🔥 TRENDING BSF Kills Pakistani Intruder on Punjab... AGP Removes Jintu Choudhury from Party... Assam Commercial Transport Strike Pers... Assam records over 6,000 arrests in ch... भरत भूषण तिवारी मामले को उनके परिजनों... Bathinda Municipal Corp Seals Six‑Stor...
27 Nov 2026•
ગુજરાતી मराठी ਪੰਜਾਬੀ বাংলা

ಜಾಲಹಳ್ಳಿಯಲ್ಲಿ ಭಕ್ತ ಕನಕದಾಸರ ಜಯಂತಿ ಅದ್ದೂರಿ ಆಚರಣೆಕನಕದಾಸರ ಭಾವಚಿತ್ರಕ್ಕೆ ಶ್ರೀ ನಾಗಯ್ಯ ತಾತ ಗುರುಗಳಿಂದ ವಿಶೇಷ ಪೂಜೆ; ಗಣ್ಯರಿಂದ ಸಾಮೂಹಿಕ ಪುಷ್ಪಾರ್ಚನೆ

✍️ Reporter: Khaja Hussain 🗓 27 Nov 2026, 01:10 PM 👁 11
Share: 💬 WhatsApp 📘 Facebook 𝕏 Post
**ಜಾಲಹಳ್ಳಿ ಬ್ರೇಕಿಂಗ್ ನ್ಯೂಸ್**

# ಜಾಲಹಳ್ಳಿಯಲ್ಲಿ ಭಕ್ತ ಕನಕದಾಸರ ಜಯಂತಿ ಅದ್ದೂರಿ ಆಚರಣೆ

### ಕನಕದಾಸರ ಭಾವಚಿತ್ರಕ್ಕೆ ಶ್ರೀ ನಾಗಯ್ಯ ತಾತ ಗುರುಗಳಿಂದ ವಿಶೇಷ ಪೂಜೆ; ಗಣ್ಯರಿಂದ ಸಾಮೂಹಿಕ ಪುಷ್ಪಾರ್ಚನೆ

**ಜಾಲಹಳ್ಳಿ, ನ.27:** ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಪಟ್ಟಣದಲ್ಲಿ ಭಕ್ತ ಕನಕದಾಸರ ಜಯಂತಿಯನ್ನು ಶುಕ್ರವಾರ ಅದ್ದೂರಿಯಾಗಿ ಆಚರಿಸಲಾಯಿತು.

ಪಟ್ಟಣದ ಕನಕದಾಸರ ವೃತ್ತದಲ್ಲಿ ಆಯೋಜಿಸಿದ್ದ ಜಯಂತಿ ಕಾರ್ಯಕ್ರಮದ ಸಾನಿಧ್ಯವನ್ನು ಶ್ರೀ ನಾಗಯ್ಯ ತಾತ ಗುರುಗಳು ವಹಿಸಿದ್ದರು. ಈ ಸಂದರ್ಭದಲ್ಲಿ ಭಕ್ತ ಕನಕದಾಸರ ಭಾವಚಿತ್ರಕ್ಕೆ ಶ್ರೀ ನಾಗಯ್ಯ ತಾತ ಗುರುಗಳು ವಿಶೇಷ ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ನಂತರ ಊರಿನ ಗಣ್ಯರು, ಅತಿಥಿಗಳು ಹಾಗೂ ಸಾರ್ವಜನಿಕರು ಕನಕದಾಸರ ಭಾವಚಿತ್ರಕ್ಕೆ ಸಾಮೂಹಿಕ ಪುಷ್ಪಾರ್ಚನೆ ಸಲ್ಲಿಸಿ ಗೌರವ ನಮನಗಳನ್ನು ಅರ್ಪಿಸಿದರು.



**ಕನಕದಾಸರ ಸಾಹಿತ್ಯ, ಭಕ್ತಿ ಮತ್ತು ಸಮಾನತೆಯ ಸಂದೇಶ ಸ್ಮರಣೆ**

ಕಾರ್ಯಕ್ರಮದಲ್ಲಿ ಮಾತನಾಡಿದ ರಂಗಣ್ಣ ಕೋಲ್ಕಾರ್, ಭಕ್ತ ಕನಕದಾಸರು 16ನೇ ಶತಮಾನದ ಕರ್ನಾಟಕದ ಹರಿದಾಸ ಪರಂಪರೆಯ ಪ್ರಮುಖ ಸಂತರು, ಕವಿಗಳು, ದಾರ್ಶನಿಕರು ಹಾಗೂ ಸಮಾಜ ಸುಧಾರಕರಾಗಿದ್ದರು. ಪುರಂದರದಾಸರೊಂದಿಗೆ ಕನ್ನಡ ಸಾಹಿತ್ಯ ಮತ್ತು ಕರ್ನಾಟಕ ಸಂಗೀತ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅವರ ಕೀರ್ತನೆಗಳು ಭಕ್ತಿ, ಸಮಾನತೆ ಹಾಗೂ ಮಾನವೀಯ ಮೌಲ್ಯಗಳನ್ನು ಸಾರುತ್ತವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಅಬ್ದುಲ್ ರಹಮಾನ್ ಖುರೇಶಿ, ಚನ್ನಪ್ಪ ಗೌಡ, ಭೀಮಣ್ಣ ಗುಮೇದಾರ ಹಾಗೂ ಬಸವರಾಜ್ ಗೋಪಾಲಪುರ ಅವರು ಮಾತನಾಡಿ, ಭಕ್ತ ಕನಕದಾಸರ ಜೀವನ, ಸಾಹಿತ್ಯ, ಭಕ್ತಿ ಪರಂಪರೆ ಮತ್ತು ಸಮಾಜಕ್ಕೆ ನೀಡಿದ ಅಮೂಲ್ಯ ಕೊಡುಗೆಗಳನ್ನು ಸ್ಮರಿಸಿದರು.



**ಜಾತಿ ಸಮೀಕ್ಷೆ ವರದಿ ಬಹಿರಂಗಪಡಿಸಲು ಆಗ್ರಹ**

ಕಾರ್ಯಕ್ರಮ ನಿರೂಪಿಸಿದ ಚಂದಪ್ಪ ಬುದ್ಧಿನ್ನಿ ಮಾತನಾಡಿ, ಹಾಲುಮತ ಸಮಾಜಕ್ಕೆ ನಾಲ್ಕು ಪೀಠಗಳಿರುವುದು ಹೆಮ್ಮೆಯ ಸಂಗತಿ. ಕರ್ನಾಟಕಕ್ಕೆ ಎರಡು ಬಾರಿ ಮುಖ್ಯಮಂತ್ರಿಗಳನ್ನು ನೀಡಿರುವುದು ಸಮಾಜದ ಸಾಧನೆಗಳಲ್ಲಿ ಒಂದಾಗಿದೆ ಎಂದು ಹೇಳಿದರು. ಕನಕದಾಸರ ಆದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸರ್ಕಾರ ಜಾತಿ ಸಮೀಕ್ಷೆಯ ವರದಿಯನ್ನು ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದರು.

ಕಾರ್ಯಕ್ರಮದಲ್ಲಿ ಹಾಲುಮತ ಸಮಾಜದ ಪೂಜ್ಯ ಗುರುಗಳಾದ ನಾಗಯ್ಯ ತಾತ ಗುರುಗಳು, ಸಮಾಜದ ಅಧ್ಯಕ್ಷ ನರಸಣ್ಣ ಡೆಂಗಿ, ಮಂಜುನಾಥ ಪಾಟೀಲ್, ಚಂದಪ್ಪ ಬುದ್ಧಿನ್ನಿ, ವಿರುಪಾಕ್ಷಿ ಮುಂಡರಗಿ, ಬೀರಪ್ಪ ಹಿರೇಮನಿ, ಶಿವಪ್ಪ ಡೆಂಗಿ, ರಾಯಪ್ಪ ದಿಡ್ಡಿ, ನಾಗಪ್ಪ ಧರೆಪುರ, ಶಿವರಾಜ ಬಿದರಾಣಿ, ರಂಗಪ್ಪ ದಿಡ್ಡಿ, ಶಿವಪ್ಪ ಗಣೇಕಲ್, ಲಕ್ಕಪ್ಪ ನಡಿಗೇರಿ, ಮಲ್ಲಯ್ಯ ಯರಕಮಟ್ಟಿ ಗೌಡ, ನರಸಪ್ಪ ಪನ್ನೀರ ಗೌಡ ಸೇರಿದಂತೆ ಸಮಾಜದ ಮುಖಂಡರು ಉಪಸ್ಥಿತರಿದ್ದರು.

ಊರಿನ ಮುಖಂಡರಾದ ಶ್ರೀಧರ್ ದೇಸಾಯಿ, ಶಂಕರಗೌಡ ಪಾಟೀಲ, ಅಂಜುರಾಮ ಪಾಳಿ, ನರಸಣ್ಣ ನಾಯಕ, ಗೋವಿಂದಪ್ಪ ಆಲಗೇರಿ, ರಂಗಣ್ಣ ಕೋಲ್ಕಾರ್, ಭೀಮಣ್ಣ ಗುಮೇದಾರ, ರಂಗಪ್ಪ ಬಂಡಿ, ಈಶಣ್ಣ ಕಾಟಮಳ್ಳಿ, ಅಬ್ದುಲ್ ರಹಮಾನ್, ರಮೇಶ್ ಅನ್ವರಿ, ಖುರ್ಷಿದ್ ಪಟೇಲ್, ಶ್ರೀನಿವಾಸ್ ತಿಂಪುರ್, ಮುದುರಂಗಪ್ಪ ವಠಾರ, ಗೌಡಪ್ಪ ವಡ್ಡರ, ವೆಂಕೋಬ ತೋಟದ್, ವಿನೋದ್ ಚಿಕ್ಕಲ್, ಶಿವಲಿಂಗಪ್ಪ, ಶಿವಪ್ಪ ನಾಯಕ ಗಾಂಜಿ, ಯಲ್ಲಪ್ಪ ಗಚ್ಚಿನಮನಿ, ದುರುಗಪ್ಪ ಹೊರಟ್ಟಿ ಸೇರಿದಂತೆ ಸಮಾಜದ ಕುಲಬಾಂಧವರು, ಮಕ್ಕಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

**ವರದಿ: ಖಾಜಾ ಹುಸೇನ್ ಬಾಬಾ, ಜಾಲಹಳ್ಳಿ**
📲Get App