🔥 TRENDING बवदी गांव में फर्जी वोटिंग के आरोप, सर... சேலத்தில் கொட்டிய கனமழையால் சாலைகளில்... ਮਾਨਸਾ ਮੋਰਚਾ ਤੇ ਸਰਕਾਰ, ਸਹਿਮਤ ..... Two Army Troops Killed When Truck Fall... Ranveer Singh's 'Ramayana Vs Dhurandha... Surabhi Das Pays Tribute at Maa Kamakh...
05 Nov 2026•
ગુજરાતી मराठी ਪੰਜਾਬੀ বাংলা
Crime

*“ಬೀದರ ಜಿಲ್ಲಾ ಪೊಲೀಸ್, ಬೀದರ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಗಳ ನ್ಯಾಯಾಲಯ ನಡೆಸುತ್ತಿರುವ ಕುರಿತು”*

✍️ Reporter: Basavaraj pujari 🗓 05 Nov 2026, 06:28 AM 👁 14
Share: 💬 WhatsApp 📘 Facebook 𝕏 Post

ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ–2023ರ ಕಲಂ 15 (Central Act 46 of 2023)ರ ಅಡಿಯಲ್ಲಿ ರಾಜ್ಯದ ಪ್ರತಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗಳನ್ನು ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಗಳಾಗಿ (Special Executive

*“ಬೀದರ ಜಿಲ್ಲಾ ಪೊಲೀಸ್, ಬೀದರ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಗಳ ನ್ಯಾಯಾಲಯ ನಡೆಸುತ್ತಿರುವ ಕುರಿತು”*

ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ–2023ರ ಕಲಂ 15 (Central Act 46 of 2023)ರ ಅಡಿಯಲ್ಲಿ ರಾಜ್ಯದ ಪ್ರತಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗಳನ್ನು ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಗಳಾಗಿ (Special Executive Magistrates) ನೇಮಿಸಲಾಗಿದೆ. ಅದರಂತೆ, ಜಿಲ್ಲೆಯಲ್ಲಿ ಸಮಾಜದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆ ಉಂಟಾಗುವ ಸಾಧ್ಯತೆ ಇರುವ ಸಂದರ್ಭಗಳಲ್ಲಿ, ಗಲಭೆ, ಜಗಳ ಹಾಗೂ ಇತರೆ ಶಾಂತಿ ಭಂಗಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಪೊಲೀಸ್ ಠಾಣೆಗಳ ವತಿಯಿಂದ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಕಲಂ 126ರ ಅಡಿಯಲ್ಲಿ “ಇತರೆ ಪ್ರಕರಣಗಳಲ್ಲಿ ಶಾಂತಿ ಕಾಪಾಡಲು ಭದ್ರತೆ” (Security for Keeping Peace in Other Cases) ಕುರಿತು ಕ್ರಮ ಕೈಗೊಳ್ಳಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ, ಸಂಬಂಧಪಟ್ಟ ವ್ಯಕ್ತಿಗಳಿಂದ ಶಾಂತಿ ಕಾಪಾಡುವ ಕುರಿತು ಮುಚ್ಚಳಿಕೆ ಪಡೆಯುವ ಸಲುವಾಗಿ ಬೀದರ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಗಳ ನ್ಯಾಯಾಲಯವನ್ನು ಪೊಲೀಸ್ ವರಿಷ್ಠಾಧಿಕಾರಿಗಳ ಸಮ್ಮುಖದಲ್ಲಿ ಪ್ರತಿ ವಾರ ನಡೆಸಲಾಗುತ್ತಿದೆ.

ಈ ನ್ಯಾಯಾಲಯದ ಮೂಲಕ ಜಿಲ್ಲೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು ಹಾಗೂ ಸಾರ್ವಜನಿಕರಲ್ಲಿ ಕಾನೂನು ಮತ್ತು ಶಾಂತಿಯ ಬಗ್ಗೆ ಜಾಗೃತಿ ಮೂಡಿಸುವುದು ಮುಖ್ಯ ಉದ್ದೇಶವಾಗಿದೆ.

ಬೀದರ ಜಿಲ್ಲಾ ಪೊಲೀಸ್ ಸದಾ ನಿಮ್ಮ ಸೇವೆಯಲ್ಲಿ.
📲Get App