🔥 TRENDING ସମ୍ବଲପୁର ବିଶ୍ୱବିଦ୍ୟାଳୟ ପରିସରରେ ପ୍ରଫେସର... ಬೀದರ್‍ನಲ್ಲಿ ಜಿಲ್ಲಾ ಮಟ್ಟದ ಕರ್ನಾಟಕ ರಾಜ್ಯ... सिकर में पंचायती राज चुनाव के तृतीय चर... ଅର୍ଣ୍ଣବ’ପରେ ପୁଣି ଆସୁଛି ଆଉ ଏକ ବାତ୍ୟା: ଉ... Cheetah CCB-4 Enters Baran Forest Area... ଆଇପିଏସ୍ ସ୍ତରରେ ଅଦଳବଦଳ; ଜେଲ୍ ଡିଜି ପଦରୁ...
02 Nov 2026•
ગુજરાતી मराठी ਪੰਜਾਬੀ বাংলা
National

ಬೀದಿ ನಾಯಿಗಳ ಹಾವಳಿ: ಕ್ರಮಕ್ಕೆ ಆಗ್ರಹ

✍️ Reporter: Basavaraj pujari 🗓 02 Nov 2026, 11:31 AM 👁 32
Watch on: 📘 Facebook
Share: 💬 WhatsApp 📘 Facebook 𝕏 Post

ಬೀದರ್: ನಗರದ ಮೈಲೂರಿನ ಸಿ.ಎಂ.ಸಿ. ಕಾಲೊನಿಯಲ್ಲಿ ಬೀದಿ ನಾಯಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಗೊಂಡ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಂತೋಷಕುಮಾರ ಜೋಳದಾಪಕೆ ಮಹಾನಗರ ಪಾಲಿಕೆಯನ್ನು ಆಗ್ರಹಿಸಿದ್ದಾರೆ.

ಬೀದಿ ನಾಯಿಗಳ ಹಾವಳಿ: ಕ್ರಮಕ್ಕೆ ಆಗ್ರಹ

ಬೀದರ್: ನಗರದ ಮೈಲೂರಿನ ಸಿ.ಎಂ.ಸಿ. ಕಾಲೊನಿಯಲ್ಲಿ ಬೀದಿ ನಾಯಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಗೊಂಡ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಂತೋಷಕುಮಾರ ಜೋಳದಾಪಕೆ ಮಹಾನಗರ ಪಾಲಿಕೆಯನ್ನು ಆಗ್ರಹಿಸಿದ್ದಾರೆ.
ಕಾಲೊನಿಯ ಕಾಲಾ ಹನುಮಾನ ಮಂದಿರ ಹಾಗೂ ಹಡಪದ ಅಪ್ಪಣ್ಣ ವೃತ್ತದ ನಡುವಿನ ಪ್ರದೇಶದಲ್ಲಿ ಎರಡು ವಾರದಿಂದ ಬೀದಿ ನಾಯಿಗಳ ಉಪಟಳ ಹೆಚ್ಚಾಗಿದೆ. ಮಕ್ಕಳು, ಮಹಿಳೆಯರು ಹಾಗೂ ಹಿರಿಯರು ಮನೆಯಿಂದ ಹೊರ ಬರಲು ಭಯ ಪಡುವ ಪರಿಸ್ಥಿತಿ ಉಂಟಾಗಿದೆ ಎಂದು ತಿಳಿಸಿದ್ದಾರೆ.
ನಾಯಿಗಳು ಹಿಂಡು ಹಿಂಡಾಗಿ ಓಡಾಡುತ್ತಿವೆ. ಕೈಯಲ್ಲಿ ತಿಂಡಿ, ತಿನಿಸು ಹಿಡಿದುಕೊಂಡು ಹೋಗುವವರನ್ನು ಹಿಂಬಾಲಿಸುತ್ತಿವೆ. ಹೀಗಾಗಿ ಜನರಲ್ಲಿ ಆತಂಕ ಸೃಷ್ಟಿಯಾಗಿದೆ ಎಂದು ಹೇಳಿದ್ದಾರೆ.
ನಾಯಿಗಳ ಹಾವಳಿಯಿಂದ ಅನೇಕ ಪಾಲಕರು ತಮ್ಮ ಮಕ್ಕಳನ್ನು ಆಟವಾಡಲು ಹೊರಗೆ ಬಿಡುತ್ತಿಲ್ಲ. ಬೆಳಿಗ್ಗೆ ಖುದ್ದು ಶಾಲೆಗೆ ಬಿಡುವುದು ಹಾಗೂ ಸಂಜೆ ಮರಳಿ ಮನೆಗೆ ಕರೆದುಕೊಂಡು ತರುವುದನ್ನು ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಮಹಾನಗರ ಪಾಲಿಕೆ ಅಧಿಕಾರಿಗಳು ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ಬೀದಿ ನಾಯಿಗಳನ್ನು ಹಿಡಿದು, ಚಿಕ್ಕಪೇಟೆ ಸಮೀಪದ ಪ್ರಾಣಿಗಳ ಸಂರಕ್ಷಣೆ ಕೇಂದ್ರಕ್ಕೆ ಸಾಗಿಸಬೇಕು ಎಂದು ಒತ್ತಾಯಿಸಿದ್ದಾರೆ.
📲Get App