🔥 ट्रेंडिंग 58वें वार्षिक मेला महोत्सव के पोस्टर क... धार जिला अस्पताल की आईसीयू में विशेषज्... दिल्ली में कांग्रेस नेताओं की हिरासत प... नागपुर‑कटोल रोड पर आल्टो कार उलटी, आग... कांग्रेस के सभी बड़े नेता मौजुद रहे हांसपुर: सरपंच पद उम्मीदवार महेश कुमार...
08 अक्टू. 2026•
ગુજરાતી मराठी ਪੰਜਾਬੀ বাংলা

ತಾಲೂಕು ಮಟ್ಟದ ಯುವ ಸಂಸತ್ತು 2026

✍️ रिपोर्टर: Mallikarjun Gabbur 🗓 08 अक्टू. 2026, 03:30 PM 👁 15
यहाँ देखें: 📘 Facebook
शेयर करें: 💬 WhatsApp 📘 Facebook 𝕏 Post

ಯುವ ಸಂಸತ್ತು ಎಂಬುದು ಭಾರತದಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಯುವ ಪೀಳಿಗೆಗೆ ಪರಿಚಯಿಸುವ ಒಂದು ಪ್ರಮುಖ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವಾಗಿದೆ. ಯುವ ಸಂಸತ್ತು ಯುವಕರನ್ನು ಪ್ರಜಾಪ್ರಭುತ್ವದ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಲು ಮತ್ತು ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡಲು ಒಂದು ವೇದಿಕೆಯನ್ನು ಒದಗಿಸುತ್ತದೆ ಎಂದು ತಾಲೂಕ ಆಡಳಿತ ಬಸವನಬಾಗೇವಾಡಿ ಹಮ್ಮಿಕೊಂಡಿದ್ದ ಯುವ ಸಂಸತ್ತು 2026ರ ಕಾರ್ಯಕ್ರಮದಲ್ಲಿ ಪ್ರಸ್ತಾವಿಕವಾಗಿ ಬಸವನಬಾಗೇವಾಡಿಯ ತಹಶೀಲ್ದಾರರಾದ ಶ್ರೀ ವಾಯ್ ಎಸ್ ಸೋಮನಕಟ್ಟಿ ಮಾತನಾಡಿದರು.

ಪಂಚ ಗ್ಯಾರಂಟಿಯ ತಾಲೂಕ ಸಮಿತಿ ಅಧ್ಯಕ್ಷರಾದ ಶ್ರೀ ಮಹಬೂಬ್ ನಾಯ್ಕೋಡಿ ಮಾನಾಡುತ್ಥ ಯುವ ಸಂಸತ್ತು ಕೇವಲ ಒಂದು ಸ್ಪರ್ಧೆ ಅಥವಾ ಕಾರ್ಯಕ್ರಮವಲ್ಲ; ಅದು ಪ್ರಜಾಪ್ರಭುತ್ವದ ಪಾಠಶಾಲೆ. ಇಲ್ಲಿ ನಾವು ಪ್ರಶ್ನಿಸುವುದು, ಚರ್ಚಿಸುವುದು, ವಾದ ಮಂಡಿಸುವುದು, ಭಿನ್ನಾಭಿಪ್ರಾಯಗಳನ್ನು ಗೌರವಿಸುವುದು ಮತ್ತು ಸಂವಿಧಾನದ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದು ಕಲಿಯುತ್ತೇವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ತಾಲೂಕ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ವೆಂಕಟೇಶ ವಂದಾಲ , ಪೋಲೀಸ ಉಪವಿಭಾಗಿಧಿಕಾರಿಗಳಾದ ಶ್ರೀ ಚಂದ್ರಕಾಂತ್ ನಂದರೆಡ್ಡಿ , ಸಹಾಯಕ ನಿರ್ದೇಶಕರು ಸಮಾಜಕಲ್ಯಾಣ ಅಧಿಕಾರಿಗಳು ಶ್ರೀಮತಿ ಮಂಜುಳಾ ಹಿರೇಮನಿ , ಬಸವನಬಾಗೇವಾಡಿ ತಾಲೂಕ ವಕೀಲರ ಸಂಘದ ಅಧ್ಯಕ್ಷರಾದ ಶ್ರೀ ಅಶೋಕ ಕೋಲಕಾರ , ಸರ್ಕಾರಿ ಪ್ರಥಮ ದರ್ಜೆ ಕಾಲೇಜ ಪ್ರಾಂಶುಪಾಲರಾದ ಶ್ರೀ ಎನ್ ಬಿ ಹೊಸಮನಿ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಮತಿ ರೇಣುಕಾ ಕಲಬುರ್ಗಿ, ಪುರಸಭೆ ಮುಖ್ಯ ಅಧಿಕಾರಿಗಳಾದ ಶ್ರೀ ಎಚ್ ಎಸ್ ಚಿತ್ತರಗಿ ಉಪಸ್ಥಿತರಿದ್ದರು.
ತಾಲೂಕಿನ ಆಯ್ದ ಪ್ರೌಢಶಾಲೆ, ಪದವಿ ಪೂರ್ವಕಾಲೇಜು ಹಾಗೂ ಪದವಿ ಕಾಲೇಜಿನಿಂದ 112 ವಿದ್ಯಾರ್ಥಿಗಳು ಆಡಳಿತ ಪಕ್ಷದ ಸದಸ್ಯರಾಗಿ ಹಾಗೂ ವಿರೋಧ ಪಕ್ಷದ ಸದಸ್ಯರಾಗಿ ಹಾಗೂ ಸಂಸತ್ತಿನ ಸಭಾಧ್ಯಕ್ಷರಾಗಿ ಅಚ್ಚುಕಟ್ಟಾಗಿ ಯುವ ಸಂಸತ್ತನ್ನು ಮುನ್ನಡೆಸಿದರು.
📲Get App