🔥 TRENDING Gujarat Installs 95 MW Solar on Govt B... Supreme Court Stays Coercive Action Ag... Ex-CM Bommai Accuses DK Shivakumar of... Karnataka Requests ₹7,500 Crore Drough... Karnataka to Launch AI Training in Gov... Gujarat Courts Halt as Lawyers Protest...
06 Oct 2026•
ગુજરાતી मराठी ਪੰਜਾਬੀ বাংলা
ಅಥಣಿ ಕ್ಷೇತ್ರದಲ್ಲಿ ಅಭಿವೃದ್ಧಿಗೆ ವೇಗ: ಮೂರು ದೇವಸ್ಥಾನಗಳಿಗೆ ₹45 ಲಕ್ಷ ಅನುದಾನ
Local

ಅಥಣಿ ಕ್ಷೇತ್ರದಲ್ಲಿ ಅಭಿವೃದ್ಧಿಗೆ ವೇಗ: ಮೂರು ದೇವಸ್ಥಾನಗಳಿಗೆ ₹45 ಲಕ್ಷ ಅನುದಾನ

✍️ Reporter: Manojkumar M Patole 🗓 05 Oct 2026, 11:30 PM 👁 13
Share: 💬 WhatsApp 📘 Facebook 𝕏 Post

ಜನವಾಡ, ಸಂಕೋನಟ್ಟಿ, ಕೊಟ್ಟಲಗಿಯಲ್ಲಿ ಮೂಲಸೌಕರ್ಯ ಹಾಗೂ ಸಮುದಾಯ ಭವನ ಕಾಮಗಾರಿಗಳಿಗೆ ₹45 ಲಕ್ಷ ಅನುದಾನ ನೀಡಲಾಗಿದೆ.

ಅಥಣಿ ಕ್ಷೇತ್ರದಲ್ಲಿ ಅಭಿವೃದ್ಧಿಗೆ ವೇಗ: ಮೂರು ದೇವಸ್ಥಾನಗಳಿಗೆ ₹45 ಲಕ್ಷ ಅನುದಾನ!

ಜನವಾಡ, ಸಂಕೋನಟ್ಟಿ, ಕೊಟ್ಟಲಗಿಯಲ್ಲಿ ಮೂಲಸೌಕರ್ಯ ಹಾಗೂ ಸಮುದಾಯ ಭವನ ಕಾಮಗಾರಿಗಳಿಗೆ ಚಾಲನೆ

ಬೆಳಗಾವಿ/ಅಥಣಿ: ಅಥಣಿ ತಾಲೂಕಿನ ಗ್ರಾಮೀಣ ಭಾಗದ ಮೂಲಸೌಕರ್ಯ ಅಭಿವೃದ್ಧಿಗೆ ಮತ್ತಷ್ಟು ವೇಗ ದೊರೆತಿದ್ದು, ಮುಖ್ಯಮಂತ್ರಿ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ಮೂರು ಗ್ರಾಮಗಳ ಪ್ರಮುಖ ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಗೆ ಒಟ್ಟು ₹45 ಲಕ್ಷ ಅನುದಾನ ಮಂಜೂರಾಗಿದೆ. ಜನವಾಡ, ಸಂಕೋನಟ್ಟಿ ಹಾಗೂ ಕೊಟ್ಟಲಗಿ ಗ್ರಾಮಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಚಾಲನೆ ನೀಡಲಾಯಿತು.

ಜನವಾಡದಲ್ಲಿ ₹20 ಲಕ್ಷ ಕಾಮಗಾರಿಗೆ ಚಾಲನೆ?: ಸನ್‌ 2025-26ನೇ ಸಾಲಿನ ಮಾನ್ಯ ಮುಖ್ಯಮಂತ್ರಿಯವರ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯ ಅನುದಾನದಡಿ ₹20 ಲಕ್ಷ ವೆಚ್ಚದಲ್ಲಿ ಅಥಣಿ ಮತಕ್ಷೇತ್ರದ ಜನವಾಡ ಗ್ರಾಮದ ಶ್ರೀ ಸಿದ್ಧಾರೂಢ ದೇವಸ್ಥಾನದಲ್ಲಿ ಮೂಲಭೂತ ಸೌಕರ್ಯ ಕಲ್ಪಿಸುವ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಯಿತು. ಕಾಂಗ್ರೆಸ್ ಪಕ್ಷದ ಯುವ ಧುರೀಣ ಹಾಗೂ ಸಮಾಜ ಸೇವಕರಾದ ಚಿದಾನಂದ ಲ. ಸವದಿ ಅವರ ನೇತೃತ್ವದಲ್ಲಿ ಗ್ರಾಮದ ಹಿರಿಯ ಮುಖಂಡರು ಭೂಮಿಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದರು.

ಸಂಕೋನಟ್ಟಿಯಲ್ಲಿ ₹15 ಲಕ್ಷ ಅಭಿವೃದ್ಧಿ*: ಅದೇ ಯೋಜನೆಯಡಿ ₹15 ಲಕ್ಷ ಅನುದಾನದಲ್ಲಿ ಸಂಕೋನಟ್ಟಿ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಮೂಲಭೂತ ಸೌಕರ್ಯ ಕಲ್ಪಿಸುವ ಕಾಮಗಾರಿಗೆ ಚಾಲನೆ ನೀಡಲಾಯಿತು. ಗ್ರಾಮದ ಧಾರ್ಮಿಕ ಹಾಗೂ ಸಾರ್ವಜನಿಕ ಬಳಕೆಯ ಸ್ಥಳಗಳಲ್ಲಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವ ಉದ್ದೇಶದಿಂದ ಕೈಗೆತ್ತಿಕೊಳ್ಳಲಾಗಿರುವ ಈ ಕಾಮಗಾರಿಯಿಂದ ಭಕ್ತರು ಹಾಗೂ ಗ್ರಾಮಸ್ಥರಿಗೆ ಅನುಕೂಲವಾಗಲಿದೆ ಎಂದು ತಿಳಿಸಲಾಯಿತು.

ಕೊಟ್ಟಲಗಿಯಲ್ಲಿ ₹10 ಲಕ್ಷದ ಸಮುದಾಯ ಭವನ! :ಕೊಟ್ಟಲಗಿ ಗ್ರಾಮದಲ್ಲಿಯೂ ಅಭಿವೃದ್ಧಿಯ ಹೆಜ್ಜೆ ಮುಂದುವರಿದಿದ್ದು, ₹10 ಲಕ್ಷ ವೆಚ್ಚದಲ್ಲಿ ಶ್ರೀ ಕೋರೆವ್ವ ತಾಯಿ ದೇವಸ್ಥಾನಕ್ಕೆ ನೂತನ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಯಿತು. ಕಾಂಗ್ರೆಸ್ ಪಕ್ಷದ ಯುವ ಧುರೀಣ ಹಾಗೂ ಸಮಾಜ ಸೇವಕರಾದ ಚಿದಾನಂದ ಲ. ಸವದಿ ಅವರ ನೇತೃತ್ವದಲ್ಲಿ ಗ್ರಾಮದ ಹಿರಿಯ ಮುಖಂಡರು ಭೂಮಿಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದರು.

ಗ್ರಾಮೀಣ ಅಭಿವೃದ್ಧಿಗೆ ಹೊಸ ಸ್ಪರ್ಶ !: ಒಂದೇ ಯೋಜನೆಯಡಿ ಮೂರು ಗ್ರಾಮಗಳ ಪ್ರಮುಖ ಧಾರ್ಮಿಕ ಹಾಗೂ ಸಾರ್ವಜನಿಕ ಸ್ಥಳಗಳಿಗೆ ಒಟ್ಟು ₹45 ಲಕ್ಷ ಅನುದಾನ ದೊರೆತಿರುವುದು ಗ್ರಾಮಸ್ಥರಲ್ಲಿ ಸಂತಸ ಮೂಡಿಸಿದೆ. ದೇವಸ್ಥಾನಗಳ ಮೂಲಭೂತ ಸೌಕರ್ಯ ಅಭಿವೃದ್ಧಿ ಹಾಗೂ ಸಮುದಾಯ ಭವನ ನಿರ್ಮಾಣದಿಂದ ಧಾರ್ಮಿಕ ಕಾರ್ಯಕ್ರಮಗಳು, ಸಾರ್ವಜನಿಕ ಸಭೆ-ಸಮಾರಂಭಗಳು ಸೇರಿದಂತೆ ವಿವಿಧ ಚಟುವಟಿಕೆಗಳಿಗೆ ಅನುಕೂಲವಾಗಲಿದೆ.

ಗ್ರಾಮೀಣ ಪ್ರದೇಶಗಳ ಅಗತ್ಯತೆಗಳನ್ನು ಗುರುತಿಸಿ ಹಂತ ಹಂತವಾಗಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದ್ದು, ಜನರಿಗೆ ಅಗತ್ಯವಾದ ಮೂಲಸೌಕರ್ಯ ಕಲ್ಪಿಸುವುದೇ ಅಭಿವೃದ್ಧಿಯ ಪ್ರಮುಖ ಉದ್ದೇಶ ಎಂಬ ಸಂದೇಶದೊಂದಿಗೆ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ.

ಜನವಾಡದ ಶ್ರೀ ಸಿದ್ಧಾರೂಢ ದೇವಸ್ಥಾನ, ಸಂಕೋನಟ್ಟಿಯ ಶ್ರೀ ಬಸವೇಶ್ವರ ದೇವಸ್ಥಾನ ಹಾಗೂ ಕೊಟ್ಟಲಗಿಯ ಶ್ರೀ ಕೋರೆವ್ವ ತಾಯಿ ದೇವಸ್ಥಾನಕ್ಕೆ ಸಂಬಂಧಿಸಿದ ಕಾಮಗಾರಿಗಳು ಪೂರ್ಣಗೊಂಡ ಬಳಿಕ ಈ ಭಾಗದ ಸಾರ್ವಜನಿಕರು ಹಾಗೂ ಭಕ್ತರಿಗೆ ಮತ್ತಷ್ಟು ಉತ್ತಮ ಸೌಲಭ್ಯಗಳು ಲಭ್ಯವಾಗಲಿವೆ.

ವರದಿ - ಕಿರಣ ಪಾಟೋಳೆ
📲Get App