🔥 TRENDING भानु तिवारी ने काजल गोंड हत्याकांड में... આ સુધારો અફઘાનિસ્તાન, બાંગ્લાદેશ અને પ... ரயில்களில் பட்டாசு கொண்டு சென்றால் 3 ஆ... नीड़ 24 न्यूज़ हरपालपुर हरदोई नवागत पुलिस प्रमुख आदित्य मिश्रा ने दे... Cyclones and El Nino: Is India's Food...
06 Nov 2026•
ગુજરાતી मराठी ਪੰਜਾਬੀ বাংলা

ದಲಿತರ ಮೇಲಿನ ದೌರ್ಜನ್ಯ ಖಂಡಿಸಿ ಪ್ರತಿಭಟನೆ ಧರಣಿ - ನವೆಂಬರ್ 2 ರಂದು ದೇವದುರ್ಗ ತಹಶೀಲ್ದಾರ ಕಚೇರಿ ಮುಂದೆ ದಲಿತ ಸಂಘರ್ಷ ಸಮಿತಿ ಪ್ರತಿಭಟನೆ

✍️ Reporter: Ningappa 🗓 31 Oct 2026, 10:19 PM 👁 56
Share: 💬 WhatsApp 📘 Facebook 𝕏 Post

ದಲಿತ ಸಮುದಾಯದ ಮೇಲೆ ನಡೆಯುತ್ತಿರುವ ಶೋಷಣೆ, ಕೊಲೆ, ಅತ್ಯಾಚಾರ ಪ್ರಕರಣಗಳನ್ನು ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ನವೆಂಬರ್ 2 ರಂದು ದೇವದುರ್ಗದಲ್ಲಿ ಬೃಹತ್ ಪ್ರತಿಭಟನಾ ಧರಣಿ

ದೇವದುರ್ಗ: ಕರ್ನಾಟಕ ದಲಿತ ಸಂಘರ್ಷ ಸಮಿತಿ( (ರಿ) ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ನೇತೃತ್ವದಲ್ಲಿ ದಲಿತ ಸಮುದಾಯಗಳ ಮೇಲೆ ನಡೆಯುತ್ತಿರುವ ಶೋಷಣೆ, ಕೊಲೆ, ಅತ್ಯಾಚಾರ ಘಟನೆಗಳನ್ನು ಖಂಡಿಸಿ ಇದೇ ನವೆಂಬರ್ 02 ರಂದು ದೇವದುರ್ಗ ತಹಶಿಲ್ದಾರ ಕಛೇರಿ ಮುಂದೆ ಬೃಹತ್ ಪ್ರತಿಭಟನಾ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ತಾಲ್ಲೂಕು ಸಂಚಾಲಕ ರಮೇಶ್ ಬಾವಿಮನಿ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ‌.

ದಲಿತ ಸಮುದಾಯಗಳ ಮೇಲೆ ನಿರಂತರವಾಗಿ ನಡೆಯುತ್ತಿರುವ,ಶೋಷಣೆ, ಕೊಲೆ, ಅತ್ಯಾಚಾರ ಹಾಗೂ ದೌರ್ಜನ್ಯದ ಘಟನೆಗಳನ್ನು ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಈ ಪ್ರತಿಭಟನೆ ಆಯೋಜಿಸಿದೆ.

ಈ ಹೋರಾಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದಲಿತರು, ಪ್ರಗತಿಪರರು ಭಾಗವಹಿಸಬೇಕು ಎಂದು ಮನವಿ ಮಾಡಿದರು
📲Get App