🔥 TRENDING दिल्ली में रैली पूर्व संध्या पर सांसद... ఓటు హక్కు వినియోగించుకున్న నందమూరి బాల... Speeding Bus Kills 2 Women, Injures Se... Chennithala: Victim's family to pick s... એકતા આપણને એક રાષ્ટ્ર્રના રૂપમાં આગળ વ... Delhi Police bust organised crime synd...
01 Nov 2026•
ગુજરાતી मराठी ਪੰਜਾਬੀ বাংলা
Education

ಚಿತ್ರ 1

✍️ Reporter: Basavaraj pujari 🗓 01 Nov 2026, 10:15 AM 👁 11
Share: 💬 WhatsApp 📘 Facebook 𝕏 Post

ಬೀದರ್ ತಾಲ್ಲೂಕಿನ ಚೊಂಡಿ ಸಮೀಪದ ದಿ ಇನ್ಫಿನಿಟಿ ಶಾಲೆಯಲ್ಲಿ ನಡೆದ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಡಿವೈಎಸ್‍ಪಿ ದೂದ್‍ಪೀರ್ ಎಚ್. ಮುಲ್ಲಾ ಉದ್ಘಾಟಿಸಿದರು ಚಿತ್ರ 2 ಬೀದರ್ ತಾಲ್ಲೂಕಿನ ಚೊಂಡಿ ಸಮೀಪದ ದಿ ಇನ್ಫಿ

ಚಿತ್ರ 1
ಬೀದರ್ ತಾಲ್ಲೂಕಿನ ಚೊಂಡಿ ಸಮೀಪದ ದಿ ಇನ್ಫಿನಿಟಿ ಶಾಲೆಯಲ್ಲಿ ನಡೆದ ಕಾನೂನು ಅರಿವು-ನೆರವು
ಕಾರ್ಯಕ್ರಮವನ್ನು ಡಿವೈಎಸ್‍ಪಿ ದೂದ್‍ಪೀರ್ ಎಚ್. ಮುಲ್ಲಾ ಉದ್ಘಾಟಿಸಿದರು
ಚಿತ್ರ 2
ಬೀದರ್ ತಾಲ್ಲೂಕಿನ ಚೊಂಡಿ ಸಮೀಪದ ದಿ ಇನ್ಫಿನಿಟಿ ಶಾಲೆಯಲ್ಲಿ ನಡೆದ ಕಾನೂನು ಅರಿವು-ನೆರವು
ಕಾರ್ಯಕ್ರಮದಲ್ಲಿ ಡಿವೈಎಸ್‍ಪಿ ದೂದ್‍ಪೀರ್ ಎಚ್. ಮುಲ್ಲಾ ಮಾತನಾಡಿದರು
ರಕ್ಷಣೆಗಾಗಿ 1098 ಗೆ ಕರೆ ಮಾಡಿ
ಬೀದರ್: ಮಕ್ಕಳು ಸಂಕಷ್ಟದಲ್ಲಿದ್ದರೆ ರಕ್ಷಣೆಗಾಗಿ ಮಕ್ಕಳ ಸಹಾಯವಾಣಿ ಸಂಖ್ಯೆ 1098 ಗೆ ಕರೆ
ಮಾಡಬೇಕು ಎಂದು ಬೀದರ್ ಡಿವೈಎಸ್‍ಪಿ ದೂದ್‍ಪೀರ್ ಎಚ್. ಮುಲ್ಲಾ ಹೇಳಿದರು.
ತಾಲ್ಲೂಕಿನ ಚೊಂಡಿ ಸಮೀಪದ ದಿ ಇನ್ಫಿನಿಟಿ ಶಾಲೆಯಲ್ಲಿ ಶುಕ್ರವಾರ ಸುರಕ್ಷಿತ ಬಾಲ್ಯ ಅಭಿಯಾನ
ಪ್ರಯುಕ್ತ ನಡೆದ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಉಚಿತ ಕಾನೂನು ನೆರವಿಗೆ ಸಹಾಯವಾಣಿ ಸಂಖ್ಯೆ 15100 ಹಾಗೂ ಸೈಬರ್ ಅಪರಾಧಕ್ಕೆ ಸಂಬಂಧಿಸಿದಂತೆ
ಸಹಾಯವಾಣಿ ಸಂಖ್ಯೆ 1930 ಗೆ ಸಂಪರ್ಕಿಸಬಹುದು ಎಂದು ತಿಳಿಸಿದರು.
ಮಕ್ಕಳ ಸುರಕ್ಷತೆ ಹಾಗೂ ಮಕ್ಕಳ ಹಕ್ಕುಗಳ ಕುರಿತು ಸಹ ಅವರು ಮಾಹಿತಿ ನೀಡಿದರು.
ಶಾಲೆಯ ಅಧ್ಯಕ್ಷ ನಿರಂಜನ್ ಶೀಲವಂತ ಮಾತನಾಡಿ, ಮಕ್ಕಳ ಸುರಕ್ಷತೆ ಹಾಗೂ ಮಕ್ಕಳ ಹಕ್ಕು
ರಕ್ಷಣೆ ಎಲ್ಲರ ಹೊಣೆಯಾಗಿದೆ ಎಂದು ತಿಳಿಸಿದರು.
ಕಾನೂನು ಅರಿವು ಮೂಡಿಸುವ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಬೇಕು ಎಂದು ಶಾಲೆಯ
ಆಡಳಿತಾಧಿಕಾರಿ ಡಾ. ಲಕ್ಷ್ಮಿ ಮುಗಳಿ ಹೇಳಿದರು.
ಶಾಲೆಯ ಪ್ರಾಚಾರ್ಯೆ, ಶಿಕ್ಷಕರು ಇದ್ದರು. *** ಚಿತ್ರ 1, 2
ಬೀದರ್ ತಾಲ್ಲೂಕಿನ ಮಂದಕನಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಕಾನೂನು ಅರಿವು ನೆರವು
ಕಾರ್ಯಕ್ರಮವನ್ನು ಪಿಎಸ್‍ಐ ನಂದಿನಿ ಉದ್ಘಾಟಿಸಿದರು
ಮಂದಕನಳ್ಳಿ ಶಾಲೆಯಲ್ಲಿ ಕಾನೂನು ಅರಿವು ಕಾರ್ಯಕ್ರಮ
ಮಕ್ಕಳು ಕಾನೂನು ಅರಿತುಕೊಳ್ಳಲಿ
ಬೀದರ್: ಮಕ್ಕಳು ಕಾನೂನು ಅರಿತುಕೊಳ್ಳಬೇಕು ಎಂದು ಬಗದಲ್ ಠಾಣೆ ಪಿಎಸ್‍ಐ ನಂದಿನಿ
ಹೇಳಿದರು.
ತಾಲ್ಲೂಕಿನ ಮಂದಕನಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಸುರಕ್ಷಿತ ಬಾಲ್ಯ ಅಭಿಯಾನ
ಅಂಗವಾಗಿ ಶನಿವಾರ ಆಯೋಜಿಸಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು
ಮಾತನಾಡಿದರು.
ಶಿಕ್ಷಣಕ್ಕೆ ತೊಡಕಾಗುವ ಸಾಮಾಜಿಕ ಅಡೆ ತಡೆಗಳನ್ನು ಧೈರ್ಯವಾಗಿ ಮೆಟ್ಟಿ ನಿಲ್ಲಬೇಕು.
ಸ್ವಯಂ ರಕ್ಷಣೆ ಕೌಶಲ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಮಕ್ಕಳು ಏನೇ ಸಮಸ್ಯೆಗಳಿದ್ದರೂ ಮಕ್ಕಳ ಸಹಾಯವಾಣಿ ಸಂಖ್ಯೆ 1098ಗೆ
ಸಂಪರ್ಕಿಸಬೇಕು ಎಂದು ಹೇಳಿದರು.
ಕಾನೂನಿನ ಬಗ್ಗೆ ತಿಳಿವಳಿಕೆ ಹೊಂದಿದ್ದಲ್ಲಿ ಅಪರಾಧಗಳಿಂದ ದೂರ ಇರಬಹುದು ಎಂದು
ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯಶಿಕ್ಷಕ ಪಾಂಡುರಂಗ ಬೆಲ್ದಾರ್ ಹೇಳಿದರು.
ಬಾಲ್ಯವನ್ನು ಆಹ್ಲಾದಕರವಾಗಿ ಆನಂದಿಸುವುದು ಮಕ್ಕಳ ಅವಶ್ಯಕತೆಗಳಲ್ಲಿ ಒಂದು ಎಂದು
ಗಣಿತ ಶಿಕ್ಷಕ ಜಗದೀಶಕುಮಾರ ನಿಂಬೂರೆ ತಿಳಿಸಿದರು.
ಸಂಪನ್ಮೂಲ ವ್ಯಕ್ತಿ ಬಸವರಾಜ ಕೆರಳಿ, ಬಾಬರ್ ಹುಸೇನ್, ಶಾಜಿಯಾ, ಝರೀನ್ ಸುಲ್ತಾನಾ, ದೀನಾ ಆ್ಯಂಟಿನ್,
ರಿಜ್ವಾನಾ, ದತ್ತಮ್ಮ ಮತ್ತಿತರರು ಇದ್ದರು.
ಝಾಕೀರ್ ಹುಸೇನ್ ಸ್ವಾಗತಿಸಿದರು. ಶ್ರೀನಿವಾಸ್ ಜಮಾದಾರ್ ವಂದಿಸಿದರು.
📲Get App