🔥 TRENDING સાબરકાંઠા જિલ્લામાં હિંમતનગરમાં રોડ પર... Odisha Faces Fresh Cyclone Threat, Wea... Pulivendula Journalists Attacked Durin... India Today crew attacked in Pulivendu... Chainsaw Attack on Andhra School Linke... Two Youths Killed in Bus-Bike Collisio...
01 Nov 2026•
ગુજરાતી मराठी ਪੰਜਾਬੀ বাংলা

ದೇವದುರ್ಗದಲ್ಲಿ ತಾಲ್ಲೂಕು ಆಡಳಿತದಿಂದ ಅದ್ದೂರಿ ಕನ್ನಡ ರಾಜ್ಯೋತ್ಸವ ಆಚರಣೆ - ಶಾಸಕಿ ಕರಿಯಮ್ಮ ನಾಯಕ ಭಾಗಿ, ಕನ್ನಡವೇ ನಮ್ಮ ಅಸ್ಮಿತೆ ಎಂದ ಶಾಸಕಿ

✍️ Reporter: Ningappa 🗓 01 Nov 2026, 07:39 PM 👁 14
Share: 💬 WhatsApp 📘 Facebook 𝕏 Post

ದೇವದುರ್ಗ ತಾಲ್ಲೂಕು ಆಡಳಿತದಿಂದ 71ನೇ ಕನ್ನಡ ರಾಜ್ಯೋತ್ಸವ ಅದ್ದೂರಿ ಆಚರಣೆ - ಧ್ವಜಾರೋಹಣ, ಮೆರವಣಿಗೆಯಲ್ಲಿ ಶಾಸಕಿ ಕರಿಯಮ್ಮ ನಾಯಕ ಭಾಗಿ, ಕನ್ನಡವನ್ನು ಉಳಿಸಿ ಬೆಳೆಸೋಣ ಎಂದು ಕರೆ

ದೇವದುರ್ಗ: ತಾಲ್ಲೂಕು ಆಡಳಿತದಿಂದ ಅದ್ದೂರಿ ಕನ್ನಡ ರಾಜ್ಯೋತ್ಸವ ಆಚರಣೆ

ದೇವದುರ್ಗ: ತಾಲ್ಲೂಕು ಆಡಳಿತದಿಂದ ನಡೆದ 71ನೇ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಕ್ಷೇತ್ರದ ಶಾಸಕಿ ಕರಿಯಮ್ಮ ಜಿ. ನಾಯಕ ಅವರು ಭಾಗವಹಿಸಿ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.

"ಕನ್ನಡವೇ ನಮ್ಮ ಹೆಮ್ಮೆ, ಕನ್ನಡವೇ ನಮ್ಮ ಉಸಿರು! ನಾಡಿನ ಸಮಸ್ತ ಜನತೆಗೆ 71ನೇ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ಕನ್ನಡ ರಾಜ್ಯೋತ್ಸವದ ಸಂಭ್ರಮಾಚರಣೆಯಲ್ಲಿ ಭಾಗವಹಿಸಿ, ಕನ್ನಡಾಂಬೆಗೆ ಗೌರವ ನಮನ ಸಲ್ಲಿಸಿ, ಕನ್ನಡದ ಧ್ವಜಾರೋಹಣ ಹಾಗೂ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು ಅತ್ಯಂತ ಸಂತಸ ತಂದಿದೆ" ಎಂದರು.

"ನಮ್ಮ ಕನ್ನಡ ನಾಡಿನ ಶ್ರೀಮಂತ ಇತಿಹಾಸ, ಭಾಷೆ, ಸಾಹಿತ್ಯ, ಸಂಸ್ಕೃತಿ ಹಾಗೂ ಪರಂಪರೆ ನಮ್ಮೆಲ್ಲರ ಹೆಮ್ಮೆ. ಕನ್ನಡ ಕೇವಲ ಭಾಷೆಯಲ್ಲ, ಅದು ನಮ್ಮ ಅಸ್ಮಿತೆ, ನಮ್ಮ ಸ್ವಾಭಿಮಾನ ಹಾಗೂ ನಮ್ಮೆಲ್ಲರನ್ನೂ ಒಗ್ಗೂಡಿಸುವ ಭಾವನಾತ್ಮಕ ಬಂಧ. ಕನ್ನಡವನ್ನು ಪ್ರೀತಿಸೋಣ, ಕನ್ನಡವನ್ನು ಉಳಿಸೋಣ, ಕನ್ನಡವನ್ನು ಬೆಳೆಸೋಣ" ಎಂದು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು, ವಿವಿಧ ಕನ್ನಡ ಪರ ಸಂಘಟನೆಗಳ ಮುಖಂಡರು ಸೇರಿದಂತೆ ಸಾರ್ವಜನಿಕರು, ಶಾಲಾ ಮಕ್ಕಳು ಭಾಗವಹಿಸಿದ್ದರು.
📲Get App