🔥 ट्रेंडिंग मुज़फ़्फ़रनगर में तेज़ गाड़ी ने बिजली... ईसी ने आईटी निदेशक-जनरल पर वरिष्ठ उप-न... दिवाली के बाद दिल्ली-NCR में हवा की गु... हैदराबाद अस्पताल में दिवाली के दौरान ब... कोच्ची में प्रीमियम कार एक्सेसरी शॉप म... मलप्पुरम में शादी की दावत से जुड़े शिग...
09 नव. 2026•
ગુજરાતી मराठी ਪੰਜਾਬੀ বাংলা

ದೇವದುರ್ಗದಲ್ಲಿ ಅರುಂಧತಿ ಪತ್ತಿನ ಸಹಕಾರ ಸಂಘದ ನೂತನ ಶಾಖೆ ಉದ್ಘಾಟನೆ - ವಿಧಾನ ಪರಿಷತ್ ಸದಸ್ಯ ಎ ವಸಂತ ಕುಮಾರ ಚಾಲನೆ - ಎಲ್ಲರೂ ಒಬ್ಬರಿಗಾಗಿ, ಒಬ್ಬರು ಎಲ್ಲರಿಗಾಗಿ ಎಂಬುದು ಸಹಕಾರದ ಮೂಲ ತತ್ವ

✍️ रिपोर्टर: Ningappa 🗓 09 नव. 2026, 10:13 AM 👁 19
शेयर करें: 💬 WhatsApp 📘 Facebook 𝕏 Post

ದೇವದುರ್ಗ ಪಟ್ಟಣದ ಶಾಂತಿನಗರದಲ್ಲಿ ಅರುಂಧತಿ ಪತ್ತಿನ ಸಹಕಾರ ಸಂಘ (ಪರಿಶಿಷ್ಟ ಜಾತಿ) ನಿಯಮಿತ ನೂತನ ಶಾಖೆ ಉದ್ಘಾಟನೆ - ವಿಧಾನ ಪರಿಷತ್ ಸದಸ್ಯ ಎ ವಸಂತ ಕುಮಾರ ಉದ್ಘಾಟನೆ - ಶಾಸಕಿ ಕರೆಮ್ಮ ಜೆ. ನಾಯಕ, ಬಸವರಾಜ ಪಾಟೀಲ ಇಟಗಿ ಭಾಗಿ - ಸಣ್ಣ ವ್ಯಾಪಾರಸ್ಥರು, ರೈತರು, ಸಣ್ಣ ಉದ್ಯಮಿಗಳಿಗೆ ಉತ್ತಮ ಆರ್ಥಿಕ ಸೇವೆ ನೀಡಲು ಕರೆ

ರಾಯಚೂರು:ದೇವದುರ್ಗ ಪಟ್ಟಣದ ಶಾಂತಿನಗರದಲ್ಲಿ ಅರುಂಧತಿ ಪತ್ತಿನ ಸಹಕಾರ ಸಂಘ (ಪರಿಶಿಷ್ಟ ಜಾತಿ) ನಿಯಮಿತ ನೂತನ ಶಾಖೆಯನ್ನು ವಿಧಾನ ಪರಿಷತ್ ಸದಸ್ಯ ಎ ವಸಂತ ಕುಮಾರ ಭಾನುವಾರ ಉದ್ಘಾಟಿಸಿದರು.

ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲರೂ ಒಬ್ಬರಿಗಾಗಿ, ಒಬ್ಬರು ಎಲ್ಲರಿಗಾಗಿ ಎಂಬುದು ಸಹಕಾರ ಕ್ಷೇತ್ರದ ಮೂಲ ತತ್ವ. ಅನುಸರಿಸಿ ಆರ್ಥಿಕ ಅಭಿವೃದ್ಧಿ ಹೊಂದಬೇಕು ಎಂದು ಹೇಳಿದರು.

ಕುಲ ಕಸುಬು ಆಧಾರಿತ ಸಣ್ಣ ಸಣ್ಣ ವ್ಯಾಪಾರಸ್ಥರು, ರೈತರು, ಸಣ್ಣ ಉದ್ಯಮಿಗಳು ಹಾಗೂ ಸಾರ್ವಜನಿಕರಿಗೆ ಉತ್ತಮ ಆರ್ಥಿಕ ಸೇವೆ ಒದಗಿಸುವ ಮೂಲಕ ಜನರ ಅಭಿವೃದ್ಧಿಗೆ ಶ್ರಮಿಸಲಿ ಎಂದು ಆಶಿಸಿದರು.

ಕಾರ್ಯಕ್ರಮದಲ್ಲಿ ಶಾಸಕಿ ಕರೆಮ್ಮ ಜಿ ನಾಯಕ, ಮಾಜಿ ವಿಧಾನ ಪರಿಷತ್ ಸದಸ್ಯ ಬಸವರಾಜ ಪಾಟೀಲ ಇಟಗಿ, ಅರುಂಧತಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಲಕ್ಷ್ಮಣ ಅಕ್ಕರಕಿ, ಉಪಾಧ್ಯಕ್ಷ ಕರಿಯಪ್ಪ, ವಕೀಲ ಮರಿಲಿಂಗಪ್ಪ ಪುರಸಭೆ ಮಾಜಿ ಅಧ್ಯಕ್ಷ ರಂಗಪ್ಪ ಗೋಸಲ, ಬಾಪುಗೌಡ ಚಿಕ್ಕಹೊನ್ನುಕುಣಿ, ಪುರಸಭೆ ಮಾಜಿ ಸದಸ್ಯ ಮಾನಪ್ಪ ಮೇಸ್ತ್ರಿ, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಬಸನಗೌಡ ದೇಸಾಯಿ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಅಜೀಜ್ ಸಾಬ್, ಯುವ ಘಟಕ ಅಧ್ಯಕ್ಷ ರಮೇಶ ರಾಮನಾಳ, ಸಂಘದ ನಿರ್ದೇಶಕರಾದ ರಾಮಪ್ಪ, ಅಯ್ಯಾಳಪ್ಪ ರೇಣುಕಾ ಮರಿಲಿಂಗ, ಜಮುನಾ ಸೇರಿ ವಿವಿಧ ರಾಜಕೀಯ ಧುರೀಣರು ಭಾಗವಹಿಸಿದ್ದರು.
📲Get App