ತೆಲಂಗಾಣಕ್ಕೆ ನೀರು, ಸ್ಥಳೀಯ ರೈತರಿಗೆ ಅನ್ಯಾಯ: ಕೂಡಲೇ ಐಸಿಸಿ ಸಭೆ ಕರೆಯಲು ಶಾಸಕಿ ಕರೆಮ್ಮ ಆಗ್ರಹ ### 28 ಸಾವಿರ ಎಕರೆ ಮೆಣಸಿನ ಬೆಳೆ ಉಳಿಸಲು 1.6 ಟಿಎಂಸಿ ನೀರು ಬಿಡುಗಡೆ ಮಾಡಿ; ಜನವರಿ 15ರವರೆಗೆ ನೀರು ಹರಿಸಲು ಮನವಿ **
**ದೇವದುರ್ಗ ಬ್ರೇಕಿಂಗ್ ನ್ಯೂಸ್**
# ತೆಲಂಗಾಣಕ್ಕೆ ನೀರು, ಸ್ಥಳೀಯ ರೈತರಿಗೆ ಅನ್ಯಾಯ: ಕೂಡಲೇ ಐಸಿಸಿ ಸಭೆ ಕರೆಯಲು ಶಾಸಕಿ ಕರೆಮ್ಮ ಆಗ್ರಹ
### 28 ಸಾವಿರ ಎಕರೆ ಮೆಣಸಿನ ಬೆಳೆ ಉಳಿಸಲು 1.6 ಟಿಎಂಸಿ ನೀರು ಬಿಡುಗಡೆ ಮಾಡಿ; ಜನವರಿ 15ರವರೆಗೆ ನೀರು ಹರಿಸಲು ಮನವಿ
**ದೇವದುರ್ಗ, ನ. 21:** ನೀರಾವರಿ ನಿಗಮದ ಅಧಿಕಾರಿಗಳು ವಿಜಯಪುರ–ಬಾಗಲಕೋಟೆ ಕೆರೆಗಳನ್ನು ತುಂಬಿಸಿ, ತೆಲಂಗಾಣಕ್ಕೆ ಅನಧಿಕೃತವಾಗಿ ನೀರು ಹರಿಸುವ ಮೂಲಕ ದೇವದುರ್ಗ ಹಾಗೂ ಅರಕೇರಾ ಭಾಗದ ರೈತರಿಗೆ ಘೋರ ಅನ್ಯಾಯ ಎಸಗಿದ್ದಾರೆ ಎಂದು ಶಾಸಕಿ ಕರೆಮ್ಮ ಜಿ. ನಾಯಕ ಗಂಭೀರ ಆರೋಪ ಮಾಡಿದರು.
ಶನಿವಾರ ಪಟ್ಟಣದ ಗೃಹ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರೈತರ ಹಿತದೃಷ್ಟಿಯಿಂದ ಸರ್ಕಾರ ಕೂಡಲೇ ನೀರಾವರಿ ಸಲಹಾ ಸಮಿತಿ (ಐಸಿಸಿ) ಸಭೆ ಕರೆದು ಕಾಲುವೆಗಳಿಗೆ ನೀರು ಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಜಲಾಶಯದಲ್ಲಿ 45 ಟಿಎಂಸಿಗೂ ಅಧಿಕ ನೀರಿದ್ದು, ಕುಡಿಯುವ ನೀರಿಗಾಗಿ 5 ಟಿಎಂಸಿ ಮೀಸಲಿಟ್ಟ ಬಳಿಕ ನಮ್ಮ ಭಾಗಕ್ಕೆ 1.6 ಟಿಎಂಸಿ ನೀರು ಹರಿಸಿದರೆ 28 ಸಾವಿರ ಎಕರೆ ಪ್ರದೇಶದಲ್ಲಿ ಬೆಳೆದಿರುವ ಮೆಣಸಿನಕಾಯಿ ಬೆಳೆಯನ್ನು ಉಳಿಸಬಹುದು. ಬೆಳೆಗಳ ರಕ್ಷಣೆಗೆ ಇನ್ನೂ ಎರಡು–ಮೂರು ಬಾರಿ ನೀರು ಹರಿಸುವುದು ಅನಿವಾರ್ಯವಾಗಿದೆ ಎಂದು ತಿಳಿಸಿದರು.
ನೀರಾವರಿ ಸಮಸ್ಯೆ ಕುರಿತು ಈಗಾಗಲೇ ಹಲವು ಹೋರಾಟಗಳನ್ನು ನಡೆಸಲಾಗಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿ, ಜಲಸಂಪನ್ಮೂಲ ಸಚಿವರು, ಕೃಷ್ಣಾ ಕಾಡಾ ಅಧ್ಯಕ್ಷರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರನ್ನು ಖುದ್ದಾಗಿ ಭೇಟಿಯಾಗಿ ಜನವರಿ 15ರವರೆಗೆ ನೀರು ಹರಿಸುವಂತೆ ಮನವಿ ಸಲ್ಲಿಸಲಾಗಿದೆ. ಮುಖ್ಯಮಂತ್ರಿಗಳು ಸಭೆ ಕರೆಯುವ ಭರವಸೆ ನೀಡಿದ್ದಾರೆ ಎಂದರು.
ತುಂಗಭದ್ರಾ ಎಡದಂಡೆ ನಾಲಾ ವ್ಯಾಪ್ತಿಯಲ್ಲಿ ಪಕ್ಷಾತೀತವಾಗಿ ನೀರು ಹರಿಸುವ ಕುರಿತು ನಿರ್ಧಾರ ಕೈಗೊಂಡಂತೆ ನಮ್ಮ ಭಾಗದಲ್ಲಿಯೂ ರೈತರ ಹಿತದೃಷ್ಟಿಯಿಂದ ನಿರ್ಧಾರ ಕೈಗೊಳ್ಳದಿರುವುದು ಬೇಸರದ ಸಂಗತಿ ಎಂದು ಹೇಳಿದರು.
ರೈತರು ಜಲಾಶಯದವರೆಗೆ ಪಾದಯಾತ್ರೆ ನಡೆಸಿ ಮನವಿ ಸಲ್ಲಿಸಿದರೂ ಅಧಿಕಾರಿಗಳು ಸೌಜನ್ಯಕ್ಕೂ ಸ್ಪಂದಿಸಿಲ್ಲ. ಅಧಿಕಾರಿಗಳ ತಪ್ಪು ಹಾಗೂ ಸುಳ್ಳು ಮಾಹಿತಿಯಿಂದ ರೈತರ ಬೆಳೆಗಳು ಒಣಗುವ ಹಂತ ತಲುಪಿವೆ ಎಂದು ಆರೋಪಿಸಿದರು.
ಸರ್ಕಾರ ಇನ್ನೂ ವಿಳಂಬ ಧೋರಣೆ ಮುಂದುವರಿಸಿದರೆ ರೈತರ ಹಿತಕ್ಕಾಗಿ ಪಕ್ಷಾತೀತವಾಗಿ ತೀವ್ರ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ದೇವದುರ್ಗ ತಾಲೂಕು ಜೆಡಿಎಸ್ ಅಧ್ಯಕ್ಷ ಬಸನಗೌಡ ದೇಸಾಯಿ, ಅರಕೇರಾ ತಾಲೂಕು ಜೆಡಿಎಸ್ ಅಧ್ಯಕ್ಷ ಸಿದ್ದಣ್ಣ ಬಿ. ಗಣೇಕಲ್, ವಕ್ತಾರ ಗೋವಿಂದರಾಜ್ ನಾಯಕ, ಮುಖಂಡರಾದ ಬಸವರಾಜಪ್ಪ ವಾರದ, ಶಾಲಂ ಉದ್ದಾರ, ಮಹಬೂಬ್ ಗೌರಂಪೇಟೆ, ಸಿದ್ದನಗೌಡ, ರಮೇಶ ರಾಮನಾಳ, ಭೀಮಣ್ಣ ಗೋಸಲ, ಬಸವರಾಜ ಯರಮಸಾಳ ಸೇರಿದಂತೆ ಇತರರು ಉಪಸ್ಥಿತರಿದ್ದರು.
**ವರದಿ: ಖಾಜಾ ಹುಸೇನ್ ಬಾಬಾ, ಜಾಲಹಳ್ಳಿ**