🔥 ट्रेंडिंग પોલીસ સબ ઇન્સ્પેક્ટર યશવંત બી. બારોટની... PM ਮੋਦੀ ਦੀ ਰਹਿਨੁਮਾਈ ਹੇਠ ਪੰਜਾਬ 'ਚ ਵੀ ਭਾ... ਆਮ ਆਦਮੀ ਪਾਰਟੀ ਵੱਲੋਂ ਉਮੀਦਵਾਰਾਂ ਦੀ ਪਹਿਲੀ... ਜ਼ਮੀਨਾਂ ਖ਼ਰੀਦਣ ਦੀ ਲੱਗੀ ਦੌੜ , ਅਫ਼ਸਰ ਵੱਡ... गुवाहाटी हवाई अड्डे को अगरवूड निर्यात... एल्लीसे पेर्री ने 20 सीज़न पूरे, स्वयं...
31 अक्टू. 2026•
ગુજરાતી मराठी ਪੰਜਾਬੀ বাংলা
शिक्षा

ರಕ್ಷಣೆಗಾಗಿ 1098 ಗೆ ಕರೆ ಮಾಡಿ

✍️ रिपोर्टर: Basavaraj pujari 🗓 31 अक्टू. 2026, 06:34 PM 👁 18
शेयर करें: 💬 WhatsApp 📘 Facebook 𝕏 Post

ಬೀದರ್: ಮಕ್ಕಳು ಸಂಕಷ್ಟದಲ್ಲಿದ್ದರೆ ರಕ್ಷಣೆಗಾಗಿ ಮಕ್ಕಳ ಸಹಾಯವಾಣಿ ಸಂಖ್ಯೆ 1098 ಗೆ ಕರೆ ಮಾಡಬೇಕು ಎಂದು ಬೀದರ್ ಡಿವೈಎಸ್‍ಪಿ ದೂದ್‍ಪೀರ್ ಎಚ್. ಮುಲ್ಲಾ ಹೇಳಿದರು. ತಾಲ್ಲೂಕಿನ ಚೊಂಡಿ ಸಮೀಪದ ದಿ ಇನ್ಫಿನಿಟಿ ಶಾಲೆಯಲ್ಲ

ರಕ್ಷಣೆಗಾಗಿ 1098 ಗೆ ಕರೆ ಮಾಡಿ

ಬೀದರ್: ಮಕ್ಕಳು ಸಂಕಷ್ಟದಲ್ಲಿದ್ದರೆ ರಕ್ಷಣೆಗಾಗಿ ಮಕ್ಕಳ ಸಹಾಯವಾಣಿ ಸಂಖ್ಯೆ 1098 ಗೆ ಕರೆ ಮಾಡಬೇಕು ಎಂದು ಬೀದರ್ ಡಿವೈಎಸ್‍ಪಿ ದೂದ್‍ಪೀರ್ ಎಚ್. ಮುಲ್ಲಾ ಹೇಳಿದರು.
ತಾಲ್ಲೂಕಿನ ಚೊಂಡಿ ಸಮೀಪದ ದಿ ಇನ್ಫಿನಿಟಿ ಶಾಲೆಯಲ್ಲಿ ಶುಕ್ರವಾರ ಸುರಕ್ಷಿತ ಬಾಲ್ಯ ಅಭಿಯಾನ ಪ್ರಯುಕ್ತ ನಡೆದ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಉಚಿತ ಕಾನೂನು ನೆರವಿಗೆ ಸಹಾಯವಾಣಿ ಸಂಖ್ಯೆ 15100 ಹಾಗೂ ಸೈಬರ್ ಅಪರಾಧಕ್ಕೆ ಸಂಬಂಧಿಸಿದಂತೆ ಸಹಾಯವಾಣಿ ಸಂಖ್ಯೆ 1930 ಗೆ ಸಂಪರ್ಕಿಸಬಹುದು ಎಂದು ತಿಳಿಸಿದರು.
ಮಕ್ಕಳ ಸುರಕ್ಷತೆ ಹಾಗೂ ಮಕ್ಕಳ ಹಕ್ಕುಗಳ ಕುರಿತು ಸಹ ಅವರು ಮಾಹಿತಿ ನೀಡಿದರು.
ಶಾಲೆಯ ಅಧ್ಯಕ್ಷ ನಿರಂಜನ್ ಶೀಲವಂತ ಮಾತನಾಡಿ, ಮಕ್ಕಳ ಸುರಕ್ಷತೆ ಹಾಗೂ ಮಕ್ಕಳ ಹಕ್ಕು ರಕ್ಷಣೆ ಎಲ್ಲರ ಹೊಣೆಯಾಗಿದೆ ಎಂದು ತಿಳಿಸಿದರು.
ಕಾನೂನು ಅರಿವು ಮೂಡಿಸುವ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಬೇಕು ಎಂದು ಶಾಲೆಯ ಆಡಳಿತಾಧಿಕಾರಿ ಡಾ. ಲಕ್ಷ್ಮಿ ಮುಗಳಿ ಹೇಳಿದರು.
ಶಾಲೆಯ ಪ್ರಾಚಾರ್ಯೆ, ಶಿಕ್ಷಕರು ಇದ್ದರು.
📲Get App