🔥 TRENDING अदालत ने बलिया के पूर्व कोतवाल संजय सि... ચીબોડા ખાતે શ્રી આદર્શ એજ્યુકેશન ટ્રસ્... મંગોલપુરી ફેક્ટરીમાં ભીષણ આગ: ચાર કામદ... તુંડાવ ગામ પાસે ફોર વ્હીલર પલટી જતાં અ... विधायक मोंटू सोलंकी जी के जन्मदिन पर ब... गंगापुर सिटी के आदर्श नगर में मोटरसाइक...
01 Nov 2026•
ગુજરાતી मराठी ਪੰਜਾਬੀ বাংলা
Sports

*" ಬೀದರ ಜಿಲ್ಲಾ ಪೊಲೀಸ್, ಬೀದರ್ ನೆಹರು ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಹಮ್ಮಿಕೊಂಡ ಪಥ ಸಂಚಲನ ಅಚ್ಚುಕಟ್ಟಾಗಿ ಶಿಸ್ತು ಬದ್ಧವಾಗಿ ನಡೆಸಿದ್ದ ತುಕಡಿಗ

✍️ Reporter: Basavaraj pujari 🗓 01 Nov 2026, 02:26 PM 👁 11
Share: 💬 WhatsApp 📘 Facebook 𝕏 Post

ಇಂದು ಬೀದರ್ ಜಿಲ್ಲೆಯ ನೆಹರು ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯೋತ್ಸವ ದಿನಾಚರಣೆಯ ಅಂಗವಾಗಿ ಪೊಲೀಸ್ ಪಥ ಸಂಚಲನ ಹಮ್ಮಿಕೊಂಡಿದ್ದು, ಪಥ ಸಂಚಲದ ಪರೇಡ್ ಉಸ್ತುವಾರಿ ಅಧಿಕಾರಿ ಶ್ರೀ ಶರಣಪ್ಪ ಹೆಚ್.ಎಸ್, ಡಿ.ಎಸ್‌.ಪಿ ಡಿ.ಎ.

*" ಬೀದರ ಜಿಲ್ಲಾ ಪೊಲೀಸ್, ಬೀದರ್ ನೆಹರು ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಹಮ್ಮಿಕೊಂಡ ಪಥ ಸಂಚಲನ ಅಚ್ಚುಕಟ್ಟಾಗಿ ಶಿಸ್ತು ಬದ್ಧವಾಗಿ ನಡೆಸಿದ್ದ ತುಕಡಿಗಳಿಗೆ ಅಭಿನಂದನೆಗಳು"*.

ಇಂದು ಬೀದರ್ ಜಿಲ್ಲೆಯ ನೆಹರು ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯೋತ್ಸವ ದಿನಾಚರಣೆಯ ಅಂಗವಾಗಿ ಪೊಲೀಸ್ ಪಥ ಸಂಚಲನ ಹಮ್ಮಿಕೊಂಡಿದ್ದು, ಪಥ ಸಂಚಲದ ಪರೇಡ್ ಉಸ್ತುವಾರಿ ಅಧಿಕಾರಿ ಶ್ರೀ ಶರಣಪ್ಪ ಹೆಚ್.ಎಸ್, ಡಿ.ಎಸ್‌.ಪಿ ಡಿ.ಎ.ಆರ್ ಬೀದರ, ಕಮಾಂಡರಾಗಿ ಶ್ರೀ ಶ್ರೀ ಲಚ್ಚಪ್ಪ, ಆರ್.ಪಿ.ಐ, ಪಥ ಸಂಚಲನದ ಸಹಾಯಕ ಕಮಾಂಡರ ಶ್ರೀ ಉದಯಕುಮಾರ, ಆರ್‌.ಎಸ್‌.ಐ, ಡಿ.ಎ.ಆರ್ಡ ಬೀದರ, ತುಕಡಿಯ ಮುಖ್ಯಸ್ಥರು 01. ಡಿ.ಎ.ಆರ್ ತುಕಡಿ ಶ್ರೀ ಸೈಫನಸಾಬ, ಆರ್‌.ಎಸ್‌.ಐ ಡಿ.ಎ.ಆರ್ ಘಟಕ ಬೀದರ 02) ಕೆ.ಎಸ್.ಆರ್.ಪಿ ತುಕಡಿ ಶ್ರೀ ಪ್ರಕಾಶ, ಆರ್.ಎಸ್.ಐ, 03) ನಾಗರಿಕ ಪೊಲೀಸ್ ತುಕಡಿ ಶ್ರೀ ಬಸವರಾಜ, ಪ್ರೋ. ಆರ್.ಎಸ್.ಐ, 04) ಮಹಿಳಾ ಪೊಲೀಸ್ ತಂಡ ದಿವ್ಯಾರಾಣಿ, ಪ್ರೋ. ಪಿ.ಎಸ್.ಐ, 05) ಹೊಮಗಾರ್ಡ್ ಪುರುಷರ ತುಕಡಿ ಚೆನ್ನಪ್ಪ, ಪಿ.ಎಲ್.ಸಿ, 06) ಅಗ್ನಿ ಶಾಮಕ ಠಾಣೆ ತುಕಡಿ ಶ್ರೀ ಚೆನ್ನಪ್ಪ, ಪಿ.ಎಲ್.ಸಿ, 07) ಅರಣ್ಯ ಇಲಾಖೆ ತುಕಡಿ ಶ್ರೀ ಶಾಂತಕುಮಾರ, ಡಿ.ಆರ್.ಎಫ್.ಓ, 08) ಹೊಮಗಾರ್ಡ ಮಹಿಳೆಯರ ತುಕಡಿ ಶ್ರೀಮತಿ ಭಾಗ್ಯಜ್ಯೋತಿ, 09) ಸಿನಿಯರ್ ಎನ್.ಸಿ.ಸಿ ಕುಮಾರ ಫಿಲೊಮಿನ್, 10) ಬಾಯ್ಸ್ ಸ್ಕ್ವಾಟ್ಸ್ ಕುಮಾರ ವೀರಭದ್ರಾ, ಶರಣಬಸವ ಪಬ್ಲಿಕ್ ಶಾಲೆ, ಗೊರನಳ್ಳಿ, 11) ಗಲ್ಸ್ ಗೈಡ್ಸ್ ಕುಮಾರ ಸಾನ್ವಿ, ಶರಣಬಸವ ಪಬ್ಲಿಕ್ ಶಾಲೆ, ಗೊರನಳ್ಳಿ, ಮತ್ತು ಪೊಲೀಸ್ ವಾದ್ಯ ವೃಂದ ಶ್ರೀ ಸುನೀಲ, ಸಿ.ಹೆಚ್.ಸಿ-49, ಡಿ.ಎ.ಆರ್ ಘಟಕ ಬೀದರ ರವರುಗಳು ತಮ್ಮ ತಮ್ಮ ತುಕಡಿಯ ನೇತೃತ್ವವನ್ನು ವಹಿಸಿಕೊಂಡು ಪಥ ಸಂಚಲನವನ್ನು ಶಿಸ್ತುಬದ್ಧವಾಗಿ, ಅಚ್ಚುಕಟ್ಟಾಗಿ ಕವಾಯತು ಪ್ರದರ್ಶನ ನೀಡಿರುವ 11 ತುಕಡಿಯ ಅಧಿಕಾರಿ, ಸಿಬ್ಬಂದಿ ಮತ್ತು ವಿದ್ಯಾರ್ಥಿ, ವಿದ್ಯಾರ್ಥಿನಿ ರವರಿಗೆ ಅಭಿನಂದನೆಗಳು.

ಪಥ ಸಂಚಲನವು ಶಿಸ್ತುಬದ್ಧವಾಗಿ ಮತ್ತು ಅಚ್ಚುಕಟ್ಟಾಗಿ ಪ್ರದರ್ಶನ ತೋರಲು ಕಾರಣ ಕರ್ತರಾದ ಶ್ರೀ ಶರಣಪ್ಪ ಹೆಚ್.ಎಸ್, ಡಿ.ವೈ.ಎ.ಸ್ಪಿ ಡಿ.ಎ.ಆರ್ ಬೀದರ್ ರವರಿಗೆ ಸಲ್ಲುತ್ತದೆ. ಇವರು ಪಥ ಸಂಚಲನದ ಸಂಪೂರ್ಣ ಮುತುವರ್ಜಿಯನ್ನು ವಹಿಸಿ, ಸ್ವತಹ ತಾವೇ 11 ತುಕಡಿಗಳ ಪಥ ಸಂಚಲನ ಪರಿಪೂರ್ಣವಾಗಿ ಹೊಂದಾಣಿಕೆ ಆಗುವಂತೆ ಮಾಡಿಸಿದ್ದರಿಂದ ಪಥ ಸಂಚಲನವು ಪ್ರಸಂಶೆಯನ್ನು ಪಡೆದಿದೆ.

ಪ್ರದೀಪ್ ಗುಂಟಿ, ಐ.ಪಿ.ಎಸ್.,
ಪೊಲೀಸ್ ವರೀಷ್ಠಾಧಿಕಾರಿಗಳು,
ಬೀದರ ಜಿಲ್ಲೆ, ಬೀದರ.
📲Get App