🔥 ट्रेंडिंग एमपी के सीएम ने घोषित किया 60 करोड़ रु... मध्य प्रदेश में ग्रीनफ़ील्ड रोड कॉरिडो... बक्सा टाइगर रिज़र्व में बाघनी रानी ने... राजनिश वेलनेस ने पश्चिम बंगाल में चार... दिल्ली पुलिस ने 2013 के मामले में ममता... धर्मेंद्र प्रधान ने पीएम मोदी की 21 नव...
09 नव. 2026•
ગુજરાતી मराठी ਪੰਜਾਬੀ বাংলা

ಜಾಲಹಳ್ಳಿ ಯ ಪರಾಪೂರ ಕೆರೆಯ ಹೆಚ್ಚುವರಿ ನೀರು ಸಂಗ್ರಹಕ್ಕೆ ಅಮೃತ ಸರೋವರ ನಿರ್ಮಾಣ: ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯ ಕಾರ್ಯಕ್ಕೆ ಮೆಚ್ಚುಗೆ

✍️ रिपोर्टर: Khaja Hussain 🗓 09 नव. 2026, 08:12 PM 👁 16
शेयर करें: 💬 WhatsApp 📘 Facebook 𝕏 Post
**ಜಾಲಹಳ್ಳಿ–ದೇವದುರ್ಗ ಬ್ರೇಕಿಂಗ್ ನ್ಯೂಸ್**

# ಜಾಲಹಳ್ಳಿ ಯ ಪರಾಪೂರ ಕೆರೆಯ ಹೆಚ್ಚುವರಿ ನೀರು ಸಂಗ್ರಹಕ್ಕೆ ಅಮೃತ ಸರೋವರ ನಿರ್ಮಾಣ: ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯ ಕಾರ್ಯಕ್ಕೆ ಮೆಚ್ಚುಗೆ


**ಜಾಲಹಳ್ಳಿ:** ಜಾಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪರಾಪೂರ ಕೆರೆ ತುಂಬಿದಾಗ ಹರಿದು ಹೋಗುವ ಹೆಚ್ಚುವರಿ ನೀರನ್ನು ಸಂಗ್ರಹಿಸುವ ಉದ್ದೇಶದಿಂದ 2023-24ನೇ ಸಾಲಿನಲ್ಲಿ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯು ಅಮೃತ ಸರೋವರ ಯೋಜನೆಯಡಿ ನಿರ್ಮಿಸಿದ ಕೆರೆ ಇಂದು ಸ್ಥಳೀಯರಿಗೆ ಹಲವು ರೀತಿಯಲ್ಲಿ ಅನುಕೂಲವಾಗುತ್ತಿದೆ.

ಅಮೃತ ಸರೋವರವು ಸಣ್ಣ ಪ್ರಮಾಣದ ಸುಂದರ ಕೆರೆಯಾಗಿ ರೂಪುಗೊಂಡಿದ್ದು, ಹೆಚ್ಚುವರಿ ನೀರನ್ನು ಸಂಗ್ರಹಿಸುವ ಮೂಲಕ ಜಾನುವಾರುಗಳಿಗೆ ಕುಡಿಯುವ ನೀರು, ಮೀನು ಸಾಕಣೆ, ಪ್ರಾಣಿ-ಪಕ್ಷಿಗಳಿಗೆ ಆಶ್ರಯ ಹಾಗೂ ಕೆರೆಯ ಕೆಳಭಾಗದ ರೈತರ ಕೃಷಿ ಚಟುವಟಿಕೆಗಳಿಗೆ ಸಹಕಾರಿಯಾಗಿದೆ. ವಿಶೇಷವಾಗಿ ಬೇಸಿಗೆ ಸಮಯದಲ್ಲಿಯೂ ಜಾನುವಾರುಗಳಿಗೆ ನೀರು ಲಭ್ಯವಾಗುವುದರ ಜೊತೆಗೆ ರೈತರಿಗೆ ಕೃಷಿ ಚಟುವಟಿಕೆ ನಡೆಸಲು ಅನುಕೂಲವಾಗುತ್ತಿದೆ.

ಈ ಕಾಮಗಾರಿ ಆರಂಭದ ಸಂದರ್ಭದಲ್ಲಿ ಕೆಲವರು ಉದ್ದೇಶಪೂರ್ವಕವಾಗಿ ಅಡ್ಡಿಪಡಿಸಿ, ಕಾಮಗಾರಿಯ ಬಗ್ಗೆ ಅಪಪ್ರಚಾರ ನಡೆಸಿ, ಕಾಮಗಾರಿ ನಿರ್ವಹಿಸಿದವರ ವಿರುದ್ಧ ದೂರುಗಳನ್ನು ಸಲ್ಲಿಸಿದ್ದರು. ಆದರೆ ಇಂತಹ ಅಡೆತಡೆಗಳಿಗೆ ಮಣಿಯದೆ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯು ಮಹತ್ವದ ಯೋಜನೆಯನ್ನು ಉದ್ಯೋಗ ಖಾತ್ರಿ ಯೋಜನೆ ಯಡಿಯಲ್ಲಿ ಕೈಗೆತ್ತಿಕೊಂಡು ಯಶಸ್ವಿಯಾಗಿ ಪೂರ್ಣಗೊಳಿಸಿರುವುದು ಮೆಚ್ಚುಗೆಗೆ ಪಾತ್ರವಾಗಿದೆ.

ಇಂದು ಈ ಅಮೃತ ಸರೋವರವು ನೀರು ಸಂಗ್ರಹಣೆಯ ಜೊತೆಗೆ ಸ್ಥಳೀಯ ಪರಿಸರದ ಸೌಂದರ್ಯವನ್ನು ಹೆಚ್ಚಿಸುವ ಪ್ರೇಕ್ಷಣೀಯ ತಾಣವಾಗಿಯೂ ರೂಪುಗೊಂಡಿದೆ. ಪ್ರವಾಸಿಗರು ಹಾಗೂ ಸ್ಥಳೀಯರು ಒಂದು ದಿನದ ಪ್ರವಾಸಕ್ಕೆ ಭೇಟಿ ನೀಡಿ ಪ್ರಕೃತಿಯ ಸೌಂದರ್ಯವನ್ನು ಸವಿಯಲು ಉತ್ತಮ ವಾತಾವರಣ ಇಲ್ಲಿ ನಿರ್ಮಾಣವಾಗಿದೆ.

ಇದರೊಂದಿಗೆ ಪರಾಪೂರ ಕೆರೆ, ಕೇರಿಲಿಂಗೇಶ್ವರ ದೇವಸ್ಥಾನ, ಮಧ್ಯಭಾಗದಲ್ಲಿರುವ ತಿಮ್ಮಪ್ಪನ ದೇವಸ್ಥಾನ ಹಾಗೂ ಎರಡು ಭಾಗಗಳಲ್ಲಿ ಹರಿದು ಹೋಗುವ ಕೃಷ್ಣಾ ಬಲದಂಡೆ ಕಾಲುವೆಯ ಸುಂದರ ಪರಿಸರವು ನೋಡುಗರ ಮನ ಸೆಳೆಯುತ್ತದೆ. ಈ ಎಲ್ಲ ಸ್ಥಳಗಳು ಒಟ್ಟಾಗಿ ಜಾಲಹಳ್ಳಿ ಭಾಗದ ನೈಸರ್ಗಿಕ ಸೌಂದರ್ಯಕ್ಕೆ ಮತ್ತಷ್ಟು ಮೆರುಗು ನೀಡಿವೆ.

ಗ್ರಾಮದ ಅಭಿವೃದ್ಧಿ ಹಾಗೂ ರೈತರ ಹಿತದೃಷ್ಟಿಯಿಂದ ದೂರದೃಷ್ಟಿಯ ಯೋಜನೆಗಳನ್ನು ಕೈಗೊಂಡರೆ ಅವು ಜನಸಾಮಾನ್ಯರಿಗೆ ಎಷ್ಟು ಉಪಯುಕ್ತವಾಗುತ್ತವೆ ಎಂಬುದಕ್ಕೆ ಈ ಅಮೃತ ಸರೋವರವೇ ಉತ್ತಮ ಉದಾಹರಣೆಯಾಗಿದೆ ಎಂದು ರಾಜ್ಯ ಕಟ್ಟಡ ಕಾರ್ಮಿಕ ಮುಖಂಡರಾದ ಶಬ್ಬೀರ್ ಜಾಲಹಳ್ಳಿ ಹಾಗೂ ಮಹೇಬೂಬ್ ಕುರಕುಂದಿ ಮತ್ತು ಸ್ನೇಹಿತರು ಅಭಿಪ್ರಾಯಪಟ್ಟರು.
ವರದಿ ಖಾಜಾ ಹುಸೇನ್ ಬಾಬಾ ಜಾಲಹಳ್ಳಿ
📲Get App