🔥 TRENDING Sikkim High Court Quashes Criminal Cas... ಸೆಂಟ್ರಲ್ ಕಿಚನ್ ರಚನೆ ಕೈಬಿಡಲು ಸಿಐಟಿಯು ಆಗ... पुगल मे सरपंच इंद्र सिंह राठौड़ का स्व... शिक्षक भर्ती हनुमानगढ़ से पटना के लिए स्पेशल ट्रेन... 4.9‑Magnitude Earthquake Strikes West...
12 Nov 2026•
ગુજરાતી मराठी ਪੰਜਾਬੀ বাংলা

ಕಾರ್ಮಿಕರ ಹಕ್ಕುಗಳಿಗಾಗಿ ಜಾಗೃತಿ ಅಭಿಯಾನ - ದೇವದುರ್ಗದ ಗೌರಂಪೇಟೆಯಲ್ಲಿ ಕಟ್ಟಡ ಕಾರ್ಮಿಕರಿಗೆ ಮಾಹಿತಿ - ನ.16 ಪ್ರತಿಭಟನೆ, ಡಿಸೆಂಬರ್ 1,2,3 ದೆಹಲಿ ಚಲೋಗೆ ಕರೆ

✍️ Reporter: Ningappa 🗓 12 Nov 2026, 10:48 AM 👁 13
Share: 💬 WhatsApp 📘 Facebook 𝕏 Post

ದೇವದುರ್ಗದ ಗೌರಂಪೇಟೆಯಲ್ಲಿ ಕಾರ್ಮಿಕರ ಹಕ್ಕುಗಳಿಗಾಗಿ ಜಾಗೃತಿ ಅಭಿಯಾನ - CWFI-CITU ವತಿಯಿಂದ ಕಟ್ಟಡ ಕಾರ್ಮಿಕರ ಭೇಟಿ - ಕಾರ್ಮಿಕರ ಹಕ್ಕುಗಳು, ಕಾನೂನುಗಳು, ಸೌಲಭ್ಯಗಳ ಬಗ್ಗೆ ಮಾಹಿತಿ - ನ.16 ಪ್ರತಿಭಟನೆ, ಡಿಸೆಂಬರ್ 1,2,3 ದೆಹಲಿ ಚಲೋ ಹೋರಾಟಕ್ಕೆ ಕರೆ - ಕಾರ್ಮಿಕರ ಐಕ್ಯತೆಗೆ ಮನವಿ

ರಾಯಚೂರು: ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ (ರಿ.) CWFI–CITU ವತಿಯಿಂದ
ದಿನಾಂಕ 16 ನವೆಂಬರ್ 2026 ರಂದು ನಡೆಯಲಿರುವ ಕಾರ್ಮಿಕರ ಪ್ರತಿಭಟನೆ ಹಾಗೂ ಡಿಸೆಂಬರ್ 1, 2 ಮತ್ತು 3 ರಂದು ನಡೆಯಲಿರುವ ದೆಹಲಿ ಚಲೋ ಹೋರಾಟದ ಅಂಗವಾಗಿ ಇಂದು ದೇವದುರ್ಗದ ಗೌರಂಪೇಟೆಯಲ್ಲಿ ಇಲಿಯಾಸ್ ಮತ್ತು ಬಂದೇ ನವಾಜ್ ಮೇಸ್ತ್ರಿ ಅವರ ಬಳಿ ಕೆಲಸ ನಿರ್ವಹಿಸುತ್ತಿರುವ ಕಟ್ಟಡ ಕಾರ್ಮಿಕರನ್ನು ಭೇಟಿಯಾಗಿ ಹೋರಾಟದ ಕುರಿತು ಮಾಹಿತಿ ನೀಡಲಾಯಿತು ಎಂದು ಕಟ್ಟಡ ಕಾರ್ಮಿಕ ಸಂಘಟನೆ ಜಿಲ್ಲಾ ಉಪಾಧ್ಯಕ್ಷ ಯೂಸುಫ್ ಸಾಬ್ ಗೌಡಿಕಾರ್ ತಿಳಿಸಿದರು.

ಈ ಸಂದರ್ಭದಲ್ಲಿ ಕಾರ್ಮಿಕರ ಹಕ್ಕುಗಳು, ಕಾರ್ಮಿಕ ಕಾನೂನುಗಳು, ಸರ್ಕಾರದಿಂದ ದೊರೆಯಬೇಕಾದ ಸೌಲಭ್ಯಗಳು ಹಾಗೂ ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸಲಾಯಿತು.

ನವೆಂಬರ್ 16ರ ಪ್ರತಿಭಟನೆಯಲ್ಲಿ ಹಾಗೂ ಡಿಸೆಂಬರ್ 1, 2 ಮತ್ತು 3ರ ದೆಹಲಿ ಚಲೋ ಹೋರಾಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರು ಭಾಗವಹಿಸಿ ಹೋರಾಟವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಲಾಯಿತು.

ಕಾರ್ಮಿಕರ ಐಕ್ಯತೆ – ಹೋರಾಟದ ಶಕ್ತಿ!
📲Get App