🔥 TRENDING भिटौरा चौकी क्षेत्र में वन माफिया सक्र... 19-Year-Old Nursing Student Brutally B... AI‑Driven Cyberattacks Threaten Indian... Telugu Series 'Baa Baa Black Sheep' De... Maxton Hall Season 3 to Stream on Prim... ಸೋಮನಮರಡಿ ಮರು ಸೇರ್ಪಡೆಗೆ ಜನಾಭಿಪ್ರಾಯ ಸಭೆ...
05 Nov 2026•
ગુજરાતી मराठी ਪੰਜਾਬੀ বাংলা

ಸಿಂಧನೂರು: ಡಿಸೆಂಬರ್ ಅಂತ್ಯದೊಳಗೆ ಅರ್ಹರಿಗೆ ಇ-ಸ್ವತ್ತು ವಿತರಿಸಿ - ಪಿಡಿಒಗಳಿಗೆ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಹಾಲಸಿದ್ದಪ್ಪ ಸೂಚನೆ - ಸಭೆಗೆ 20, ಅರ್ಧದಷ್ಟು ಪಿಡಿಒಗಳ ಗೈರು

✍️ Reporter: Ningappa 🗓 05 Nov 2026, 08:02 AM 👁 21
Share: 💬 WhatsApp 📘 Facebook 𝕏 Post

ಸಿಂಧನೂರು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಹಾಲಸಿದ್ದಪ್ಪ ಅಧ್ಯಕ್ಷತೆಯಲ್ಲಿ ಮಹತ್ವದ ಸಭೆ - ಭೂ ಗ್ಯಾರಂಟಿ ಯೋಜನೆಯಡಿ ಡಿಸೆಂಬರ್ ಅಂತ್ಯದೊಳಗೆ ಎಲ್ಲಾ ಅರ್ಹ ಆಸ್ತಿ ಮಾಲೀಕರಿಗೆ ಇ-ಸ್ವತ್ತು ವಿತರಣೆ ಪೂರ್ಣಗೊಳಿಸಲು ಸೂಚನೆ - 7 ದಿನ ಆಕ್ಷೇಪಣೆಗೆ ಅವಕಾಶ ನೀಡಿ, ದಾಖಲೆ ಪರಿಶೀಲಿಸಿ ವಿತರಿಸಲು ಸೂಚನೆ - ಮಹತ್ವದ ಸಭೆಗೇ ತಾಲೂಕು ಪಂಚಾಯಿತಿ EO ಚಂದ್ರಶೇಖರ್ ಗೈರು, ಅರ್ಧದಷ್ಟು ಪಿಡಿಒಗಳು ಗೈರು - ಆಡಳಿತಾತ್ಮಕ ನಿರ್ಲಕ್ಷ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ

ಡಿಸೆಂಬರ್ ಅಂತ್ಯದೊಳಗೆ ಅರ್ಹರಿಗೆ ಇ-ಸ್ವತ್ತು ವಿತರಿಸಿ - ಪಿಡಿಒಗಳಿಗೆ ಸೂಚನೆ

ಸಿಂಧನೂರು: ಸಿಂಧನೂರು ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಹಾಲಸಿದ್ದಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಡಿಸೆಂಬರ್ ಅಂತ್ಯದೊಳಗೆ ಸೂಕ್ತ ದಾಖಲೆಗಳನ್ನು ಹೊಂದಿರುವ ಪ್ರತಿಯೊಬ್ಬ ಅರ್ಹ ಆಸ್ತಿ ಮಾಲೀಕರಿಗೂ ಇ-ಸ್ವತ್ತು ವಿತರಿಸುವಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ (ಪಿಡಿಒ) ಸೂಚನೆ ನೀಡಿದರು.

ಬುಧವಾರ ನಡೆದ ಸಭೆಯಲ್ಲಿ ಭೂ ಗ್ಯಾರಂಟಿ ಯೋಜನೆಯಡಿ ಪಂಚಾಯತ್ ರಾಜ್ ಇಲಾಖೆಯ ನಿರ್ದೇಶನದಂತೆ ಇ-ಸ್ವತ್ತು ವಿತರಣೆ ಕಾರ್ಯವನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಬೇಕು ಎಂದು ತಿಳಿಸಿದರು. ಆಸ್ತಿ ಮಾಲೀಕರಿಗೆ ನೋಟಿಸ್ ಜಾರಿಗೊಳಿಸಿ, ಆಕ್ಷೇಪಣೆ ಸಲ್ಲಿಸಲು ಏಳು ದಿನಗಳ ಕಾಲಾವಕಾಶ ನೀಡಬೇಕು. ನಂತರ ವಿದ್ಯುತ್ ಬಿಲ್ ಸೇರಿದಂತೆ ಲಭ್ಯವಿರುವ ಸೂಕ್ತ ದಾಖಲೆಗಳನ್ನು ಪರಿಶೀಲಿಸಿ, ಆಸ್ತಿಯ ನೈಜ ಮಾಲೀಕರಿಗೆ ಇ-ಸ್ವತ್ತು ನೀಡಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಗ್ರಾಮ ಪಂಚಾಯಿತಿವಾರು ಒಟ್ಟು ಆಸ್ತಿಗಳ ಸಂಖ್ಯೆ, ಈಗಾಗಲೇ ಇ-ಸ್ವತ್ತು ನೀಡಿರುವ ಆಸ್ತಿಗಳು ಹಾಗೂ ಬಾಕಿ ಉಳಿದಿರುವ ಆಸ್ತಿಗಳ ವಿವರಗಳನ್ನು ಹಾಜರಿದ್ದ ಪಿಡಿಒಗಳಿಂದ ಪಡೆದು ಪರಿಶೀಲನೆ ನಡೆಸಿದರು.

ಸಭೆಗೆ 20 ಗೈರು, ಅರ್ಧದಷ್ಟು ಪಿಡಿಒಗಳೂ ಗೈರು!
ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಮಹತ್ವದ ಸಭೆ ನಡೆಯುತ್ತಿದ್ದರೂ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ್ ಅವರ ಗೈರುಹಾಜರಿ ಎದ್ದು ಕಾಣಿಸಿತು. ಅಲ್ಲದೆ, ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳ ಅರ್ಧದಷ್ಟು ಪಿಡಿಒಗಳು ಸಭೆಗೆ ಹಾಜರಾಗದಿರುವುದು ಚರ್ಚೆಗೆ ಗ್ರಾಸವಾಯಿತು.

ಗ್ರಾಮೀಣ ಭಾಗದ ಆಸ್ತಿ ಮಾಲೀಕರಿಗೆ ಅನುಕೂಲ ಕಲ್ಪಿಸುವ ಮಹತ್ವದ ಇ-ಸ್ವತ್ತು ವಿತರಣೆಯಂತಹ ಸಭೆಗೆ ಅಧಿಕಾರಿಗಳೇ ಗೈರು ಹಾಜರಾಗಿರುವುದು ಆಡಳಿತಾತ್ಮಕ ನಿರ್ಲಕ್ಷ್ಯಕ್ಕೆ ಸಾಕ್ಷಿಯೇ ಎಂಬ ಪ್ರಶ್ನೆ ಮೂಡಿದೆ. ಇಂತಹ ಮಹತ್ವದ ಸಭೆಗಳಿಗೆ ಸಂಬಂಧಿಸಿದ ಎಲ್ಲಾ ಅಧಿಕಾರಿಗಳು ಕಡ್ಡಾಯವಾಗಿ ಹಾಜರಾಗಿ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕೆಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.

ಸಭೆಯಲ್ಲಿ ತಾಲೂಕು ಪಂಚಾಯಿತಿ ಎಡಿ ಯಂಕಪ್ಪ ಕುರುಕುಂದ ಸೇರಿದಂತೆ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
📲Get App