🔥 TRENDING समस्तीपुर पुलिस लाइन में अग्निशमन विभा... ಮರಣಾನಂತರ ದೇಹದಾನಕ್ಕೆ ಮುಂದಾದ ಬೀದರ್‌ನ ಮೂವ... ಮರಣೋತ್ತರ ದೇಹದಾನಕ್ಕೆ ಮೂವರು ಶಿಕ್ಷಕರು, ಒಬ... युवाओं के हितों से खिलवाड़ करने वालों... ચોટીલાના રાજપરામાં વાયર ચોરીનો ભેદ ઉકે... ग्राम पंचायत वेंडिया के छांगाड़ी गांव...
16 Oct 2026•
ગુજરાતી मराठी ਪੰਜਾਬੀ বাংলা
Religion

ಭಕ್ತಿ, ಶ್ರದ್ಧೆಯಿಂದ ನಡೆದ ದೀಪ್ ಗರ್ಭ ಉತ್ಸವ

✍️ Reporter: Basavaraj pujari 🗓 16 Oct 2026, 07:11 PM 👁 19
Share: 💬 WhatsApp 📘 Facebook 𝕏 Post

ಬೀದರ್: ನವರಾತ್ರಿ ಮಹೋತ್ಸವದ ನಿಮಿತ್ತ ನಗರದ ಕೆಇಬಿ ಹನುಮಾನ ಮಂದಿರದ ಸಮೀಪ ಪ್ರತಿಷ್ಠಾಪಿಸಿರುವ ಸಾರ್ವಜನಿಕ ದೇವಿ ಮೂರ್ತಿಯ ಎದುರು ಗುರುವಾರ ರಾತ್ರಿ ಭಕ್ತಿ, ಶ್ರದ್ಧೆಯಿಂದ ದೀಪ್ ಗರ್ಭ (ದಾಂಡಿಯಾ) ಕಾರ್ಯಕ್ರಮ ನಡೆಯಿತು

ಭಕ್ತಿ, ಶ್ರದ್ಧೆಯಿಂದ ನಡೆದ ದೀಪ್ ಗರ್ಭ ಉತ್ಸವ

ಬೀದರ್: ನವರಾತ್ರಿ ಮಹೋತ್ಸವದ ನಿಮಿತ್ತ ನಗರದ ಕೆಇಬಿ ಹನುಮಾನ ಮಂದಿರದ ಸಮೀಪ ಪ್ರತಿಷ್ಠಾಪಿಸಿರುವ ಸಾರ್ವಜನಿಕ ದೇವಿ ಮೂರ್ತಿಯ ಎದುರು ಗುರುವಾರ ರಾತ್ರಿ ಭಕ್ತಿ, ಶ್ರದ್ಧೆಯಿಂದ ದೀಪ್ ಗರ್ಭ (ದಾಂಡಿಯಾ) ಕಾರ್ಯಕ್ರಮ ನಡೆಯಿತು.

ರಾಜೇಶ್ವರಿ ಖ್ಯಾಮಾ ಅವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಭಾರತ ಮಾತೆಯ ಪೂಜೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ದಾಂಡಿಯಾ ದೇವಿಯ ಆರಾಧನೆಯ ಸಂಕೇತವಾಗಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಕೆಲವರು ಈ ಕಾರ್ಯಕ್ರಮವನ್ನು ವ್ಯಾಪಾರೀಕರಣಗೊಳಿಸುತ್ತಿರುವುದು ವಿಷಾದನೀಯ. ಇಂತಹ ಪ್ರವೃತ್ತಿಗಳಿಗೆ ಕಡಿವಾಣ ಹಾಕಬೇಕು ಎಂದು ರಾಜೇಶ್ವರಿ ಖ್ಯಾಮಾ ಒತ್ತಾಯಿಸಿದರು.

ಕೆಲವು ವಿಶಾಲ ಅಂಗಳಗಳಲ್ಲಿ ವಿಚಿತ್ರ ಹಾಗೂ ಪ್ರೇರಕ ಹಾಡುಗಳಿಗೆ ಅನುಗುಣವಾಗಿ ನಡೆಯುವ ನೃತ್ಯಗಳು ಭಾರತೀಯ ಹಾಗೂ ಹಿಂದೂ ಸಂಸ್ಕೃತಿಗೆ ವಿರುದ್ಧವಾಗಿವೆ. ಇಂತಹ ಚಟುವಟಿಕೆಗಳನ್ನು ನಿಯಂತ್ರಿಸಲು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಡಾ. ಶಕುಂತಲಾ ಬೆಲ್ದಾಳೆ, ಡಾ. ನೀತಾ ಬೆಲ್ದಾಳೆ ಹಾಗೂ ಮಯೂರಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ನಂತರ ಆಧ್ಯಾತ್ಮಿಕ ಹಾಗೂ ದೇಶಭಕ್ತಿ ಗೀತೆಗಳಿಗೆ ಮಕ್ಕಳು ಮತ್ತು ಮಹಿಳೆಯರು ದಾಂಡಿಯಾ ನೃತ್ಯ ಪ್ರದರ್ಶಿಸಿದರು. ಸುಮಾರು ಎರಡೂವರೆ ಗಂಟೆಗಳ ಕಾಲ ನಡೆದ ಕಾರ್ಯಕ್ರಮದಲ್ಲಿ ನಗರದ ವಿವಿಧ ಪ್ರದೇಶಗಳಿಂದ ಆಗಮಿಸಿದ್ದ ಮಹಿಳೆಯರು ಉತ್ಸಾಹದಿಂದ ಪಾಲ್ಗೊಂಡಿದ್ದರು.
--
📲Get App