🔥 TRENDING ਚੀਨ ਦੇ ਰਾਜਦੂਤ ਨੇ ਲੁਧਿਆਣਾ ਵਿੱਚ ਸ਼ਾਹੀ ਇਮ... Terrorists on Motorcycle Attack in Kul... Chhattisgarh CM Inaugurates NIT Raipur... All India Radio's Raipur Hindi news br... Portal revamp in Amritsar hampers vehi... Former Punjab BJP chief protests rollo...
12 Nov 2026•
ગુજરાતી मराठी ਪੰਜਾਬੀ বাংলা

ಐತಿಹಾಸಿಕ ಗುಂಡಿ ಮಹದೇವಪ್ಪ ವೃತ್ತಕ್ಕೆ ಆಧುನಿಕ ಸ್ಪರ್ಶ ಪುಟಾಣಿ ಮಕ್ಕಳಿಂದ ನೂತನ ವೃತ್ತ ಉದ್ಘಾಟನೆ

✍️ Reporter: Viswanatha D R 🗓 12 Nov 2026, 01:43 AM 👁 10
Watch on: 📘 Facebook
Share: 💬 WhatsApp 📘 Facebook 𝕏 Post
ದಾವಣಗೆರೆ:ನಗರದ ಐತಿಹಾಸಿಕ ಗುರುತಾಗಿರುವ ಗುಂಡಿ ಮಹದೇವಪ್ಪ ವೃತ್ತದ ನವೀಕರಣ ಕಾಮಗಾರಿ ಪೂರ್ಣಗೊಂಡಿದ್ದು, ನೂತನವಾಗಿ ಅಭಿವೃದ್ಧಿಪಡಿಸಲಾದ ವೃತ್ತವನ್ನು ಪುಟಾಣಿ ಮಕ್ಕಳ ಮೂಲಕ ಉದ್ಘಾಟಿಸಲಾಯಿತು.

ಸುಮಾರು 28 ವರ್ಷಗಳ ಹಿಂದೆ ಫಿಫಾ ಫುಟ್‌ಬಾಲ್ ವಿಶ್ವಕಪ್ ನೆನಪಿಗಾಗಿ ನಿರ್ಮಿಸಲಾಗಿದ್ದ ಈ ವೃತ್ತಕ್ಕೆ ಇದೀಗ ಹೊಸ ರೂಪ ನೀಡಲಾಗಿದೆ. 900 ಚದರ ಅಡಿ ವಿಸ್ತೀರ್ಣದ ಆಕರ್ಷಕ ಫುಟ್‌ಬಾಲ್ ಪ್ರತಿಮೆ, ವಿದ್ಯುತ್ ದೀಪಾಲಂಕಾರ, ಹಸಿರು ಪರಿಸರ, ಸುಸಜ್ಜಿತ ಪಾದಚಾರಿ ಮಾರ್ಗ ಸೇರಿದಂತೆ ಆಧುನಿಕ ಮೂಲಸೌಕರ್ಯಗಳನ್ನು ಕಲ್ಪಿಸಲಾಗಿದೆ. ನಗರದ ಸೌಂದರ್ಯ ಹೆಚ್ಚಿಸುವುದರ ಜತೆಗೆ ಸುಗಮ ಸಂಚಾರ ಹಾಗೂ ಸಾರ್ವಜನಿಕರ ಸುರಕ್ಷತೆಗೂ ಆದ್ಯತೆ ನೀಡಲಾಗಿದೆ.

ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಡಾ. ಪ್ರಭಾ ಮಲ್ಲಿಕಾರ್ಜುನ್, ಶಾಸಕ ಸಮರ್ಥ್ ಶಾಮನೂರು ಸೇರಿದಂತೆ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ಐತಿಹಾಸಿಕ ಪರಂಪರೆಯನ್ನು ಉಳಿಸಿಕೊಂಡು ಆಧುನಿಕ ಸೌಲಭ್ಯಗಳೊಂದಿಗೆ ವೃತ್ತವನ್ನು ಅಭಿವೃದ್ಧಿಪಡಿಸಿರುವುದು ನಗರದ ಸೌಂದರ್ಯೀಕರಣಕ್ಕೆ ಮತ್ತಷ್ಟು ಮೆರುಗು ನೀಡಿದೆ.
📲Get App