🔥 TRENDING ଧର୍ମେନ୍ଦ୍ରଙ୍କ ପ୍ରଥମ ଶ୍ରାଦ୍ଧବାର୍ଷିକୀ; ଗ... गंडक नदी के कटाव से सिसवा मंगलपुर गांव... स्कूल के छात्र को आने-जाने का रास्ता... ଝଲସିବ ସିଲଭର ସିଟି; ପ୍ରଥମଥର ଐତିହାସିକ ବାଲ... ଦଶମ ଶ୍ରେଣୀର ଛାତ୍ରଙ୍କୁ ଛୁରୀ ଭୁସିଲା ଅନ୍ୟ... BJP and Akali Dal Form Alliance to Con...
24 Nov 2026•
ગુજરાતી मराठी ਪੰਜਾਬੀ বাংলা

ಗೌರಿ ಹುಣ್ಣಿಮೆಯಂದು ಮಾರಿಕೊಪ್ಪದ ಶ್ರೀ ಹಳದಮ್ಮ ದೇವಿಗೆ ವಿಶೇಷ ಪೂಜೆ

✍️ Reporter: Viswanatha D R 🗓 24 Nov 2026, 02:40 PM 👁 25
Share: 💬 WhatsApp 📘 Facebook 𝕏 Post
ಹೊನ್ನಾಳಿ, ನವೆಂಬರ್ 24: ಗೌರಿ ಹುಣ್ಣಿಮೆಯ ಪ್ರಯುಕ್ತ ಹೊನ್ನಾಳಿ ತಾಲ್ಲೂಕಿನ ಮಾರಿಕೊಪ್ಪ ಗ್ರಾಮದ ಶ್ರೀ ಹಳದಮ್ಮ ದೇವಿಗೆ ಶಿವಮೊಗ್ಗ ಜಿಲ್ಲೆ ಹಾಗೂ ತಾಲ್ಲೂಕು ಕುಂಸಿ ಗ್ರಾಮದ ಭಕ್ತಾದಿಗಳು ವಿಶೇಷ ಅಭಿಷೇಕ, ಪೂಜಾ ಕಾರ್ಯಕ್ರಮ ಹಾಗೂ ಪ್ರಸಾದ ವಿನಿಯೋಗವನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಹತ್ತೂರು ಗ್ರಾಮದ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಚಿನ್ನಪ್ಪ ಸಿ.ಎಚ್. ಮಾತನಾಡಿ,ಕುಂಸಿ ಗ್ರಾಮದ ಭಕ್ತಾದಿಗಳು ಪ್ರತಿವರ್ಷ ಹುಣ್ಣಿಮೆ ದಿನದಂದು ಶ್ರೀದೇವಿಗೆ ವಿಶೇಷ ಅಭಿಷೇಕ ಹಾಗೂ ಪ್ರಸಾದ ವಿನಿಯೋಗ ಕಾರ್ಯಕ್ರಮವನ್ನು ಆಯೋಜಿಸಿಕೊಂಡು ಬರುತ್ತಿದ್ದಾರೆ ಎಂದು ತಿಳಿಸಿದರು.
ದೇವಸ್ಥಾನದ ಅರ್ಚಕರಾದ ವೀರೇಶ್ ಎಂ.ಪಿ. ಮಾತನಾಡಿ, ಶ್ರೀದೇವಿಗೆ ಪಂಚಕಜ್ಜಾಯ, ಪಂಚಾಮೃತ ಅಭಿಷೇಕ, ಸೀರೆ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಪ್ರತಿ ಹುಣ್ಣಿಮೆ ದೇವಿಗೆ ವಿಶೇಷ ಅಲಂಕಾರ ಮಾಡಲಾಗುತ್ತಿದ್ದು, ಸಹಸ್ರಾರು ಭಕ್ತಾದಿಗಳು ಆಗಮಿಸಿ ತಾಯಿಯ ದರ್ಶನ ಪಡೆದು ಪ್ರಸಾದ ಸ್ವೀಕರಿಸುತ್ತಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಇತರೆ ಅರ್ಚಕರಾದ ಚನ್ನೇಶ್, ಪವನ್, ಹಾಲನಗೌಡ ಸೇರಿದಂತೆ ಕುಂಸಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಅನೇಕ ಭಕ್ತಾದಿಗಳು ಭಾಗವಹಿಸಿದ್ದರು.
📲Get App