🔥 ट्रेंडिंग जालौर में दीपावली के अवसर पर जिला प्रश... मौला नगर में जुआ विरोध पर लाठी-डंडे से... ভোলা দাসের বাড়িতে লক্ষ্মী পূজা: পরিবা... मध्य प्रदेश में भैंस चोरी का एक दिलचस्... ਪਰਾਲੀ ਨੂੰ ਅੱਗ ਨਾ ਲਗਾਓ, ਇਸ ਦੀ ਸੁਚੱਜੀ ਸਾ... ഡിസിപ്ലിൻ vs മോട്ടിവേഷൻ’ പുസ്തകം പ്രകാ...
08 नव. 2026•
ગુજરાતી मराठी ਪੰਜਾਬੀ বাংলা

Video: ದೇವದುರ್ಗದಲ್ಲಿ ತೂಕದಲ್ಲಿ ಮೋಸ ಮಾಡುತ್ತಿದ್ದ ವೇ ಬ್ರಿಜ್ ಅಕ್ರಮ ಬಯಲು - ರೈತ ಸಂಘದ ದೂರಿನ ಮೇರೆಗೆ ದಾಳಿ, ಮೈಲಾರಲಿಂಗೇಶ್ವರ ವೇ ಬ್ರಿಜ್‌ಗೆ ದಂಡ, ಪರವಾನಗಿ ರದ್ದು

✍️ रिपोर्टर: Ningappa 🗓 08 नव. 2026, 11:49 AM 👁 14
शेयर करें: 💬 WhatsApp 📘 Facebook 𝕏 Post

ದೇವದುರ್ಗ ತಾಲೂಕಿನ ಕಾಟನ್ ಜಿನ್‌ಗಳಲ್ಲಿ ತೂಕದಲ್ಲಿ ಮೋಸದ ಕುರಿತು ರೈತ ಸಂಘದ ದೂರು - ಎಪಿಎಂಸಿ, ತೂಕ ಮತ್ತು ಅಳತೆ ಇಲಾಖೆ ಅಧಿಕಾರಿಗಳಿಂದ ಪರಿಶೀಲನೆ - ಶಂಸುದ್ದೀನ್ ಮತ್ತು ಹಮೀದುದ್ದೀನ್ ಫ್ಯಾಕ್ಟರಿಯಲ್ಲಿ ತೂಕ ಸರಿ - ಮೈಲಾರಲಿಂಗೇಶ್ವರ ವೇ ಬ್ರಿಜ್‌ನಲ್ಲಿ ಮೋಸ ಪತ್ತೆ - ದಂಡ ವಿಧಿಸಿ ಪರವಾನಗಿ ರದ್ದು

ದೇವದುರ್ಗದಲ್ಲಿ ತೂಕದಲ್ಲಿ ಮೋಸ ಮಾಡುತ್ತಿದ್ದ ವೇ ಬ್ರಿಜ್ ಅಕ್ರಮ ಬಯಲು

ದೇವದುರ್ಗ: ದೇವದುರ್ಗ ತಾಲೂಕಿನಲ್ಲಿ ರೈತರ ಕಣ್ಣಿಗೆ ಮಣ್ಣು ಎರಚುತ್ತಿದ್ದ ಮೈಲಾರಲಿಂಗೇಶ್ವರ ತೂಕದ ವೇ ಬ್ರಿಜ್ ಮಾಲೀಕರ ಅಕ್ರಮವನ್ನು ರೈತ ಸಂಘ ದೇವದುರ್ಗ ಹಾಗೂ ತೂಕದಲ್ಲಿ ಮೋಸ ಹೋದ ರೈತ ಮುಖಂಡರು ಬಯಲು ಮಾಡಿದ್ದಾರೆ.

ಕಳೆದ ವಾರ ದೇವದುರ್ಗ ತಾಲೂಕಿನ ಕಾಟನ್ ಜಿನ್‌ಗಳಲ್ಲಿ ತೂಕದಲ್ಲಿ ಭಾರೀ ವ್ಯತ್ಯಾಸ ಆಗುತ್ತಿರುವ ಕುರಿತು ಎಪಿಎಂಸಿ ಹಾಗೂ ತೂಕ ಮತ್ತು ಅಳತೆ ಇಲಾಖೆಗೆ ಅಧಿಕೃತವಾಗಿ ದೂರು ನೀಡಲಾಗಿತ್ತು.

ಇಂದು ಎಪಿಎಂಸಿ ಅಧಿಕಾರಿಗಳು ಮತ್ತು ತೂಕ ಹಾಗೂ ಅಳತೆ ಇಲಾಖೆಯ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು. ಈ ವೇಳೆ ಎರಡು ಪ್ರಮುಖ ಫ್ಯಾಕ್ಟರಿಗಳನ್ನು ತೀವ್ರವಾಗಿ ಪರಿಶೀಲಿಸಿದಾಗ ಸತ್ಯ ಹೊರಬಂದಿದೆ.

ಶಂಸುದ್ದೀನ್ ಮತ್ತು ಹಮೀದುದ್ದೀನ್ ಕಾಟನ್ ಫ್ಯಾಕ್ಟರಿಯಲ್ಲಿ ತೂಕ ಸರಿಯಿರುವುದು ಕಂಡುಬಂದಿದೆ. ಶ್ರೀ ಮೈಲಾರಲಿಂಗೇಶ್ವರ ತೂಕ ಮಾಪನ ವೇಬ್ರಿಜ್‌ನಲ್ಲಿ ರೈತರ ತೂಕದಲ್ಲಿ ಸ್ಪಷ್ಟ ವ್ಯತ್ಯಾಸ ಕಂಡುಬಂದಿದೆ.

ಕೂಡಲೇ ಎಚ್ಚೆತ್ತ ಅಧಿಕಾರಿಗಳು ನಿಯಮ ಉಲ್ಲಂಘಿಸಿದ ಶ್ರೀ ಮೈಲಾರಲಿಂಗೇಶ್ವರ ಕಾಟನ್ ಜಿನ್ ಮಾಲೀಕರಿಗೆ ಕಾನೂನಿನ ಅರಿವು ಮೂಡಿಸಿ, ತಕ್ಕ ದಂಡ ವಿಧಿಸಿ, ಪರವಾನಗಿ ರದ್ದುಪಡಿಸಿ ಶಿಕ್ಷೆಗೊಳಪಡಿಸಿದ್ದಾರೆ.

ರೈತರ ಶ್ರಮವನ್ನು ಲೂಟಿ ಮಾಡಲು ನೋಡುವ ಇಂತಹ ಅಕ್ರಮಗಳ ವಿರುದ್ಧದ ಹೋರಾಟದಲ್ಲಿ ಇಂದು ಯಶಸ್ಸು ಸಿಕ್ಕಿದೆ ಎಂದು ರೈತ ಸಂಘ ತಿಳಿಸಿದೆ. ರೈತ ಬಂಧುಗಳೇ, ಯಾವುದೇ ಜಿನ್‌ಗಳಲ್ಲಿ ಅಥವಾ ಮಾರುಕಟ್ಟೆಯಲ್ಲಿ ತೂಕದ ಮೋಸ ಕಂಡುಬಂದರೆ ನಿರ್ಭಯವಾಗಿ ರೈತ ಸಂಘ ದೇವದುರ್ಗಕ್ಕೆ ದೂರು ನೀಡಿ. ಜಿಲ್ಲಾ ಅಧ್ಯಕ್ಷರ ಒಪ್ಪಿಗೆಯಿಂದ ಹೋರಾಟ ರೈತರ ಪರವಾಗಿ ನಿರಂತರ ಇರುತ್ತದೆ ಎಂದು ತಿಳಿಸಿದ್ದಾರೆ.
📲Get App