🔥 TRENDING _कांग्रेस के यशवीर सूरा जयपुर जिला परि... Akash Chopra predicts Vaibhav could fe... BJP clinches Udaipur district council... बुंडू अनुमंडलीय अस्पताल में नए उपाधीक्... आखिर क्यों सम्राट चौधरी के सरकार से न... गुना में नगरपालिका कार्यकर्ता पर मौन ह...
25 Nov 2026•
ગુજરાતી मराठी ਪੰਜਾਬੀ বাংলা
Sports

3*”ಬೀದರ ಜಿಲ್ಲಾ ಪೊಲೀಸ್, ಪೊಲೀಸ್ ವಾರ್ಷಿಕ ಕ್ರೀಡಾಕೂಟ-2026ರ ಉದ್ಘಾಟನಾ ಸಮಾರಂಭ”*

✍️ Reporter: Basavaraj pujari 🗓 25 Nov 2026, 06:22 PM 👁 14
Share: 💬 WhatsApp 📘 Facebook 𝕏 Post

ಬೀದರ ಜಿಲ್ಲಾ ಪೊಲೀಸ್ ವತಿಯಿಂದ ದಿನಾಂಕ: 25/11/2026 ರಿಂದ 27/11/2026 ರವರೆಗೆ ಮೂರು ದಿನಗಳ ಕಾಲ ಬೀದರ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಪೊಲೀಸ್ ವಾರ್ಷಿಕ ಕ್ರೀಡಾಕೂಟ-2026 ಅನ್ನು ಆಯೋಜಿಸಲಾಗಿದ್ದು, ಕ್ರೀಡಾಕ

3*”ಬೀದರ ಜಿಲ್ಲಾ ಪೊಲೀಸ್, ಪೊಲೀಸ್ ವಾರ್ಷಿಕ ಕ್ರೀಡಾಕೂಟ-2026ರ ಉದ್ಘಾಟನಾ ಸಮಾರಂಭ”*

ಬೀದರ ಜಿಲ್ಲಾ ಪೊಲೀಸ್ ವತಿಯಿಂದ ದಿನಾಂಕ: 25/11/2026 ರಿಂದ 27/11/2026 ರವರೆಗೆ ಮೂರು ದಿನಗಳ ಕಾಲ ಬೀದರ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಪೊಲೀಸ್ ವಾರ್ಷಿಕ ಕ್ರೀಡಾಕೂಟ-2026 ಅನ್ನು ಆಯೋಜಿಸಲಾಗಿದ್ದು, ಕ್ರೀಡಾಕೂಟದ ಉದ್ಘಾಟನಾ ಸಮಾರಂಭವನ್ನು ಅದ್ಧೂರಿಯಾಗಿ ನೆರವೇರಿಸಲಾಯಿತು. ಕ್ರೀಡಾಕೂಟದಲ್ಲಿ ಒಟ್ಟು ಐದು ತಂಡಗಳು ಭಾಗವಹಿಸುತ್ತಿದ್ದು, ಅವುಗಳ ನೇತೃತ್ವವನ್ನು *ಡಿಎಆರ್ ತಂಡ: ಶ್ರೀ ದೇವೇಗೌಡ, ಆರ್‌ಎಸ್‌ಐ, ಬೀದರ. ಬೀದರ ಉಪವಿಭಾಗದ ತಂಡ: ಶ್ರೀ ಮಹೇಂದ್ರಕುಮಾರ, ಪಿಎಸ್‌ಐ, ಮನ್ನಳ್ಳಿ ಪೊಲೀಸ್ ಠಾಣೆ. ಮಹಿಳಾ ತಂಡ: ಶ್ರೀಮತಿ ನಂದಿನಿ, ಪಿಎಸ್‌ಐ, ಬಗದಲ್ ಪೊಲೀಸ್ ಠಾಣೆ. ಹುಮನಾಬಾದ್ ಉಪವಿಭಾಗದ ತಂಡ: ಶ್ರೀ ಪ್ರಮೋದಕುಮಾರ, ಪ್ರೊ. ಪಿಎಸ್‌ಐ. ಭಾಲ್ಕಿ ಉಪವಿಭಾಗದ ತಂಡ: ಶ್ರೀ ವಿರೂಪಾಕ್ಷ, ಪ್ರೊ. ಪಿಎಸ್‌ಐ. ಕ್ರೀಡಾಕೂಟದ ಕವಾಯತಿನ ನೇತೃತ್ವವನ್ನು ಶ್ರೀ ಲಚ್ಚಪ್ಪ, ಆರ್‌ಪಿಐ, ಡಿಎಆರ್ ಅವರು ವಹಿಸಿಕೊಂಡಿದ್ದು, ಶ್ರೀ ಶರಣಪ್ಪ, ಡಿಎಸ್‌ಪಿ, ಡಿಎಆರ್* ಅವರು ಕವಾಯತಿನ ಮೇಲ್ವಿಚಾರಣೆ ವಹಿಸಿಕೊಂಡಿರುತ್ತಾರೆ.

*ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಅಂತರರಾಷ್ಟ್ರೀಯ ಖ್ಯಾತಿಯ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟ್ ಆಟಗಾರರಾದ ಸನ್ಮಾನ್ಯ ಶ್ರೀ ಜಾಂಟಿ ರೋಡ್ಸ್ (Jonty Rhodes) ಅವರು ಆಗಮಿಸಿದ್ದರು. ಸನ್ಮಾನ್ಯ ಶ್ರೀ ಈಶ್ವರ ಬಿ. ಖಂಡ್ರೆ, ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರು, ಕರ್ನಾಟಕ ಸರ್ಕಾರ ಮತ್ತು ಶ್ರೀ ರಹೀಂ ಖಾನ್, ಮಾಜಿ ಸಚಿವರು ಹಾಗೂ ಮಾನ್ಯ ಶಾಸಕರು, ಬೀದರ ವಿಧಾನಸಭಾ ಕ್ಷೇತ್ರ ಇವರು ಉಪಸ್ಥಿತರಿದ್ದು, ಮುಖ್ಯ ಅತಿಥಿಗಳಾಗಿ ಅಂತರರಾಷ್ಟ್ರೀಯ ಖ್ಯಾತಿಯ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟ್ ಆಟಗಾರ, ಮಾನ್ಯ ಸಚಿವರು ಹಾಗೂ ಗಣ್ಯರು ಕ್ರೀಡಾಕೂಟವನ್ನು ಉದ್ಘಾಟಿಸಿ, ಕ್ರೀಡಾಕೂಟದಲ್ಲಿ ಭಾಗವಹಿಸಿದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯವರ ವಿವಿಧ ತಂಡಗಳಿಂದ ಗೌರವ ವಂದನೆ ಸ್ವೀಕರಿಸಿ, ಕ್ರೀಡಾಕೂಟಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು*.

ಶ್ರೀ ಪ್ರದೀಪ್ ಗುಂಟಿ, ಐ.ಪಿ.ಎಸ್., ಪೊಲೀಸ್ ವರಿಷ್ಠಾಧಿಕಾರಿಗಳು, ಬೀದರ ಜಿಲ್ಲೆ ಹಾಗೂ ಶ್ರೀ ಚಂದ್ರಕಾಂತ ಪೂಜಾರಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಬೀದರ ಇವರು ಮುಖ್ಯ ಅತಿಥಿಗಳು ಹಾಗೂ ಗಣ್ಯರನ್ನು ಆತ್ಮೀಯವಾಗಿ ಸ್ವಾಗತಿಸಿದರು.

ಉದ್ಘಾಟನಾ ಸಮಾರಂಭದಲ್ಲಿ ಪೊಲೀಸ್ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ವರ್ಗದವರು, ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮದ ಪ್ರತಿನಿಧಿಗಳು ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು.
📲Get App