🔥 TRENDING ਬਾਬਾ ਨਾਨਕ' ਜੀ ਦੇ ਜੈਕਾਰਿਆਂ ਨਾਲ ਗੂੰਜਿਆ ਜ... Golaghat Opens Special Court to Clear... चरही थाना के एसपी ने निरीक्षण के दौरान... Tripura CID Arrests Suspect in Assam 1... Delhi Police Arrest 22 in Multi-State... बिलासपुर के जी.टी.बी. कॉलेज में विधिक...
21 Nov 2026•
ગુજરાતી मराठी ਪੰਜਾਬੀ বাংলা

ಬಸವಣ್ಣನವರ ಕುರಿತು ಅವಹೇಳನಕಾರಿ ಹೇಳಿಕೆ - ರವಿ ಹಂಜ್ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಆಗ್ರಹ - ಬಸವ ಮಂಟಪ ಕೃತಿ ಮುಟ್ಟುಗೋಲು, ಸುಮೋಟೋ ಕೇಸ್ ದಾಖಲಿಸಿ ಶಿಕ್ಷೆಗೆ ಒಳಪಡಿಸಿ - ಚಂದ್ರಶೇಖರ ನಾಡಗೌಡ ಒತ್ತಾಯ

✍️ Reporter: Ningappa 🗓 21 Nov 2026, 07:36 PM 👁 13
Share: 💬 WhatsApp 📘 Facebook 𝕏 Post

ಬಸವಣ್ಣನವರ ಕುರಿತು ಅವಹೇಳನಕಾರಿ ಹೇಳಿಕೆ - ರವಿ ಹಂಜ್ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಆಗ್ರಹ - ಬಸವ ಮಂಟಪ ಕೃತಿ ಮುಟ್ಟುಗೋಲು, ಸುಮೋಟೋ ಕೇಸ್ ದಾಖಲಿಸಿ ಶಿಕ್ಷೆಗೆ ಒಳಪಡಿಸಿ - ಚಂದ್ರಶೇಖರ ನಾಡಗೌಡ ಒತ್ತಾಯ - ಬಿಜ್ಜಳ ಬಂಡಾರ ಕದ್ದವರು ಎಂದು ಇತಿಹಾಸ ತಿರುಚುವ ಪ್ರಯತ್ನ - ಲಿಂಗಾಯತ ಸಮುದಾಯವನ್ನು ಲಿಂಗ ಹತರು ಎಂದು ಸಂಬೋಧಿಸಿ ಭಾವನೆಗೆ ದಕ್ಕೆ

ಬಸವಣ್ಣನವರ ಕುರಿತು ಅವಹೇಳನಕಾರಿ ಹೇಳಿಕೆ - ರವಿ ಹಂಜ್ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಆಗ್ರಹ

ಜಾಲಹಳ್ಳಿ, ನ.21:
ರಾಜ್ಯದ ಸಾಂಸ್ಕೃತಿಕ ನಾಯಕ, ಸಮಾನತೆಯ ಹರಿಕಾರ, ಜಗಜ್ಯೋತಿ ಬಸವಣ್ಣನವರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ಅನಿವಾಸಿ ಭಾರತೀಯ ಲೇಖಕ ರವಿ ಹಂಜ್ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪತ್ರಕರ್ತರು ಹಾಗೂ ಬಸವ ಸಮಿತಿ ಸಂಚಾಲಕರಾದ ಚಂದ್ರಶೇಖರ ನಾಡಗೌಡ ಒತ್ತಾಯಿಸಿದ್ದಾರೆ.

12ನೇ ಶತಮಾನದಲ್ಲಿ ಸಾಮಾಜಿಕ ಸಮಾನತೆ, ಮಾನವೀಯ ಮೌಲ್ಯಗಳು ಹಾಗೂ ಜಾತಿ ರಹಿತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಬಸವಣ್ಣನವರ ಕುರಿತು ರವಿ ಹಂಜ್ ನೀಡಿರುವ ಹೇಳಿಕೆಗಳು ಬಸವ ಅನುಯಾಯಿಗಳ ಭಾವನೆಗಳಿಗೆ ನೋವುಂಟು ಮಾಡಿದೆ.

ಬಸವಣ್ಣನವರ ವಚನಗಳನ್ನು ಉಲ್ಲೇಖಿಸುವ ನೆಪದಲ್ಲಿ ಅವರ ತತ್ವಾದರ್ಶಗಳನ್ನು ತಪ್ಪಾಗಿ ವ್ಯಾಖ್ಯಾನಿಸಲಾಗಿದೆ. ಬಸವಣ್ಣನವರು ಬಿಜ್ಜಳನ ಬಂಡಾರವನ್ನು ಕದ್ದವರು ಹಾಗೂ ಬಿಜ್ಜಳನ ಹತ್ಯೆಗೆ ಕಾರಣರಾದವರು ಎಂಬ ಅರ್ಥದಲ್ಲಿ ಹೇಳಿಕೆ ನೀಡುವ ಮೂಲಕ ಇತಿಹಾಸವನ್ನು ತಿರುಚುವ ಪ್ರಯತ್ನ ಮಾಡಿದ್ದಾರೆ.

ಇಂತಹ ಹೇಳಿಕೆಗಳು ಬಸವಣ್ಣನವರ ವ್ಯಕ್ತಿತ್ವಕ್ಕೆ, ಗೌರವಕ್ಕೆ ಕಳಂಕ ತರುತ್ತವೆ.

ಬಸವಣ್ಣನವರು ಯಾವುದೇ ಒಂದು ಜಾತಿ ಅಥವಾ ಧರ್ಮಕ್ಕೆ ಸೀಮಿತವಾದವರಲ್ಲ ಅವರ ಸಮಾನತೆ ಕಾಯಕ ಹಾಗೂ ದಾಸೋಹದ ಸಂದೇಶಗಳು ಇಡೀ ಮನುಕುಲಕ್ಕೆ ಮಾರ್ಗದರ್ಶಿಯಾಗಿವೆ.

ರಾಜ್ಯ ಸರ್ಕಾರವೇ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿರುವ ಸಂದರ್ಭದಲ್ಲಿ ಅವರ ಕುರಿತು ಅವಹೇಳನಕಾರಿ ಹೇಳಿಕೆಗಳನ್ನು ನೀಡುವುದು ಖಂಡನೀಯವಾಗಿದೆ.

ಕಳೆದ ಎರಡು ವರ್ಷಗಳಿಂದ ರವಿ ಹಂಜ್ ಅವರು ಬಸವಣ್ಣನವರ ಕುರಿತು ವಿವಾದಾತ್ಮಕ ವಿಷಯಗಳನ್ನು ಒಳಗೊಂಡ ಅಂಕಣಗಳನ್ನು ಪತ್ರಿಕೆಯಲ್ಲಿ ಪ್ರಕಟಿಸುತ್ತಿದ್ದರು. ಈಗ ಅವುಗಳನ್ನು ಬಸವ ಮಂಟಪ ಎಂಬ ಕೃತಿಯ ರೂಪದಲ್ಲಿ ಹೊರ ತಂದಿದ್ದಾರೆ. ಅಲ್ಲದೆ ಯೂಟ್ಯೂಬ್ ಚಾನಲ್ ಒಂದರಲ್ಲಿ ಮಾತನಾಡುವ ಸಂದರ್ಭದಲ್ಲಿ ಲಿಂಗಾಯತ ಸಮುದಾಯವನ್ನು ಲಿಂಗ ಹತರು ಎಂದು ಸಂಬೋಧಿಸುವ ಮೂಲಕ ಸಮುದಾಯದ ಭಾವನೆಗಳಿಗೆ ದಕ್ಕೆ ತಂದಿದ್ದಾರೆ. 12ನೇ ಶತಮಾನದಲ್ಲಿಯೇ ಕ್ರಾಂತಿಕಾರಿ ಬದಲಾವಣೆಗೆ ಕಾರಣರಾಗಿರುವ ಮಹಾ ಮಾನವತಾವಾದಿಯಾಗಿ ಜಗಜ್ಯೋತಿಯಾಗಿ ಬೆಳಗಿದ ಬಸವಣ್ಣನವರನ್ನು ಕುರಿತು ರವಿ ಹಂಜ್ ಸೇರಿದಂತೆ ಯಾರೇ ನಿಂದನೆ ಮಾಡಿದರೂ ಸಹಿಸಲಾಗದು.

ಬಸವಣ್ಣನವರ ಆಶಯಗಳಾದ ಸಮಾನತೆ ಕಾಯಕ ಮತ್ತು ದಾಸೋಹದ ಚಿಂತನೆಗಳು ಈ ಭೂಮಿ ಇರುವವರೆಗೂ ಶಾಶ್ವತವಾಗಿ ಜೀವಂತವಾಗಿರುತ್ತವೆ. 12ನೇ ಶತಮಾನದಿಂದ 21ನೇ ಶತಮಾನದವರೆಗೂ ಬಸವ ತತ್ವ ಮತ್ತು ಶರಣರ ವಿಚಾರಧಾರೆಗಳನ್ನು ಹತ್ತಿಕ್ಕಲು, ವಿರೂಪಗೊಳಿಸಲು, ನಾಶಪಡಿಸಲು ಪಟ್ಟಭದ್ರ ಹಿತಾಸಕ್ತಿಗಳು ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ. ಆದರೆ ಅವು ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡಿವೆ.

ಒಂದು ನೆನಪಿರಲಿ ಶರಣರ ವಿಚಾರಧಾರೆಗಳಿಗೆ ಸಾವಿಲ್ಲ, ಸಮಾನತೆಯ ಚಿಂತನೆಗೆ ಅಂತ್ಯವಿಲ್ಲ ಕಾಲ ಬದಲಾಗಬಹುದು, ಆಡಳಿತ ಬದಲಾಗಬಹುದು ಆದರೆ ಬಸವಣ್ಣನವರ ಮಾನವೀಯತೆ, ಸಮಾನತೆ, ತತ್ವಗಳನ್ನು ಯಾರಿಂದಲೂ ನಾಶಪಡಿಸಲು ಸಾಧ್ಯವಿಲ್ಲ. ಸಂಕವ್ವನಂತಹ ಶೋಷಣೆಗೊಳಪಟ್ಟ ಮಹಿಳೆಯರಿಗೆ ಲಿಂಗ ದೀಕ್ಷೆಯನ್ನು ನೀಡಿ ವಾಕ್ ಸ್ವಾತಂತ್ರ್ಯದಲ್ಲಿ ಪಾಲ್ಗೊಳ್ಳುವಂತೆ ಮಾಡಿದ್ದಲ್ಲದೆ ಇಡೀ ಮಹಿಳಾ ಕುಲಕ್ಕೆ ಸಮಾನತೆ ಕಲ್ಪಿಸುವಲ್ಲಿ ಅವಿರತವಾಗಿ ಶ್ರಮಿಸಿದ ಮಹಾನ್ ಚೇತನ ಶಕ್ತಿ ಬಸವಣ್ಣ ಅವರ ಕುರಿತು ನಿಂದನೆ ಸಹಿಸಲಾಗದು.

ಯಾವುದೇ ಶೋಷಣೆ ಇಲ್ಲದ ಆತಂಕವಿಲ್ಲದ, ಅಡ್ಡಿಯಿಲ್ಲದ ಬದುಕನ್ನು ಬದುಕಬೇಕೆಂಬ ಸಕಲ ಜೀವಾತ್ಮರಿಗೆ ಲೇಸನ್ನ ಬಯಸಿ ಹೋರಾಡಿದವರು ವಿಶ್ವಗುರು ಬಸವಣ್ಣನವರು ಇಂತಹ ಮಹಾನ್ ವ್ಯಕ್ತಿ ಚಾರಿತ್ರದ ಬಗ್ಗೆ ಕೀಳಾಗಿ ಮಾತನಾಡಿದ ರವಿ ಹಂಜ್ ಎನ್ನುವ ಅವಿವೇಕಿಯು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಐತಿಹಾಸಿಕ, ಸಾಹಿತಿಕ ಆಧಾರವಿಲ್ಲದೆ ಹೇಳಿಕೆ ಕೊಟ್ಟಿರುವುದು ಖಂಡನೀಯವಾಗಿದೆ. ರವಿ ಹಂಜ್ ಅವರ ಮುಖ್ಯ ಉದ್ದೇಶ ಬಸವಣ್ಣನವರ ಚಾರಿತ್ರಿಕ ವಧೆ ಮಾಡುವುದು ಮತ್ತು ವಚನ ಸಾಹಿತ್ಯವನ್ನು ವಿಡಂಬಿಸಿ, ವ್ಯಂಗ್ಯವಾಗಿ ಮಾತನಾಡುವುದು ಮೇಲ್ನೋಟಕ್ಕೆ ಸಾಬೀತಾಗುತ್ತದೆ. ಆತನ ಹಿಂದೆ ಕಾಣಲಾರದ ಕುಹಕ ಶಕ್ತಿಗಳ ಕುಮ್ಮಕ್ಕು ಇರುತ್ತದೆ. ಇದು ರಾಜ್ಯದ ಮತ್ತು ಹೊರ ರಾಜ್ಯದಲ್ಲಿರುವ ಬಸವ ಪ್ರೇಮಿಗಳಿಗೆ ಮತ್ತು ಲಿಂಗವಂತರಿಗೆ ಅತೀವ ನೋವುಂಟು ಮಾಡಿದೆ.

ಸೌಹಾರ್ದತೆ, ಪ್ರೀತಿ, ಸಮಾನತೆ, ವ್ಯಕ್ತಿತ್ವ ಘನತೆ, ಪರಸ್ಪರ ಗೌರವ ಎತ್ತಿ ಹಿಡಿಯುವ ವಾತಾವರಣ ಇರುವುದನ್ನು ಸಹಿಸದ ದುಷ್ಟ ಮನಸುಗಳು, ವ್ಯಕ್ತಿಗಳು ಸಮಾಜದಲ್ಲಿ ಶಾಂತಿಭಂಗ ಉಂಟು ಮಾಡಲು, ಮಾನವ ಪ್ರೀತಿ, ಸಂಬಂಧ ಹಾಳು ಮಾಡಲು ತೊಡಗಿದ್ದಾರೆ. ಅಂತವರಲ್ಲಿ ರವಿ ಹಂಜ್ ಒಬ್ಬರು ಎಂದರು ತಪ್ಪಾಗಲಾರದು. ಇಂಥವರಿಗೆ ಸಾರ್ವಜನಿಕವಾಗಿ ಬಹಿಷ್ಕಾರ ಚಿಮಾರಿ ಹಾಕದಿದ್ದರೆ ಇನ್ನಷ್ಟು ಕೊಳಕು ನುಡಿಗಳು ಮೇಲೇಳುತ್ತವೆ. ಆತನ ಹೇಳಿಕೆ ಸಮಾಜಕ್ಕೆ ಕಂಟಕವಾಗಿದೆ. ಈತನ ಲೇಖನಗಳನ್ನು ಸಂಗ್ರಹಿಸಿ ಹೊರತಂದಿರುವ ಬಸವ ಮಂಟಪ ಕೃತಿಯನ್ನು ಮುಟ್ಟುಗೋಲಾಕಿ ಆತನ ಮೇಲೆ ಸುಮೋಟೋ ಕೇಸ್ ದಾಖಲಿಸಿ ಶಿಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.
📲Get App