🔥 ट्रेंडिंग डिप्टी साहब लालसोट व तहसीलदार लालसोट व... दिल्ली में सड़क हादसे के पीड़ित को मिल... दिल्ली सीनियर रेजिडेंट भर्ती परीक्षा म... Students Forced to Wait Until 8 PM for... ಆಶಾ ಕಾರ್ಯಕರ್ತೆಯರ ಅನಿರ್ದಿಷ್ಟಾವಧಿ ಅಹೋರಾತ... मुख्यमंत्री डॉ. मोहन यादव ने देवास के...
17 नव. 2026•
ગુજરાતી मराठी ਪੰਜਾਬੀ বাংলা

ರಾಯಚೂರು ಜಿಲ್ಲಾ ಸಮಿತಿ ಸಭೆ ಯಶಸ್ವಿ - ಸಿಂಧನೂರಿನಲ್ಲಿ ಸಿಪಿಐ(ಎಂಎಲ್) ರೆಡ್ ಸ್ಟಾರ್ ಜಿಲ್ಲಾ ಸಮಿತಿ ಸಭೆ - ಸಂಘಟನಾ ಬಲವರ್ಧನೆ, ಮುಂದಿನ ಹೋರಾಟಗಳ ಬಗ್ಗೆ ಮಹತ್ವದ ನಿರ್ಣಯ

✍️ रिपोर्टर: Ningappa 🗓 17 नव. 2026, 10:00 PM 👁 16
शेयर करें: 💬 WhatsApp 📘 Facebook 𝕏 Post

ರಾಯಚೂರು ಜಿಲ್ಲಾ ಸಮಿತಿ ಸಭೆ ಯಶಸ್ವಿ - ಸಿಂಧನೂರಿನಲ್ಲಿ ಸಿಪಿಐ(ಎಂಎಲ್) ರೆಡ್ ಸ್ಟಾರ್ ಜಿಲ್ಲಾ ಸಮಿತಿ ಸಭೆ - ರಾಜ್ಯ ಕಾರ್ಯದರ್ಶಿ ಎಂ. ಗಂಗಾಧರ್ ಉಪಸ್ಥಿತಿ - ದಲಿತ, ರೈತ, ಕಾರ್ಮಿಕ, ವಿದ್ಯಾರ್ಥಿ-ಯುವಜನ, ಮಹಿಳೆಯರಲ್ಲಿ ಸಂಘಟನೆ ಬಲಪಡಿಸಿ ಜನಪರ ಹೋರಾಟಗಳಿಗೆ ಕರೆ

ರಾಯಚೂರು ಜಿಲ್ಲಾ ಸಮಿತಿ ಸಭೆ ಯಶಸ್ವಿ

ಸಿಂಧನೂರು: ಸಿಪಿಐ(ಎಂಎಲ್) ರೆಡ್ ಸ್ಟಾರ್ ಪಕ್ಷದ ರಾಜ್ಯ ಸಮಿತಿ ನಿರ್ಣಯದಂತೆ ಇಂದು 17.11.2026 ಸಿಂಧನೂರಿನಲ್ಲಿ ರಾಯಚೂರು ಜಿಲ್ಲಾ ಸಮಿತಿ ಸಭೆಯು ಕೋರಂನೊಂದಿಗೆ ಕಾಮ್ರೇಡ್ ಆದೇಶ ನಗನೂರು ಅವರ ಅಧ್ಯಕ್ಷತೆಯಲ್ಲಿ, ಪಕ್ಷದ ರಾಜ್ಯ ಕಾರ್ಯದರ್ಶಿ ಕಾಮ್ರೇಡ್ ಎಂ. ಗಂಗಾಧರ್ ಅವರ ಉಪಸ್ಥಿತಿಯಲ್ಲಿ ಯಶಸ್ವಿಯಾಗಿ ಜರುಗಿತು.

ಸಭೆಯಲ್ಲಿ ಪ್ರಮುಖ ಅಜೆಂಡಾಗಳ ಕುರಿತು ಸುದೀರ್ಘ ಚರ್ಚೆ ನಡೆಸಿ, ಸಂಘಟನಾ ಬಲವರ್ಧನೆ ಹಾಗೂ ಮುಂದಿನ ಹೋರಾಟಗಳ ಕುರಿತು ಮಹತ್ವದ ನಿರ್ಣಯಗಳನ್ನು ಅಂಗೀಕರಿಸಲಾಯಿತು.

ದಲಿತರು, ರೈತರು, ಕಾರ್ಮಿಕರು, ವಿದ್ಯಾರ್ಥಿ-ಯುವಜನರು ಹಾಗೂ ಮಹಿಳೆಯರ ನಡುವೆ ಕಮ್ಯುನಿಸ್ಟ್ ಪಕ್ಷದ ಸಂಘಟನೆಯನ್ನು ಬಲಪಡಿಸಿ, ಪ್ರಸ್ತುತ ಸಾಮಾಜಿಕ-ರಾಜಕೀಯ ಪರಿಸ್ಥಿತಿಗೆ ಅನುಗುಣವಾಗಿ ಜನಪರ ಹೋರಾಟಗಳನ್ನು ರೂಪಿಸಿ ಮುನ್ನಡೆಸಲು ಕರೆ ನೀಡಲಾಯಿತು.

ಸಭೆಯ ನಿರ್ಣಯಗಳನ್ನು ಪ್ರತಿಯೊಬ್ಬ ಜಿಲ್ಲಾ ಸಮಿತಿ ಸಂಗಾತಿಯೂ ಕಟ್ಟುನಿಟ್ಟಾಗಿ ಜಾರಿಗೊಳಿಸಿ, ಸಂಘಟನೆ ಮತ್ತು ಹೋರಾಟಗಳನ್ನು ಬಲಪಡಿಸಲು ಸಕ್ರಿಯವಾಗಿ ಕಾರ್ಯಪ್ರವೃತ್ತರಾಗಬೇಕೆಂದು ಸಭೆ ತೀರ್ಮಾನಿಸಿತು.
📲Get App