🔥 ट्रेंडिंग पश्चिम बंगाल के उत्तर दिनाजपुर में 17,... फतुहा मुठभेड़ जांच में एसटीएफ ने बरामद... मध्य प्रदेश हाईकोर्ट ने नाबालिग के हाथ... देवास में पार्किंग विवाद पर पिस्तौल‑तल... इंदौर के फूटी कोठी चौराहे पर पुल के नी... ਵੱਡੇ ਭਰਾ ਦੀ ਭੂਮਿਕਾ ''ਚ ਹੋਵੇਗਾ ਅਕਾਲੀ ਦਲ...
24 नव. 2026•
ગુજરાતી मराठी ਪੰਜਾਬੀ বাংলা

ಅನ್ನದಾತರೇ, ಆತಂಕ ಬೇಡ… ಇಂದು ಸಂಜೆ 4 ಗಂಟೆಗೆ ಕಾಲುವೆಗೆ ನೀರು ಬಿಡಲಿದ್ದಾರೆ. ನಿಮ್ಮ ಜೊತೆ ರೈತ ಸಂಘ ದೇವದುರ್ಗ ಸದಾ ಇರುತ್ತದೆ- ಮರಿಲಿಂಗ ಪಾಟೀಲ್

✍️ रिपोर्टर: Ningappa 🗓 24 नव. 2026, 04:39 PM 👁 25
शेयर करें: 💬 WhatsApp 📘 Facebook 𝕏 Post
ದೇವದುರ್ಗ: ನಾರಾಯಣಪುರ ಬಲದಂಡೆ ಕಾಲುವೆಗೆ ಇಂದು ಸಂಜೆ 4 ಗಂಟೆಗೆ ಗೇಟ್ ಎತ್ತಿ ನೀರು ಹರಿಸಲಾಗುವುದು ಎಂಬುದು ಖಚಿತವಾದ ಮಾಹಿತಿ ಇದೇ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲುಕ ಅಧ್ಯಕ್ಷ ಮರಿಲಿಂಗ ಪಾಟೀಲ್ ಹೇಳಿದರು.

ಆದ್ದರಿಂದ ಯಾವುದೇ ಸುಳ್ಳು ಸುದ್ದಿ, ವದಂತಿಗಳಿಗೆ ಕಿವಿಗೊಡದೆ ಧೈರ್ಯದಿಂದಿರಿ. ನೀರಿಗಾಗಿ ಕಾಯುತ್ತಿರುವ ಪ್ರತಿಯೊಬ್ಬ ರೈತನಿಗೂ ಈ ಸುದ್ದಿ ಸಂತೋಷ ತರಲಿ ಎಂಬುದೇ ನಮ್ಮ ಆಶಯ.

ನಿಮ್ಮ ಬೆವರಿನ ಬೆಳೆ ಒಣಗಬಾರದು, ನಿಮ್ಮ ಪರಿಶ್ರಮ ವ್ಯರ್ಥವಾಗಬಾರದು ಎಂಬ ಉದ್ದೇಶದಿಂದಲೇ ನಮ್ಮ ಹೋರಾಟ. ನೀರು ಬಂದಾಗ ಯಾರಿಗೂ ತೊಂದರೆಯಾಗದಂತೆ, ಎಲ್ಲ ರೈತರೂ ಸಮನ್ವಯದಿಂದ ತಮ್ಮ ಜಮೀನುಗಳಿಗೆ ಅಗತ್ಯಕ್ಕೆ ತಕ್ಕಂತೆ ನೀರನ್ನು ಕಟ್ಟಿಕೊಳ್ಳಬೇಕೆಂದು ಮನವಿ ಮಾಡಿಕೊಳ್ಳುತ್ತೇವೆ.

ರೈತನ ಹೊಲಕ್ಕೆ ನೀರು ಹರಿದಾಗಲೇ ನಮ್ಮ ಹೋರಾಟಕ್ಕೆ ನಿಜವಾದ ಅರ್ಥ ಬರುತ್ತದೆ. ಅನ್ನದಾತರ ಮುಖದಲ್ಲಿ ನಗು ಮೂಡಿದಾಗಲೇ ನಮಗೆ ನಿಜವಾದ ಸಂತೋಷ ಎಂದರು.
📲Get App