🔥 TRENDING ಪೂಜ್ಯರ 79ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ತು... નર્મદા કલેક્ટર કચેરી ખાતે જિલ્લા કક્ષા... ધાંગધ્રા નરશીપરા વિસ્તારમાં કૂવામાં પડ... सवाई माधोपुर मे ं सबस े ज्यादा 9 उच्च... Bhopal Police Arrest Ramanuj Gurjar fo... કડી તાલુકા બાવલુમાં કેબલ ચોર ગેંગ પકડવ...
25 Nov 2026•
ગુજરાતી मराठी ਪੰਜਾਬੀ বাংলা

ನ.28ರಂದು ಬಂಡೋಳಿಯಲ್ಲಿ ವಾಲ್ಮೀಕಿ ಗುರುಪೀಠದ ಶಾಖಾ ಮಠಕ್ಕೆ ಭೂಮಿಪೂಜೆ: ರಂಗಪ್ಪ ಗೋಸಲ್

✍️ Reporter: Khaja Hussain 🗓 25 Nov 2026, 07:16 PM 👁 23
Share: 💬 WhatsApp 📘 Facebook 𝕏 Post
**ದೇವದುರ್ಗ ಬ್ರೇಕಿಂಗ್ ನ್ಯೂಸ್**

# ನ.28ರಂದು ಬಂಡೋಳಿಯಲ್ಲಿ ವಾಲ್ಮೀಕಿ ಗುರುಪೀಠದ ಶಾಖಾ ಮಠಕ್ಕೆ ಭೂಮಿಪೂಜೆ: ರಂಗಪ್ಪ ಗೋಸಲ್

### ಕಲ್ಯಾಣ ಕರ್ನಾಟಕ ಭಾಗದ ವಾಲ್ಮೀಕಿ ಸಮಾಜದ ಬಹುದಿನಗಳ ಕನಸು ನನಸಾಗುವ ಕಾಲ ಸನ್ನಿಹಿತ

**ದೇವದುರ್ಗ, ನ.25:** ಕಲ್ಯಾಣ ಕರ್ನಾಟಕ ಭಾಗದ ವಾಲ್ಮೀಕಿ ಸಮಾಜದ ಬಹುದಿನಗಳ ಕನಸು ನನಸಾಗುವ ಕಾಲ ಸನ್ನಿಹಿತವಾಗಿದ್ದು, ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಬಂಡೋಳಿ ಗ್ರಾಮದಲ್ಲಿ ನ.28ರ ಶನಿವಾರ ಬೆಳಿಗ್ಗೆ 11 ಗಂಟೆಗೆ ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠದ ಶಾಖಾ ಮಠದ ಭೂಮಿಪೂಜೆ ಸಮಾರಂಭ ನಡೆಯಲಿದೆ ಎಂದು ದೇವದುರ್ಗ ಪುರಸಭೆಯ ಮಾಜಿ ಅಧ್ಯಕ್ಷ ರಂಗಪ್ಪ ಗೋಸಲ್ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ದಾವಣಗೆರೆ ಜಿಲ್ಲೆಯ ರಾಜನಹಳ್ಳಿಯ ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠ ಟ್ರಸ್ಟ್ (ರಿ.) ವತಿಯಿಂದ ಬಂಡೋಳಿ ಗ್ರಾಮದಲ್ಲಿ ನೂತನವಾಗಿ ಖರೀದಿಸಿರುವ ಜಮೀನಿನಲ್ಲಿ ಈ ಐತಿಹಾಸಿಕ ಭೂಮಿಪೂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪೀಠಾಧಿಪತಿ ಜಗದ್ಗುರು ಶ್ರೀ ಡಾ. ವಾಲ್ಮೀಕಿ ಪ್ರಸನ್ನಾನಂದ ಪುರಿ ಮಹಾಸ್ವಾಮೀಜಿಯವರ ದಿವ್ಯ ಸಾನ್ನಿಧ್ಯದಲ್ಲಿ ಸಮಾರಂಭ ನೆರವೇರಲಿದೆ. ರಾಜ್ಯ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಸಮುದಾಯದ ಹಾಲಿ ಹಾಗೂ ಮಾಜಿ ಸಚಿವರು, ಸಂಸದರು, ಶಾಸಕರು, ನಿಗಮ–ಮಂಡಳಿಗಳ ಅಧ್ಯಕ್ಷರು, ಸಾಹಿತಿಗಳು ಹಾಗೂ ನಾಡಿನ ಪ್ರಮುಖ ಮುಖಂಡರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ವಿವರಿಸಿದರು.

ಬಂಡೋಳಿಯಲ್ಲಿ ನಿರ್ಮಾಣವಾಗಲಿರುವ ಶಾಖಾ ಮಠವು ಮುಂದಿನ ದಿನಗಳಲ್ಲಿ ಸಮುದಾಯದ ಬಡ ಮಕ್ಕಳ ಶಿಕ್ಷಣ, ಯುವಜನರ ಸಂಘಟನೆ ಹಾಗೂ ಸಮಾಜದ ಐಕ್ಯತೆಗೆ ಹೊಸ ದಿಕ್ಕು ನೀಡಲಿದೆ. ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ಅಭಿವೃದ್ಧಿಗೆ ಈ ಮಠ ಭದ್ರ ಬುನಾದಿಯಾಗಲಿದೆ ಎಂದು ಹೇಳಿದರು.

ದೇವದುರ್ಗ ತಾಲ್ಲೂಕು ಸೇರಿದಂತೆ ರಾಯಚೂರು, ಯಾದಗಿರಿ ಜಿಲ್ಲೆಗಳ ಹಾಗೂ ರಾಜ್ಯದ ವಿವಿಧ ಭಾಗಗಳ ಸಮಾಜ ಬಾಂಧವರು, ಯುವಕರು, ಮಹಿಳೆಯರು ಮತ್ತು ಸಂಘ–ಸಂಸ್ಥೆಗಳ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಭೂಮಿಪೂಜೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ರಂಗಪ್ಪ ಗೋಸಲ್ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮುಖಂಡರಾದ ಮಾನಿಶಯ್ಯ ನಾಯಕ, ಸಿದ್ದನಗೌಡ ಚಿಂತಲಕುಂಟ, ರಾಚಣ್ಣ ನಾಯಕ, ಬುದ್ದಯ್ಯ ನಾಯಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.

**ವರದಿ: ಖಾಜಾ ಹುಸೇನ್ ಬಾಬಾ, ಜಾಲಹಳ್ಳಿ**
📲Get App