देश
ಕನೇರಿ ಸ್ವಾಮೀಜಿ ವಿರುದ್ಧ ಡಿ.3ರಂದು ಬೃಹತ್ ಪ್ರತಿಭಟನೆ
ವಚನ ಸಾಹಿತ್ಯವನ್ನು ತಿರುಚಿ ವ್ಯಾಖ್ಯಾನಿಸುವುದು, ಲಿಂಗಾಯತ ಮಠಾಧೀಶರನ್ನು ಅವಹೇಳನ ಮಾಡುವುದು ಹಾಗೂ ಸಂವಿಧಾನದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿರುವ ಕಾಡಸಿದ್ದೇಶ್ವರ ಕನೇರಿ ಸ್ವಾಮೀಜಿ ವಿರುದ್ಧ ಡಿ.3ರಂದು ಬೀದರ್ ನಗರ
ಕನೇರಿ ಸ್ವಾಮೀಜಿ ವಿರುದ್ಧ ಡಿ.3ರಂದು ಬೃಹತ್ ಪ್ರತಿಭಟನೆ
ವಚನ ಸಾಹಿತ್ಯವನ್ನು ತಿರುಚಿ ವ್ಯಾಖ್ಯಾನಿಸುವುದು, ಲಿಂಗಾಯತ ಮಠಾಧೀಶರನ್ನು ಅವಹೇಳನ ಮಾಡುವುದು ಹಾಗೂ ಸಂವಿಧಾನದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿರುವ ಕಾಡಸಿದ್ದೇಶ್ವರ ಕನೇರಿ ಸ್ವಾಮೀಜಿ ವಿರುದ್ಧ ಡಿ.3ರಂದು ಬೀದರ್ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ.
ನಗರದ ಕರ್ನಾಟಕ ಸಾಹಿತ್ಯ ಸಂಘದಲ್ಲಿ ಮಂಗಳವಾರ ಜಾತ್ಯತೀತ ನಾಗರಿಕರ ವೇದಿಕೆಯ ಸಹಯೋಗದಲ್ಲಿ ಹಿರಿಯರಾದ ವೈಜನಾಥ ಕಮಠಾಣೆ ಅವರ ಅಧ್ಯಕ್ಷತೆಯಲ್ಲಿ ನಡೆದ ಖಂಡನಾ ಸಭೆಯಲ್ಲಿ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಭಾಗವಹಿಸಿ ಈ ನಿರ್ಧಾರ ಕೈಗೊಂಡರು.
ರಾಜ್ಯದ ವಿವಿಧೆಡೆ ಕನೇರಿ ಸ್ವಾಮೀಜಿ ಆಯೋಜಿಸಿರುವ ಬಸವಾದಿ ಶರಣರ ಹಿಂದೂ ಸಮಾವೇಶಗಳಲ್ಲಿ ಬಸವಾದಿ ಶರಣರ ವಚನಗಳನ್ನು ತಿರುಚಿ ವ್ಯಾಖ್ಯಾನಿಸುವ ಮೂಲಕ ಶರಣರ ಆಶಯಗಳಿಗೆ ಧಕ್ಕೆ ಉಂಟುಮಾಡಲಾಗುತ್ತಿದೆ. ಅಲ್ಲದೆ, ಲಿಂಗಾಯತ ಮಠಾಧೀಶರನ್ನು ಟೀಕಿಸಿ, ಹೀಯಾಳಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಲಾಯಿತು.
ಇತ್ತೀಚೆಗೆ ನಡೆದ ಸಮಾವೇಶವೊಂದರಲ್ಲಿ ಮಾತನಾಡಿದ ಕನೇರಿ ಸ್ವಾಮೀಜಿ, 'ಸಂವಿಧಾನದಲ್ಲಿ ಮನುಸ್ಮೃತಿಯ ಅಂಶಗಳು ಅಡಕವಾಗಿವೆ' ಎಂದು ಹೇಳಿಕೆ ನೀಡಿರುವುದನ್ನು ಸಭೆ ತೀವ್ರವಾಗಿ ಖಂಡಿಸಿತು. ಈ ಹೇಳಿಕೆ ದೇಶದ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದ್ದು, ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ವಿಚಾರಧಾರೆಗಳಿಗೆ ಅಪಮಾನ ಮಾಡಿದಂತಾಗಿದೆ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.
ವಚನ ಸಾಹಿತ್ಯ, ಲಿಂಗಾಯತ ಮಠಾಧೀಶರು ಹಾಗೂ ಭಾರತದ ಸಂವಿಧಾನದ ಕುರಿತು ನೀಡಿರುವ ಹೇಳಿಕೆಗಳನ್ನು ಖಂಡಿಸಿ ಡಿ.3ರಂದು ಬೀದರ್ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲು ಸಭೆ ನಿರ್ಣಯಿಸಿತು.
ಪ್ರತಿಭಟನೆಯಲ್ಲಿ ಎಲ್ಲ ಜಾತ್ಯತೀತ ರಾಜಕೀಯ ಪಕ್ಷಗಳು, ಪ್ರಗತಿಪರ ಸಂಘಟನೆಗಳ ಮುಖಂಡರು, ಬಸವಾದಿ ಶರಣರ ಅನುಯಾಯಿಗಳು ಹಾಗೂ ಸಂವಿಧಾನ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹೋರಾಟಕ್ಕೆ ಬೆಂಬಲ ನೀಡಬೇಕು ಎಂದು ಸಭೆ ಕರೆ ನೀಡಿತು.
ಸಭೆಯಲ್ಲಿ ಜಾತ್ಯತೀತ ನಾಗರಿಕರ ವೇದಿಕೆ ಅಧ್ಯಕ್ಷ ಶ್ರೀಕಾಂತ್ ಸ್ವಾಮಿ, ಅಮೃತರಾವ್ ಚಿಮಕೋಡೆ, ಬಸವಕುಮಾರ ಪಾಟೀಲ್, ಶಿವಶರಣಪ್ಪ ಹುಗ್ಗೆ ಪಾಟೀಲ, ಪಂಡಿತರಾವ್ ಚಿದ್ರಿ, ಅನೀಲಕುಮಾರ್ ಬೆಲ್ದಾರ್, ಬಸವರಾಜ ಮಾಳಗೆ, ಬಾಬು ಪಾಸ್ವಾನ್, ಸುರೇಶ್ ಸ್ವಾಮಿ, ಶಂಕರರಾವ್ ದೊಡ್ಡಿ, ಜಗದೀಶ್ವರ ಬಿರಾದಾರ, ವಿನಯಕುಮಾರ್ ಮಾಳಗೆ, ಮಹೇಶ್ ಗೋರನಾಳಕರ್, ಸುಧಾಮಣಿ, ಅರ್ಚನಾ, ಪ್ರಕಾಶ ರಾವಣ, ಸಂತೋಷ ಜೋಳದಾಬಕೆ, ಶ್ರೀನಿವಾಸ ತೇಕಮಾಳ, ರಮೇಶ್ ಕಟ್ಟಿತುಗಾಂವ್, ಶಾಮಣ್ಣಾ ಬಾವಗೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.