ದೇವದುರ್ಗದಲ್ಲಿ ಸಂಭ್ರಮದಿಂದ ಜರುಗಿದ ಆರ್ಎಸ್ಎಸ್ ಪಥಸಂಚಲನ - ರಾಷ್ಟ್ರೀಯತೆಯೇ ಸಂಘದ ಆದರ್ಶ ಎಂದ ಗುರುಬಸವ ಶಿವಾಚಾರ್ಯರು
ದೇವದುರ್ಗದಲ್ಲಿ ವಿಜಯದಶಮಿ ಅಂಗವಾಗಿ ಆರ್ಎಸ್ಎಸ್ 100ನೇ ವರ್ಷದ ಪಥಸಂಚಲನ ಅದ್ದೂರಿ - ನಗರದ ಪ್ರಮುಖ ಬೀದಿಗಳಲ್ಲಿ ಸ್ವಯಂಸೇವಕರ ಪಥಸಂಚಲನ, ಪುಷ್ಪವೃಷ್ಟಿ ಸ್ವಾಗತ, ರಾಷ್ಟ್ರೀಯತೆಯೇ ಸಂಘದ ಆದರ್ಶ, ಭಾರತದ ಸನಾತನ ಪರಂಪರೆ ಉಳಿಸಿಕೊಂಡಿದೆ ಎಂದು ಗುರುಬಸವ ಶಿವಾಚಾರ್ಯರ ಅಭಿಮತ
ದೇವದುರ್ಗ: ವಿಜಯದಶಮಿ ಅಂಗವಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) 100ನೇ ವರ್ಷದ ಸಂಭ್ರಮದ ಪಥಸಂಚಲನ ಮಂಗಳವಾರ ದೇವದುರ್ಗದಲ್ಲಿ ಅದ್ದೂರಿಯಾಗಿ ಜರುಗಿತು.
ನಗರದ ಪ್ರಮುಖ ಬೀದಿಗಳು, ಗಲ್ಲಿಗಲ್ಲಿಗಳಲ್ಲಿ ಸ್ವಯಂಸೇವಕರು ಶಿಸ್ತುಬದ್ಧವಾಗಿ ಪಥಸಂಚಲನ ನಡೆಸಿದರು. ಬ್ಯಾಂಡ್ ವಾದ್ಯ, ಆಕರ್ಷಕ ರಂಗೋಲಿಗಳು, ದಾರಿಯ ಇಕ್ಕೆಲೆಗಳಲ್ಲಿ ನಿಂತು ಸಾರ್ವಜನಿಕರು ಸ್ವಯಂಸೇವಕರ ಮೇಲೆ ಪುಷ್ಪವೃಷ್ಟಿ ಮಾಡುವ ಮೂಲಕ ಸಂಭ್ರಮದಿಂದ ಪಥಸಂಚಲನ ಸ್ವಾಗತಿಸಲಾಯಿತು.
ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಪರಮಪೂಜ್ಯ ಶಿವಾಚಾರ್ಯ ಗುರುಬಸವ ರಾಜಗುರುಗಳು ಮಾತನಾಡಿ, ಆರ್ಎಸ್ಎಸ್ ನೂರು ವರ್ಷದ ಇತಿಹಾಸ ಹಾಗೂ ವಿಶಿಷ್ಟ ಪರಂಪರೆಯನ್ನು ಹೊಂದಿರುವ ಜಗತ್ತಿನ ಅತಿ ದೊಡ್ಡ ಸಂಘಟನೆಗಳಲ್ಲಿ ಒಂದಾಗಿದೆ. ಭಾರತ ತನ್ನ ಸಾಂಸ್ಕೃತಿಕ ಅಸ್ತಿತ್ವವನ್ನು ಉಳಿಸಿಕೊಂಡಿದೆ. ದೇಶದ ಸಂಸ್ಕೃತಿ, ಪರಂಪರೆ ಮತ್ತು ರಾಷ್ಟ್ರೀಯತೆ ಸಂರಕ್ಷಣೆಯ ಆಶಯದೊಂದಿಗೆ ಸಂಘ ಕಾರ್ಯನಿರ್ವಹಿಸುತ್ತಿದೆ. ರಾಷ್ಟ್ರೀಯತೆಯೇ ಸಂಘದ ಆದರ್ಶವಾಗಿದೆ ಎಂದು ಹೇಳಿದರು.
ಮುಖ್ಯ ವಕ್ತಾರ ಪ್ರಹ್ಲಾದ ಕೆಂಗಲ್ ಮಾತನಾಡಿ, ಭಾರತದ ಸನಾತನ ಪರಂಪರೆ ಮತ್ತು ವೈವಿಧ್ಯಮಯ ಆಚರಣೆಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕೆಲಸ ಮಾಡಬೇಕು. ವಿಜಯದಶಮಿಯು ಶಕ್ತಿ ಆರಾಧನೆ ಹಾಗೂ ದುಷ್ಟಶಕ್ತಿಗಳ ಸಂಹಾರದ ಸಂಕೇತವಾಗಿದೆ. ಮಕ್ಕಳಲ್ಲಿ ಬಾಲ್ಯದಿಂದಲೇ ದೇಶಪ್ರೇಮ, ಶಿಸ್ತು ಮತ್ತು ರಾಷ್ಟ್ರಭಕ್ತಿ ಮೂಡಿಸುವ ಉದ್ದೇಶದಿಂದ ಡಾ. ಹೆಡ್ಗೆವಾರ್ ಅವರು ಸಂಘವನ್ನು ಸ್ಥಾಪಿಸಿದರು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಪ್ರಚಾರಕ ಶ್ರೀ ಪ್ರಭು ಅರವಿಂದ, ಅಖಂಡ ಕವಲು ಸಿದ್ದರಾಮೇಶ್ವರ ಶಿವಾಚಾರ್ಯರು ಸಾನಿಧ್ಯ ವಹಿಸಿದ್ದರು. ಸಂಘದ ಪದಾಧಿಕಾರಿಗಳು, ಸ್ವಯಂಸೇವಕರು ಹಾಗೂ ಸಾರ್ವಜನಿಕರು ದೊಡ್ಡ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.