸಚಿವರಾದ ಡಾ. ಕೆ.ಆರ್ ದುರ್ಗಾದಾಸ್ ಅವರು ವಹಿಸಿದ್ದರು. ಜನನುಡಿ ಕಾರ್ಯಕ್ರಮದ ಕುರಿತು ಸಂಘಟಕರಾದ ಮುನೀರ್ ಕಾಟಿಪಳ್ಳ, ಕವಿವಿ ಗಾಂಧಿ ಅಧ್ಯಯನ ಪೀಠದ ನಿವೃತ್ತ ಅಧ್ಯಕ್ಷರಾದ ಡಾ. ಶಿವಾನಂದ ಶೆಟ್ಟರ, ಲಡಾಯಿ ಪ್ರಕಾಶನದ ಬಸವರಾಜ ಸೂಳಿಬಾವಿ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರಾದ ಡಾ. ಲಿಂಗರಾಜ ಅಂಗಡಿ, ಹಿರಿಯ ಕಾರ್ಮಿಕ ಮುಖಂಡರಾದ ಬಿ.ಎನ್ ಪೂಜಾರಿ, ಚಿಂತಕರಾದ ಎಚ್.ಜಿ ದೇಸಾಯಿ, ಯುವ ಚಿಂತಕರಾದ ಡಾ. ರಾಘವೇಂದ್ರ ಪಾಟೀಲ ಮಾತನಾಡಿದರು.

ಈ ಸಂದರ್ಭದಲ್ಲಿ ಪ್ರಗತಿಪರ ಸಂಘಟನೆಗಳ ಮುಖಂಡರಾದ ಮಹೇಶ ಪತ್ತಾರ, ಎ.ಎಂ ಖಾನ್, ಬಸವರಾಜ ಪೂಜಾರ, ಪ್ರೇಮಾ ನಡುವಿನಮನಿ, ಕೆ.ಎಸ್ ಕೌಜಲಗಿ, ಕೆ.ಎಚ್ ಪಾಟೀಲ, ಗೌಸ್ ಪೀರಣ್ಣನವರ, ಡಿ. ಸ್ಯಾಮ್ಸನ್, ಕೃಷ್ಣಾ ರಾಠೋಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
📲Get App