🔥 TRENDING Vikram Bam Releases 'Aaye Re', Drawing... Karnataka Congress Faces SIR Dilemma O... Karnataka Diwali Prices Spike: Nandini... Karnataka Minister Alleges Oil Firms S... Rajasthan CM Challenges Gehlot: Prove... Rajasthan SET 2026 Results Declared: H...
06 Nov 2026•
ગુજરાતી मराठी ਪੰਜਾਬੀ বাংলা

ಗಾಣಧಾಳ ಗ್ರಾಮ ಪಂಚಾಯಿತಿಯಲ್ಲಿ ನಾಳೆ ಜನಾಭಿಪ್ರಾಯ ಸಭೆ - ಅರಕೇರಾ ತಾಲೂಕಿಗೆ ಸೇರಬೇಕೇ, ದೇವದುರ್ಗ ತಾಲೂಕಿಗೆ ಮುಂದುವರಿಯಬೇಕೇ ಎಂಬ ಬಗ್ಗೆ ಸಾರ್ವಜನಿಕರ ಅಭಿಪ್ರಾಯ ಸಂಗ್ರಹ

✍️ Reporter: Ningappa 🗓 06 Nov 2026, 06:30 PM 👁 17
Share: 💬 WhatsApp 📘 Facebook 𝕏 Post

ದೇವದುರ್ಗ ತಾಲೂಕಿನ ಗಾಣಧಾಳ ಗ್ರಾಮ ಪಂಚಾಯಿತಿಯಲ್ಲಿ ನ. 7 ರಂದು ಬೆಳಿಗ್ಗೆ 11 ಗಂಟೆಗೆ ಜನಾಭಿಪ್ರಾಯ ಸಭೆ - ಗಾಣಧಾಳ ವ್ಯಾಪ್ತಿಯ ಗ್ರಾಮಗಳನ್ನು ಅರಕೇರಾ ತಾಲೂಕಿಗೆ ಸೇರಿಸಬೇಕೇ ಅಥವಾ ದೇವದುರ್ಗ ತಾಲೂಕಿನಲ್ಲೇ ಮುಂದುವರಿಸಬೇಕೇ ಎಂಬ ಬಗ್ಗೆ ಸಾರ್ವಜನಿಕರ ಅಭಿಪ್ರಾಯ - ತಹಶೀಲ್ದಾರರು ಹಾಗೂ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳ ನೇತೃತ್ವದಲ್ಲಿ ಸಭೆ

ಗಾಣಧಾಳ ಗ್ರಾಮ ಪಂಚಾಯಿತಿಯಲ್ಲಿ ನಾಳೆ ಜನಾಭಿಪ್ರಾಯ ಸಭೆ

ದೇವದುರ್ಗ: ತಹಶೀಲ್ದಾರರು ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕು ಪಂಚಾಯಿತಿ ಅವರ ನೇತೃತ್ವದಲ್ಲಿ ದಿನಾಂಕ 07-11-2026 ರಂದು ಬೆಳಿಗ್ಗೆ 11-00 ಗಂಟೆಗೆ ಗ್ರಾಮ ಪಂಚಾಯಿತಿ ಗಾಣಧಾಳದಲ್ಲಿ ಜನಾಭಿಪ್ರಾಯ ಸಭೆ ಕರೆಯಲಾಗಿದೆ.

ಗಾಣಧಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳನ್ನು ಅರಕೇರಾ ತಾಲೂಕಿನಲ್ಲಿ ಮುಂದುವರಿಸುವ ಅಥವಾ ದೇವದುರ್ಗ ತಾಲೂಕಿಗೆ ಮುಂದುವರಿಸುವ ಬಗ್ಗೆ ಈ ಸಭೆಯಲ್ಲಿ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಲಾಗುವುದು.

ಗಾಣಧಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳ ಸಾರ್ವಜನಿಕರು, ಮುಖಂಡರು, ಗ್ರಾಮ ಪಂಚಾಯಿತಿ ಸದಸ್ಯರು, ಮಹಿಳೆಯರು ಹಾಗೂ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸಭೆಗೆ ಹಾಜರಾಗಿ ತಮ್ಮ ಅಭಿಪ್ರಾಯ ತಿಳಿಸಬೇಕು ಎಂದು ಕೋರಲಾಗಿದೆ.
📲Get App