🔥 TRENDING 44 Haryana Sewage Treatment Plants Fai... Saffron Fields in Kashmir Degraded as... Indian Army's 580 Drone Tenders Call f... रेलवे फाटक बंद रहने से घंटों जाम में फ... Amritpal Singh Appears Emotional in Ne... Haryana installs 802 pillars on Uttar...
22 Nov 2026•
ગુજરાતી मराठी ਪੰਜਾਬੀ বাংলা

ಹಿಮಾಂಶು ಕ್ಲಿನಿಕ್ ಮತ್ತು ಮೆಡಿಕಲ್ 4ನೇ ವಾರ್ಷಿಕೋತ್ಸವ: ಉಚಿತ ಆರೋಗ್ಯ ತಪಾಸಣಾ ಶಿಬಿರ

✍️ Reporter: Khaja Hussain 🗓 22 Nov 2026, 08:08 AM 👁 16
Share: 💬 WhatsApp 📘 Facebook 𝕏 Post
.

**ಜಾಲಹಳ್ಳಿ ಬ್ರೇಕಿಂಗ್ ನ್ಯೂಸ್**

# ಹಿಮಾಂಶು ಕ್ಲಿನಿಕ್ ಮತ್ತು ಮೆಡಿಕಲ್ 4ನೇ ವಾರ್ಷಿಕೋತ್ಸವ: ಉಚಿತ ಆರೋಗ್ಯ ತಪಾಸಣಾ ಶಿಬಿರ

### ನ. 23ರಂದು ವಿವಿಧ ತಜ್ಞ ವೈದ್ಯರಿಂದ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಸಲಹೆ

**ಜಾಲಹಳ್ಳಿ, ನ. 22:** ಹಿಮಾಂಶು ಕ್ಲಿನಿಕ್ ಮತ್ತು ಹಿಮಾಂಶು ಮೆಡಿಕಲ್‌ನ 4ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ನ. 23ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ.

ಜಾಲಹಳ್ಳಿಯ ಸಂತೆ ರಸ್ತೆಯ ಬಸವಲಿಂಗಪ್ಪ ಬಾವಿ ಎದುರುಗಡೆ ಇರುವ ಹಿಮಾಂಶು ಕ್ಲಿನಿಕ್‌ನಲ್ಲಿ ಬೆಳಿಗ್ಗೆ 10:30ರಿಂದ ಮಧ್ಯಾಹ್ನ 2:30ರವರೆಗೆ ಶಿಬಿರ ನಡೆಯಲಿದ್ದು, ನಂದಿ ಆಸ್ಪತ್ರೆಯ ಸಹಯೋಗದಲ್ಲಿ ವಿವಿಧ ವಿಭಾಗಗಳ ತಜ್ಞ ವೈದ್ಯರು ಭಾಗವಹಿಸಿ ಸಾರ್ವಜನಿಕರಿಗೆ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಸಲಹೆ ನೀಡಲಿದ್ದಾರೆ.

**ಶಿಬಿರದಲ್ಲಿ ಭಾಗವಹಿಸುವ ವೈದ್ಯರು ಹಾಗೂ ಚಿಕಿತ್ಸಾ ಸೇವೆಗಳು:**

**ಡಾ. ಸಾಬಣ್ಣ ನಾಯಕ ನಾಗಡದನ್ನಿ (MD ಜನರಲ್ ಮೆಡಿಸಿನ್, MMC ಮಧುರೈ)** ಅವರು ಹೃದಯ ಸಂಬಂಧಿ ಕಾಯಿಲೆ, ರಕ್ತದೊತ್ತಡ, ಮಧುಮೇಹ, ಉಸಿರಾಟದ ತೊಂದರೆ, ಟಿಬಿ, ಅಸ್ತಮಾ, ಲಿವರ್ ಹಾಗೂ ಕಿಡ್ನಿ ಸಮಸ್ಯೆಗಳಿಗೆ ತಪಾಸಣೆ ಮತ್ತು ಸಲಹೆ ನೀಡಲಿದ್ದಾರೆ.

**ಡಾ. ಮಲ್ಲಿಕಾರ್ಜುನ ಪಿ. (MBBS, RIMS ರಾಯಚೂರು), ಕುಟುಂಬ ವೈದ್ಯರು, ಜಾಲಹಳ್ಳಿ** ಅವರು ಅಲರ್ಜಿ, ಕೆಮ್ಮು, ಮಕ್ಕಳ ಅನಾರೋಗ್ಯ, ಚರ್ಮರೋಗ, ಡೆಂಗ್ಯೂ, ಟೈಫಾಯ್ಡ್, ಮಂಡಿನೋವು ಹಾಗೂ ಹೊಟ್ಟೆನೋವಿನ ಸಮಸ್ಯೆಗಳಿಗೆ ಚಿಕಿತ್ಸೆ ಮತ್ತು ಸಲಹೆ ನೀಡಲಿದ್ದಾರೆ.

**ಡಾ. ಶಶಿಕುಮಾರ ಹುದೇದ್ (BDS, NDC ರಾಯಚೂರು), ದಂತ ವೈದ್ಯರು** ಅವರು ಹಲ್ಲಿನ ಹುಳುಕು, ಸಿಮೆಂಟ್ ಫಿಲ್ಲಿಂಗ್, ಬೇರುನಾಳ ಚಿಕಿತ್ಸೆ, ಹಲ್ಲು ಸ್ವಚ್ಛಗೊಳಿಸುವಿಕೆ, ಹಲ್ಲು ಮತ್ತು ವಸಡಿನ ಶಸ್ತ್ರಚಿಕಿತ್ಸೆ, ಕೃತಕ ಹಲ್ಲು ಜೋಡಣೆ, ಹಲ್ಲು ಕೀಳುವುದು ಹಾಗೂ ವಕ್ರ ದಂತ ಚಿಕಿತ್ಸೆಗೆ ಸಂಬಂಧಿಸಿದ ಸೇವೆಗಳನ್ನು ನೀಡಲಿದ್ದಾರೆ.

**ಡಾ. ಅಕ್ಷತಾ ಸಾಬಣ್ಣ ನಾಯಕ (MD ಪೀಡಿಯಾಟ್ರಿಕ್ಸ್, MMC ಮಧುರೈ), ನವಜಾತ ಶಿಶು ಹಾಗೂ ಮಕ್ಕಳ ತಜ್ಞರು** ಅವರು ಮಕ್ಕಳ ಹೃದಯ ಸಮಸ್ಯೆ, ಬೆಳವಣಿಗೆಯ ತೊಂದರೆ, ಉಬ್ಬಸ, ಉಸಿರಾಟದ ಸಮಸ್ಯೆ, ಅಪೌಷ್ಟಿಕತೆ ಹಾಗೂ ಫಿಟ್ಸ್ ಸಮಸ್ಯೆಗಳಿಗೆ ತಪಾಸಣೆ ಮತ್ತು ವೈದ್ಯಕೀಯ ಸಲಹೆ ನೀಡಲಿದ್ದಾರೆ.

ಈ ಉಚಿತ ಆರೋಗ್ಯ ತಪಾಸಣಾ ಶಿಬಿರದ ಸದುಪಯೋಗವನ್ನು ಜಾಲಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಾರ್ವಜನಿಕರು ಪಡೆದುಕೊಳ್ಳುವಂತೆ ಕ್ಲಿನಿಕ್ ವತಿಯಿಂದ ಮನವಿ ಮಾಡಲಾಗಿದೆ.

**ಶಿಬಿರದ ಸ್ಥಳ:** ಹಿಮಾಂಶು ಕ್ಲಿನಿಕ್, ಬಸವಲಿಂಗಪ್ಪ ಬಾವಿ ಎದುರುಗಡೆ, ಸಂತೆ ರಸ್ತೆ, ಜಾಲಹಳ್ಳಿ.

**ದಿನಾಂಕ:** 23 ನವೆಂಬರ್ 2026

**ಸಮಯ:** ಬೆಳಿಗ್ಗೆ 10:30ರಿಂದ ಮಧ್ಯಾಹ್ನ 2:30ರವರೆಗೆ
ಹಿಮಾಂಶು ಕ್ಲಿನಿಕ್,ಮಾಲಕರಾದ ಅಸ್ಲಾಂ ಅವರು ಎಲ್ಲಾ ಸಾರ್ವಜನಿಕ ರು ಉಪಯೋಗ ಪಡೆದು ಕೊಳ್ಳಬೇಕೆಂದು ವಿನಂತಿಸಿರಿತ್ತಾರೆ

ವರದಿ ಖಾಜಾ ಹುಸೇನ್ ಬಾಬಾ
ಜಾಲಹಳ್ಳಿ
📲Get App