ದೇವದುರ್ಗದಲ್ಲಿ ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯ? ಅಂಬೇಡ್ಕರ್ ಸರ್ಕಲ್ ನಿಂದ ಜಾಲಹಳ್ಳಿ ರಸ್ತೆವರೆಗೆ ಫುಟ್ಪಾತ್ ಒತ್ತುವರಿ, ಅಡ್ಡದಿಡ್ಡಿ ವಾಹನ ನಿಲುಗಡೆ - ಜನರ ಪರದಾಟ
ದೇವದುರ್ಗ ನಗರದ ಅಂಬೇಡ್ಕರ್ ಸರ್ಕಲ್ ನಿಂದ ಜಾಲಹಳ್ಳಿ ರಸ್ತೆವರೆಗೆ ಫುಟ್ಪಾತ್ ಒತ್ತುವರಿ ಮತ್ತು ವಾಹನಗಳ ಅಸ್ತವ್ಯಸ್ತ ನಿಲುಗಡೆಯಿಂದ ಸಾರ್ವಜನಿಕರ ನರಕಯಾತನೆ - ಪುರಸಭೆ ಮತ್ತು ಸಂಚಾರಿ ಪೊಲೀಸರ ವಿರುದ್ಧ ಜನರ ಆಕ್ರೋಶ
ದೇವದುರ್ಗದಲ್ಲಿ ಪುರಸಭೆಯ ಅಧಿಕಾರಿಗಳ ಕಣ್ಣಿಗೆ ಬಟ್ಟೆ? ರಸ್ತೆಗಳಲ್ಲಿ ಜನಸಾಮಾನ್ಯರ ಪರದಾಟ!
ದೇವದುರ್ಗ: ದೇವದುರ್ಗ ನಗರದ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಸರ್ಕಲ್ ಇಂದ ಹಿಡಿದು ಜಾಲಹಳ್ಳಿ ರಸ್ತೆಯವರೆಗೂ ವಾಹನಗಳ ಅಡ್ಡದಿಡ್ಡಿ ನಿಲುಗಡೆ ಮತ್ತು ಫುಟ್ಪಾತ್ ಒತ್ತುವರಿಯಿಂದಾಗಿ ಸಾರ್ವಜನಿಕರ ಬದುಕು ನರಕಯಾತನೆಯಾಗಿದೆ ಎಂದು ನಾಗರಿಕರು ಆರೋಪಿಸಿದ್ದಾರೆ.
ರಸ್ತೆ ಒತ್ತುವರಿಯಾಗಿದ್ದರೂ ಅಧಿಕಾರಿಗಳು ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿದ್ದಾರೆ. ದಿನನಿತ್ಯ ಓಡಾಡುವ ಪಾದಚಾರಿಗಳು, ಶಾಲಾ ಮಕ್ಕಳು ಹಾಗೂ ಅಂಗಡಿ ಮಾಲೀಕರು ಉಸಿರಾಡಲೂ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಜನರಿಗೆ ಮೂಲಭೂತ ಸೌಕರ್ಯ ಮತ್ತು ಸುಗಮ ಸಂಚಾರ ಕಲ್ಪಿಸಬೇಕಾದ ಸ್ಥಳೀಯ ಪುರಸಭೆ ಆಡಳಿತ ಹಾಗೂ ಸಂಚಾರಿ ಪೊಲೀಸ್ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.
ಅಪಾಯದ ಗಂಟೆ: ಫುಟ್ಪಾತ್ಗಳು ಒತ್ತುವರಿಯಾಗಿರುವುದರಿಂದ ಜನರು ಅನಿವಾರ್ಯವಾಗಿ ನಡುರಸ್ತೆಯಲ್ಲಿಯೇ ನಡೆಯಬೇಕಾಗಿದ್ದು, ಯಾವುದೇ ಕ್ಷಣದಲ್ಲಿಯೂ ದೊಡ್ಡ ಅಪಘಾತಗಳು ಸಂಭವಿಸುವ ಅಪಾಯವಿದೆ.
ಅಂಗಡಿಯ ಮುಂದಿನ ರಸ್ತೆಗಳಲ್ಲಿ ಅನಧಿಕೃತ ಒತ್ತುವರಿ ಮತ್ತು ವಾಹನಗಳ ಅಸ್ತವ್ಯಸ್ತ ನಿಲುಗಡೆಯಿಂದ ಅಂಗಡಿಗಳ ಮುಂಭಾಗ ಗ್ರಾಹಕರು ಬರಲು ಸಾಧ್ಯವಾಗದೆ ವ್ಯಾಪಾರಸ್ಥರು ಕಂಗಾಲಾಗಿದ್ದಾರೆ.
ಸಾರ್ವಜನಿಕರ ಆಗ್ರಹ: ಜನರ ತೆರಿಗೆ ಹಣದಿಂದ ಸಂಬಳ ಪಡೆಯುವ ಅಧಿಕಾರಿಗಳು ತಕ್ಷಣವೇ ಅತಿಕ್ರಮಣಗಳನ್ನು ತೆರವುಗೊಳಿಸಿ, ಸೂಕ್ತ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಿಕೊಡಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ