🔥 TRENDING कोटा मंडल ने मेल/एक्सप्रेस ट्रेनों में... ਰਾਊਂਡਗਲਾਸ ਫਾਊਂਡੇਸਨ ਵੱਲੋ ਕਰਵਾਇਆ ਗਿਆ ਫੁਟ... दीपावली पर खाटू श्याम मंदिर में श्रद्ध... बहराइच में जनगणना‑2027 की तैयारी तेज,... जयपुर एयरपोर्ट पर ₹55 करोड़ के स्टेट ट... સાબરકાંઠા, ઇડર: કડિયાદરા ગામમાં ગટરલાઇ...
12 Nov 2026•
ગુજરાતી मराठी ਪੰਜਾਬੀ বাংলা

"ವಲಸೆ ಯಾಕೇ ! ನಿಮ್ಮೂರಲ್ಲಿಯೇ ಕೂಲಿ ಕೆಲಸ" - ಯಾದಗಿರಿ ರೈಲ್ವೆ ನಿಲ್ದಾಣದಲ್ಲಿ ವಲಸೆ ತಡೆ ವಿಶೇಷ ಜಾಗೃತಿ ಅಭಿಯಾನಕ್ಕೆ ಚಾಲನೆ - VB-G RAM-G ಯೋಜನೆಯಲ್ಲಿ 125 ದಿನ ಕೆಲಸ, ದಿನಕ್ಕೆ 382 ರೂ ಕೂಲಿ

✍️ Reporter: Ningappa 🗓 12 Nov 2026, 09:14 PM 👁 4
Share: 💬 WhatsApp 📘 Facebook 𝕏 Post

ಯಾದಗಿರಿ ರೈಲ್ವೆ ನಿಲ್ದಾಣದಲ್ಲಿ ವಲಸೆ ತಡೆ ಜಾಗೃತಿ ಅಭಿಯಾನ - "ವಲಸೆ ಯಾಕೇ ! ನಿಮ್ಮೂರಲ್ಲಿಯೇ ಕೂಲಿ ಕೆಲಸ" - ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಸಂಯುಕ್ತಾಶ್ರಯ - ಯೋಜನಾ ನಿರ್ದೇಶಕ ಬಸವರಾಜ ಶರಭೈ ಅವರಿಂದ ಚಾಲನೆ - VB-G RAM-G ಯೋಜನೆಯಲ್ಲಿ ಕುಟುಂಬಕ್ಕೆ 125 ದಿನ ಕೆಲಸ, ದಿನಕ್ಕೆ 382 ರೂ ಕೂಲಿ

"ವಲಸೆ ಯಾಕೇ ! ನಿಮ್ಮೂರಲ್ಲಿಯೇ ಕೂಲಿ ಕೆಲಸ" - ಯಾದಗಿರಿಯಲ್ಲಿ ವಲಸೆ ತಡೆ ಜಾಗೃತಿ ಅಭಿಯಾನಕ್ಕೆ ಚಾಲನೆ

ಯಾದಗಿರಿ: ರೈಲ್ವೆ ನಿಲ್ದಾಣದಲ್ಲಿ ಇಂದು ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಸಂಯುಕ್ತಾಶ್ರಯದಿಂದ ಜಿಲ್ಲೆಯ ಗ್ರಾಮೀಣ ಪ್ರದೇಶದ ಕಾರ್ಮಿಕರು ವಲಸೆ ಹೋಗದಂತೆ ತಡೆಯಲು "ವಲಸೆ ಯಾಕೇ ! ನಿಮ್ಮೂರಲ್ಲಿಯೇ ಕೂಲಿ ಕೆಲಸ" ದ ಕುರಿತು ವಿಶೇಷ ಜಾಗೃತಿ ಅಭಿಯಾನವನ್ನು ಶ್ರೀ ಬಸವರಾಜ ಶರಭೈ ಮಾನ್ಯ ಯೋಜನಾ ನಿರ್ದೇಶಕರು (ಪ್ರ) ಜಿಲ್ಲಾ ಪಂಚಾಯತ್ ಯಾದಗಿರಿ ರವರು ಚಾಲನೆ ನೀಡಿದರು.

ಕೂಲಿ ಕಾರ್ಮಿಕರಿಗೆ VB-G RAM-G ಯೋಜನೆಯಡಿ ವರ್ಷದಲ್ಲಿ ಕುಟುಂಬ ಒಂದಕ್ಕೆ 125 ದಿನದ ಕೆಲಸ ಹಾಗೂ ಒಂದು ದಿನಕ್ಕೆ 382 ರೂ ಕೂಲಿ ನೀಡುವ ಕುರಿತು ಮಾಹಿತಿ ನೀಡಿ ಕೂಲಿಗಾಗಿ ವಲಸೆ ಹೋಗದಂತೆ ಜನರಿಗೆ ಮನವೊಲಿಸಿದರು.

ಈ ವೇಳೆ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಬಸವರಾಜ ಸಜ್ಜನ್, ಶ್ರೀ ಶಶಿಧರ ಹಿರೇಮಠ, ಶ್ರೀ ಅಮರೇಶ ಪಾಟೀಲ್ ಉಪಸ್ಥಿತರಿದ್ದರು.

ಯಾದಗಿರಿ ತಾಪಂ ವ್ಯವಸ್ಥಾಪಕರು, VB-G RAM-G, NRLM ಯೋಜನೆಯ ಮತ್ತು ಕಚೇರಿ ಸಿಬ್ಬಂದಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಜಾಗೃತಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
📲Get App